ಬೆಂಗಳೂರು : ಸೌತ್ ಸಿನಿಮಾ ಇಂಡಸ್ಟ್ರಿ ಅಲ್ಲದೇ ಇಡೀ ಭಾರತೀಯ ಚಿತ್ರರಂಗ ಎದುರು ನೋಡುತ್ತಿದ್ದ ಬಹು ನಿರೀಕ್ಷಿತ ಆರ್ಆರ್ಆರ್ ಸಿನಿಮಾ ಕರ್ನಾಟಕದಲ್ಲಿ 400ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿದೆ. ಕನ್ನಡ ಡಬ್ಬಿಂಗ್ ವರ್ಷನ್ 100ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿದೆ. ತೆಲುಗು ಚಿತ್ರರಂಗದ ಕ್ರಿಯೇಟಿವ್ ಡೈರೆಕ್ಟರ್ ಎಸ್ ಎಸ್ ರಾಜಮೌಳಿ ನಿರ್ದೇಶನದ ರಾಮ್ ಚರಣ್ ತೇಜಾ ಹಾಗೂ ಜೂನಿಯರ್ ಎನ್‌ಟಿಆರ್ ಅಭಿನಯದ ಹೈವೋಲ್ಟೇಜ್ ಚಿತ್ರವಾಗಿರೋ ಆರ್ಆರ್ಆರ್ ಚಿತ್ರಕ್ಕೆ ರಾಜ್ಯಾದ್ಯಂತ ಭರ್ಜರಿ ಓಪನಿಂಗ್ ಸಿಕ್ಕಿದೆ.
ಆದರೆ, ಆರ್ಆರ್ಆರ್ ಸಿನಿಮಾ ನೋಡಲು ಬಂದ ಅಭಿಮಾನಿಗಳಿಗೆ ಒಂದು ಕ್ಷಣ ಶಾಕ್ ಆಗಿದ್ದಂತು ನಿಜ. ಯಾಕೆಂದರೆ, ತೆಲುಗು, ಹಿಂದಿ, ತಮಿಳು,ಮಲೆಯಾಳಂ ಹಾಗೂ ಕನ್ನಡ ಅವತರಣಿಕೆಯ ಸಿನಿಮಾಗೆ ಒಂದೊಂದು ರೀತಿಯ ಟಿಕೆಟ್ ಬೆಲೆ ಇದೆ. ಅದರಲ್ಲಿ ತೆಲುಗು, ತಮಿಳು, ಹಿಂದಿ,ಮಲೆಯಾಳಂ ವರ್ಷನ್ ಸಿನಿಮಾಗೆ 700 ರೂಪಾಯಿಂದ 1 ಸಾವಿರಾರು ರೂಪಾಯಿಗೆ ಟಿಕೆಟ್ ಬೆಲೆ ಇದೆ. ಮಲ್ಟಿಪ್ಲೆಕ್ಸ್‌ಗಳಲ್ಲೂ 700 ರಿಂದ 1000 ಸಾವಿರವರಗೆ ಟಿಕೆಟ್ ಬೆಲೆ ಹೆಚ್ಚಿಸಲಾಗಿದೆ. ಕನ್ನಡ ವರ್ಷನ್ ಆರ್ಆರ್ಆರ್ ಸಿನಿಮಾಗೂ 250 ರೂಪಾಯಿ ಮಾಡಲಾಗಿದೆ.
ಕೆಜಿರಸ್ತೆಯಲ್ಲಿರೋ ಅನುಪಮ ಚಿತ್ರಮಂದಿರದಲ್ಲಿ ಆರ್ಆರ್ಆರ್ ಸಿನಿಮಾ ಬಿಡುಗಡೆ ಮಾಡಲಾಗಿದೆ. ಒಂದು ಕಡೆ ಟಿಕೆಟ್ ಬೆಲೆ ಜಾಸ್ತಿ ಆಗಿರೋ ಕಾರಣ ಸಿನಿಮಾ ಪ್ರಿಯರು ಕೂಡ ಅಷ್ಟೊಂದು ಬಂದಿರಲಿಲ್ಲ. ಸಿನಿಮಾದಲ್ಲಿ ರಾಮ್ ಚರಣ್ ತೇಜಾ ಹಾಗೂ ಜೂನಿಯರ್ ಎನ್‌ಟಿಆರ್ ಸ್ನೇಹ ಹಾಗೂ ದೇಶಾಭಿಮಾನ ನೋಡಿದ ಅಭಿಮಾನಿಗಳು ಫಿದಾ ಆಗಿದ್ದಾರೆ. ಅದ್ದೂರಿ ಮೇಕಿಂಗ್ನಿಂದ ಮೂಡಿಬಂದ ಆರ್ಆರ್ಆರ್ ಸಿನಿಮಾವನ್ನು ನೋಡಿ ಅಭಿಮಾನಿಗಳು ಬಹಳ ಚೆನ್ನಾಗಿ ಇದೆ ಅಂತಾ ಹೇಳಿದ್ರೆ, ಸಿನಿಮಾ ಅಭಿಮಾನಿಯೊಬ್ಬ ಟಿಕೆಟ್ ಬೆಲೆ ಜಾಸ್ತಿ ಅಂತಾ ಹೇಳುವ ಮೂಲಕ ಅಸಮಾಧಾನ ಹೊರ ಹಾಕಿದ್ದಾರೆ.
ಇದನ್ನೂ ಓದಿ: ಗಂಗಾವತಿಯಲ್ಲಿ 'ಆರ್ಆರ್ಆರ್' ಭರ್ಜರಿ ಪ್ರದರ್ಶನ : ಒಂದು ಟಿಕೆಟ್ ದರ 500 ರೂ.