ಬೆಂಗಳೂರು: NCB ಕಾರ್ಯಾಚರಣೆ ನಡೆಸಿ ಕ್ರಿಕೆಟ್ ಸಾಮಗ್ರಿಗಳಲ್ಲಿ ರಾಜ್ಯದಿಂದ ವಿದೇಶಕ್ಕೆ ಸಾಗಿಸುತ್ತಿದ್ದ ಮಾದಕವಸ್ತು ಜಪ್ತಿ ಮಾಡಿದೆ.
ಒಟ್ಟು 515 ಗ್ರಾಂ ಆಂಫೆಟಮೈನ್ ಜಪ್ತಿ ಮಾಡಿ, ಒಬ್ಬ ಆರೋಪಿಯನ್ನ ಬಂಧಿಸಲಾಗಿದೆ. ಬೆಂಗಳೂರಿನಿಂದ ಕತಾರ್ಗೆ 20 ಲಕ್ಷ ಮೌಲ್ಯದ ಮಾದಕ ವಸ್ತು ಸಾಗಣೆಗೆ ಯತ್ನಿಸಲಾಗಿತ್ತು. ಕಾಸರಗೋಡು ಮೂಲದ ನಾಶತ್ ಎಂಬುವರ ಹೆಸರಿನಲ್ಲಿ ಈ ಪಾರ್ಸೆಲ್ ಬಂದಿತ್ತು.
ಕತಾರ್ನ ದೋಹ ನಿವಾಸಿ ಕುಜಿಯಾಲ್ ವಿಳಾಸಕ್ಕೆ ಈ ಪಾರ್ಸೆಲ್ ಬುಕ್ ಆಗಿತ್ತು. ಇದೀಗ ಪಾರ್ಸಲ್ ಮಾಡಿದ್ದ ಆರೋಪಿ ನಾಶತ್ನನ್ನು ಮಂಗಳೂರಿನಲ್ಲಿ NCB ಅಧಿಕಾರಿಗಳು ಬಂಧಿಸಿದ್ದಾರೆ.