ETV Bharat / state

ಗೋವಾ, ಕೇರಳದಿಂದ ಬರುವವರು RT-PCR ನೆಗೆಟಿವ್ ರಿಪೋರ್ಟ್ ತರಬೇಕಾಗಿಲ್ಲ: ಸರ್ಕಾರದಿಂದ ಸುತ್ತೋಲೆ - RT-PC is not mandatory for those coming from Goa and Kerala

ಪ್ರಸ್ತುತ COVID-19 ಪರಿಸ್ಥಿತಿಯ ದೃಷ್ಟಿಯಿಂದ ಗೋವಾ, ಕೇರಳ ರಾಜ್ಯಗಳಿಂದ ಏರ್ ಪೋರ್ಟ್, ರೈಲ್ವೆ, ರಸ್ತೆ ಸಾರಿಗೆ ಹಾಗೂ ವೈಯಕ್ತಿಕ ವಾಹನಗಳಲ್ಲಿ ಬರುವವರು RT-PCR ನೆಗೆಟಿವ್ ರಿಪೋರ್ಟ್ ತರುವ ಅವಶ್ಯಕತೆ ಇಲ್ಲ ಎಂದು ಸರ್ಕಾರ ಸುತ್ತೋಲೆ ಹೊರಡಿಸಿದೆ.

RT-PCR Negative Report
RT-PCR ನೆಗೆಟಿವ್ ರಿಪೋರ್ಟ್
author img

By

Published : Feb 17, 2022, 5:10 PM IST

ಬೆಂಗಳೂರು: ಕೊರೊನಾ ಮೂರನೇ ಅಲೆ ಹಿನ್ನೆಲೆ ಗೋವಾ, ಕೇರಳ, ಮಹಾರಾಷ್ಟ್ರ ಸೇರಿದಂತೆ ರಾಜ್ಯದ ಗಡಿಭಾಗದಿಂದ ಬರುವವರಿಗೆ ಆರ್​ಟಿ-ಪಿಸಿಆರ್​ ನೆಗೆಟಿವ್​ ರಿಪೋರ್ಟ್​ ತರುವುದನ್ನು ಖಡ್ಡಾಯ ಮಾಡಲಾಗಿತ್ತು. ಆದ್ರೀಗ ಆ ನಿಯಮ ತೆಗೆದು ಹಾಕಲಾಗಿದೆ.

ಸರ್ಕಾರದ ಸುತ್ತೋಲೆ
ಸರ್ಕಾರದ ಸುತ್ತೋಲೆ

ಕೊರೊನಾ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆ ಆಗುತ್ತಿದ್ದರಿಂದ ರಾಜ್ಯದ ಗಡಿಭಾಗದಲ್ಲಿ ಕಟ್ಟೆಚ್ಚರ ವಹಿಸಲಾಗಿತ್ತು.‌ ಪ್ರಮುಖವಾಗಿ ಗೋವಾ, ಕೇರಳ, ಮಹಾರಾಷ್ಟ್ರ ಸೇರಿದಂತೆ ಈ ಭಾಗದಿಂದ ಬರುವವರು ಕೋವಿಡ್ ನೆಗೆಟಿವ್ ರಿಪೋರ್ಟ್ ತರುವುದು ಕಡ್ಡಾಯವಾಗಿತ್ತು.‌ ಇದೀಗ ಸೋಂಕಿತರ ಸಂಖ್ಯೆ ದಿನೇ ದಿನೇ ಇಳಿಕೆಯಾಗುತ್ತಿರುವ ಹಿನ್ನೆಲೆ ಹಂತ ಹಂತವಾಗಿ ವಿಧಿಸಿದ್ದ ಎಲ್ಲ ನಿರ್ಬಂಧಗಳನ್ನು ತೆಗೆಯಲಾಗುತ್ತಿದೆ.

ಇದನ್ನೂ ಓದಿ: ಹಿಜಾಬ್ ಪ್ರಕರಣ: ನಿಯಮಾನುಸಾರ ಸಲ್ಲಿಸದ ಅರ್ಜಿ ವಜಾ ಮಾಡಿದ ಕೋರ್ಟ್​.. ವಿಚಾರಣೆ ನಾಳೆಗೆ ಮುಂದೂಡಿಕೆ

ರಾಜ್ಯ ಕೋವಿಡ್​-19 TAC ನ 155 ನೇ ಸಭೆಯಲ್ಲಿ ತಜ್ಞರ ಸಲಹೆಯಂತೆ RT-PCR ನೆಗೆಟಿವ್ ರಿಪೋರ್ಟ್ ತರುವ ಅವಶ್ಯಕತೆ ಇಲ್ಲ ಹೇಳಲಾಗಿದೆ. ಪ್ರಸ್ತುತ COVID-19 ಪರಿಸ್ಥಿತಿಯ ದೃಷ್ಟಿಯಿಂದ ಗೋವಾ, ಕೇರಳ ರಾಜ್ಯಗಳಿಂದ ಏರ್ ಪೋರ್ಟ್, ರೈಲ್ವೆ, ರಸ್ತೆ ಸಾರಿಗೆ ಹಾಗೂ ವೈಯಕ್ತಿಕ ವಾಹನಗಳಲ್ಲಿ ಬರುವವರು ರಿಪೋರ್ಟ್ ತರುವ ಅವಶ್ಯಕತೆ ಇಲ್ಲ. ಆದರೆ ಗೋವಾ, ಕೇರಳ ರಾಜ್ಯಗಳಿಂದ ಬರುವವರು ಎರಡು ಡೋಸ್ ಲಸಿಕೆ ಹಾಕಿಸಿಕೊಂಡ ಪ್ರಮಾಣಪತ್ರವನ್ನು ತೋರಿಸಬೇಕಿದ್ದು, ಇದನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು ಅಂತ ಸೂಚಿಸಲಾಗಿದೆ.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.