ಬೆಂಗಳೂರು: ನಬಾರ್ಡ್ ಗ್ರಾಮೀಣ ಹಬ್ಬವನ್ನು ನಗರದಲ್ಲಿ ಮಾರ್ಚ್ 10ರಿಂದ 14ರವರೆಗೆ ಆಯೋಜಿಸಲಾಗುತ್ತದೆ ಎಂದು ನಬಾರ್ಡ್ ಮುಖ್ಯ ಜನರಲ್ ಮ್ಯಾನೇಜರ್ ನೀರಜ್ ಕುಮಾರ್ ವರ್ಮ ತಿಳಿಸಿದರು.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಬಾರ್ಡ್ ಗ್ರಾಮೀಣ ಹಬ್ಬವನ್ನು ಮಂತ್ರಿ ಮಾಲ್‌ನಲ್ಲಿ ಆಯೋಜಿಸಲಾಗಿದೆ. ಈ ಹಬ್ಬದಲ್ಲಿ ನೇಕಾರರು, ಸ್ವಸಹಾಯ ಸಂಘಗಳು ಗ್ರಾಮೀಣ ಭಾಗದ ಕುಶಲಕರ್ಮಿಗಳು, ನೇಕಾರರು, ರೈತರು ಮತ್ತು ಬುಡಕಟ್ಟು ಜನಾಂಗದವರು ಆಗಮಿಸಿ ಐದು ದಿನಗಳವರೆಗೆ ತಮ್ಮ ಉತ್ಪನ್ನಗಳನ್ನು ಪ್ರದರ್ಶಿಸಿ, ಮಾರಾಟ ಮಾಡಬಹುದು ಎಂದರು.
ಗ್ರಾಮೀಣ ಹಬ್ಬದಲ್ಲಿ ಗ್ರಾಹಕ ಮತ್ತು ಉತ್ಪಾದಕನ ನಡುವೆ ಮಧ್ಯವರ್ತಿ ಇಲ್ಲದೇ ನೇರ ಮಾರುಕಟ್ಟೆ ಒದಗಿಸಲಾಗುವುದು ಎಂದು ಅವರು ತಿಳಿಸಿದರು.
ಇದನ್ನೂ ಓದಿ: ಸ್ಥಗಿತವಾಗದ ಗಣಿಗಾರಿಕೆ: ಸಚಿವ ಸೋಮಣ್ಣ ಸೂಚನೆ ಮಾಧ್ಯಮಗೋಷ್ಠಿಗಷ್ಟೇ ಸೀಮಿತವೇ?