ETV Bharat / state

ಬೆಂಗಳೂರಿನ ರಾಜಕಾಲುವೆಗಳ ಅಭಿವೃದ್ಧಿಗೆ 1,600 ಕೋಟಿ ರೂ. ವೆಚ್ಚದ ಡಿಪಿಆರ್: ಸಿಎಂ

author img

By

Published : May 19, 2022, 3:10 PM IST

ಬೆಂಗಳೂರಿಗೆ ಸ್ಥಳೀಯ ಸಚಿವರೇ ಜಿಲ್ಲಾ ಉಸ್ತುವಾರಿ ಆಗದಿರುವುದರಿಂದ ಸಮಸ್ಯೆ ಪರಿಹಾರ ವಿಳಂಬವಾಗುತ್ತಿದೆ ಎನ್ನುವ ಆರೋಪ ಸರಿಯಲ್ಲ ಎಂದು ಸಿಎಂ ಬೊಮ್ಮಾಯಿ ಹೇಳಿದ್ದಾರೆ.

CM Basavaraj Bommai
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಬೆಂಗಳೂರು: ಬೆಂಗಳೂರಿನಲ್ಲಿ ಮಳೆಯಿಂದ ಆಗುವ ಅನಾಹುತಗಳನ್ನು ತಪ್ಪಿಸಲು ರಾಜಕಾಲುವೆಗಳ ಅಭಿವೃದ್ಧಿ ಅಗತ್ಯವಿದ್ದು, ಎಲ್ಲ ಕಾಲುವೆಗಳನ್ನು ಸರಿ ಮಾಡಲು 1600 ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿದೆ. ಇದಕ್ಕೆ ಡಿಪಿಆರ್ ಮಾಡಿ ಆದಷ್ಟು ಬೇಗ ಕೆಲಸ ಪ್ರಾರಂಭಿಸುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಇಂದು ಬೆಳಗ್ಗೆ ಮಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಿದ ನಂತರ ಗೃಹ ಕಚೇರಿ ಕೃಷ್ಣಾದಲ್ಲಿ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, ಕಡಿಮೆ ಅವಧಿಯಲ್ಲಿ ಹೆಚ್ಚು ಮಳೆ ಆಗಿದೆ. ಕಳೆದ ನಲವತ್ತು ವರ್ಷಗಳಲ್ಲೇ ಈ ರೀತಿ ಮಳೆ ಇದೇ ಮೊದಲು ಬಂದಿದೆ‌. ಇದರಿಂದ ಬಹಳ ಜನರಿಗೆ ತೊಂದರೆಯಾಗಿದೆ. ಮೇ ತಿಂಗಳಲ್ಲಿ 15 ದಿನ ಬರಬೇಕಾದ ಮಳೆ, ಒಂದೇ ದಿನದ ನಾಲ್ಕು ಗಂಟೆಯಲ್ಲಿ ಸುರಿದಿದೆ ಎಂದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಇದನ್ನೂ ಓದಿ: 2ನೇ ದಿನವೂ ಸಿಎಂ ಬೆಂಗಳೂರು ರೌಂಡ್ಸ್‌​: ಮಳೆ ಹಾನಿ ಪ್ರದೇಶಗಳ ಪರಿಶೀಲನೆ, ಪರಿಹಾರದ ಭರವಸೆ

ಮಳೆಯಿಂದಲೂ ಕಾಮಗಾರಿಗಳಿಗೆ ಅಡ್ಡಿಯಾಗುತ್ತಿದೆ. ಆರೇಳು ವ್ಯಾಲಿಗಳನ್ನು ಸಮಗ್ರವಾಗಿ ಅಭಿವೃದ್ಧಿ ಪಡಿಸಲು ಕ್ರಮ ಕೈಗೊಳ್ಳುತ್ತೇವೆ. ಈಗಾಗಲೇ ಡಿಪಿಆರ್ ಸಿದ್ಧತೆ ಮಾಡಲಾಗುತ್ತಿದೆ. ಇದಕ್ಕೆ 1,600 ಕೋಟಿ ರೂ. ಡಿಪಿಆರ್​ಗೆ ಶೀಘ್ರವೇ ಅನುಮೋದನೆ ಸಿಗಲಿದ್ದು, ಬಳಿಕ ವ್ಯಾಲಿಗಳ ಅಭಿವೃದ್ಧಿ ಕಾರ್ಯ ಕೈಗೊಳ್ಳುತ್ತೇವೆ. ತುರ್ತಾಗಿ ರಾಜಾಕಾಲುವೆಗಳ ಹೂಳು ತೆಗೆಯಲು ಸೂಚಿಸಿದ್ದೇವೆ ಎಂದು ಸಿಎಂ ತಿಳಿಸಿದರು.

ಅಗತ್ಯ ರೇಷನ್ ಪೂರೈಕೆ: ಹೆಬ್ಬಾಳ ಎಸ್‌ಟಿಪಿ ಈಗ 100 ಎಂಎಲ್‌ಡಿ ಸಾಮರ್ಥ್ಯ ಇದ್ದು, ಹೆಚ್ಚುವರಿಯಾಗಿ 60 ಎಂಎಲ್‌ಡಿ ಘಟಕ ಸ್ಥಾಪಿಸಲು ಕ್ರಮ ಕೈಗೊಳ್ಳಲಾಗುತ್ತದೆ. ಮಹಾಲಕ್ಷ್ಮಿ ಲೇಔಟ್​ನಲ್ಲಿ ಹಲವು ಮನೆಗಳಿಗೆ ನುಗ್ಗಿದ ನೀರು ಹೊರಗೆ ಪಂಪ್ ಮಾಡಿ ತೆಗೆಯಲಾಗಿದೆ. ಇಂದಿನಿಂದಲೇ 25 ಸಾವಿರ ರೂ. ಪರಿಹಾರ ವಿತರಣೆ ಜೊತೆಗೆ ಆ ಮನೆಗಳಿಗೆ ಅಗತ್ಯ ರೇಷನ್ ಪೂರೈಸುತ್ತೇವೆ ಎಂದು ಸಿಎಂ ಹೇಳಿದರು.

ಚರಂಡಿಗಳಲ್ಲಿ ಮಳೆ ನೀರು ಸರಾಗವಾಗಿ ಹರಿದುಹೋಗುವಂತೆ ಕಾಮಗಾರಿ ನಡೆಸಲಾಗುತ್ತಿದೆ. ರಾಜಾಕಾಲುವೆ ಪಕ್ಕ ಒತ್ತುವರಿಗಳನ್ನು ತೆರವುಗೊಳಿಸಬೇಕಿದೆ. ಭವಿಷ್ಯದಲ್ಲಿ ಮಳೆನೀರು ನುಗ್ಗಿ ಹಾನಿಯಾಗದಂತೆ ತಡೆಯಲು ಎಲ್ಲ ರೀತಿಯ ಕ್ರಮಗಳನ್ನೂ ಸರ್ಕಾರ ಕೈಗೊಳ್ಳಲಿದೆ. ಹಂತ ಹಂತವಾಗಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುತ್ತದೆ ಎಂದರು.

ಎಸ್.ಎಂ.ಕೃಷ್ಣ ಸಲಹೆ ಪರಿಗಣನೆ: ಮಳೆ ಸಮಸ್ಯೆ ವಿಷಯವಾಗಿ ಮಾಜಿ ಮುಖ್ಯಮಂತ್ರಿ ಎಸ್​.ಎಂ. ಕೃಷ್ಣ ಅವರು ಬರೆದ ಸಲಹಾ ಪತ್ರದ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಸಿಎಂ, ಕೃಷ್ಣ ಅವರ ಸಲಹೆಗಳನ್ನು ಖಂಡಿತ ಪರಿಗಣಿಸುತ್ತೇವೆ. ಅವರ ಕಾಳಜಿ ಬಗ್ಗೆ ಗೌರವ ಇದೆ. ಅವರ ಅವಧಿಯಲ್ಲಿ ಉತ್ತಮ ಕೆಲಸಗಳಾಗಿವೆ. ಆದರೆ, ಈಗ ಜನಸಂಖ್ಯೆ ಹೆಚ್ಚಾಗಿದೆ, ಸವಾಲುಗಳೂ ದೊಡ್ಡದಾಗಿವೆ. ಆವತ್ತಿನ ಬೆಂಗಳೂರಿಗೂ ಇವತ್ತಿನ ಬೆಂಗಳೂರಿಗೂ ವ್ಯತ್ಯಾಸ ಇದೆ ಎಂದು ಹೇಳಿದರು.

ಇದನ್ನೂ ಓದಿ: ಮಳೆ ಅವಾಂತರ: 'ಬೆಂಗಳೂರು ಬ್ರ್ಯಾಂಡ್' ಉಳಿಸಿಕೊಳ್ಳಲು ಸಿಎಂಗೆ ಎಸ್.ಎಂ.ಕೃಷ್ಣ ಸಲಹೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.