ETV Bharat / state

ಆರ್​ ​​ಆರ್ ನಗರದಲ್ಲಿ ಚುನಾವಣಾ ಅಕ್ರಮದ ಜಾಡು: ಜಿದ್ದಿಗೆ ಬಿದ್ದ ಪಕ್ಷಗಳಿಂದ ದೂರು - ಪ್ರತಿದೂರು

author img

By

Published : Oct 27, 2020, 7:10 PM IST

ವಿಧಾನಸಭೆ ಉಪಚುನಾವಣೆ ಕಣ ರಂಗೇರುತ್ತಿದೆ. ಅದರಲ್ಲೂ ಆರ್​ ಆರ್​ ನಗರ ಕ್ಷೇತ್ರ ಪ್ರತಿಷ್ಠೆಯ ಕಣವಾಗಿದ್ದು, ಮೂರು ಪಕ್ಷಗಳೂ ಅಬ್ಬರದ ಪ್ರಚಾರ ನಡೆಸಿವೆ. ಈ ನಡುವೆ ಕಣದಲ್ಲಿ ಚುನಾವಣಾ ಅವ್ಯವಹಾರ ಸಂಬಂಧ ದೂರು ಪ್ರತಿ ದೂರು ದಾಖಲಾಗುತ್ತಿದ್ದು, ಅಕ್ರಮಗಳಿಗೆ ಕಡಿವಾಣ ಹಾಕಲು ಯಶಸ್ವಿಯಾಗ್ತಾರಾ ಎಂಬ ಪ್ರಶ್ನೆ ಮೂಡಿದೆ.

RR NAGAR Bypolls
ಆರ್​​ಆರ್ ನಗರ ಉಪಚುನಾವಣೆ

ಬೆಂಗಳೂರು: ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರ 2018ರ ಸಾರ್ವತ್ರಿಕ ಚುನಾವಣೆ ಹಲವು ವಿವಾದಗಳಿಗೆ ತುತ್ತಾಗಿತ್ತು. ಅದರಲ್ಲೂ ನಕಲಿ ಮತದಾರರ ಗುರುತಿನ ಚೀಟಿ ಪ್ರಕರಣ ಕ್ಷೇತ್ರದ ಗೌರವ ಮಣ್ಣುಪಾಲು ಮಾಡಿತ್ತಲ್ಲದೇ, ಸುದೀರ್ಘ ಕಾನೂನು ಹೋರಾಟಕ್ಕೂ ಕಾರಣವಾಗಿತ್ತು. ಪ್ರಸಕ್ತ ಉಪಚುನಾವಣೆಯಲ್ಲೂ ಅಭ್ಯರ್ಥಿಗಳು ಮತದಾರರಿಗೆ ಆಮಿಷ ಒಡ್ಡುವ ವಿಚಾರವಾಗಿ ಪರಸ್ಪರ ದೂರು ಪ್ರತಿ ದೂರು ದಾಖಲಿಸಿಕೊಂಡಿರುವುದನ್ನು ಗಮನಿಸಿದಾಗ ಈ ಬಾರಿ ಅಧಿಕಾರಿಗಳು ಅಕ್ರಮಗಳಿಗೆ ಬ್ರೇಕ್ ಹಾಕುತ್ತಾರಾ ಎಂಬ ಪ್ರಶ್ನೆ ಕಾಡುತ್ತಿದೆ.

ನಕಲಿ ಗುರುತಿನ ಚೀಟಿ ಪ್ರಕರಣ

2018ರ ಸಾರ್ವತ್ರಿಕ ಚುನಾವಣೆ ಸಂದರ್ಭದಲ್ಲಿ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಜಾಲಹಳ್ಳಿಯಲ್ಲಿ ಮುನಿರತ್ನ ಬೆಂಬಲಿಗರೆನ್ನಲಾದ ವ್ಯಕ್ತಿಯೊಬ್ಬರ ಅಪಾರ್ಟ್​​​ಮೆಂಟ್​​​​ನಲ್ಲಿ 9 ಸಾವಿರಕ್ಕೂ ಅಧಿಕ ಮತದಾರರ ಗುರುತಿನ ಚೀಟಿಗಳು ಪತ್ತೆಯಾಗಿದ್ದವು. ಜತೆಗೆ ಮುನಿರತ್ನ ಸ್ಪರ್ಧಿಸಿದ್ದ ಪಕ್ಷದ ಶಾಲು, ಕರಪತ್ರ ಸೇರಿದಂತೆ ಹಲವು ಪರಿಕರಗಳು ಪತ್ತೆಯಾಗಿದ್ದವು. ಈ ಸಂಬಂಧ ಚುನಾವಣಾ ಆಯೋಗದ ಅಧಿಕಾರಿಗಳು ಹಾಗೂ ಸ್ಥಳೀಯರಾದ ರಾಕೇಶ್ ಎಂಬುವವರು ಪ್ರತ್ಯೇಕವಾಗಿ ಜಾಲಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಸ್ಥಳೀಯ ಪೊಲೀಸರು ಸರಿಯಾಗಿ ವಿಚಾರಣೆ ನಡೆಸುತ್ತಿಲ್ಲ ಎಂದು ಆರೋಪಿಸಿದ್ದ ದೂರುದಾರರು ಸಿಬಿಐ ತನಿಖೆಗೆ ಕೋರಿ ಹೈಕೋರ್ಟ್​​​ಗೆ ಅರ್ಜಿ ಸಲ್ಲಿಸಿದ್ದರು.

ಅನರ್ಹಗೊಂಡಿದ್ದರು ಮುನಿರತ್ನ

ಈ ನಡುವೆ ಇದೇ ವಿಚಾರವನ್ನು ಮುಂದಿಟ್ಟುಕೊಂಡು ಬಿಜೆಪಿಯಿಂದ ಸ್ಪರ್ಧಿಸಿದ್ದ ತುಳಸಿ ಮುನಿರಾಜುಗೌಡ ಚುನಾವಣೆಯಲ್ಲಿ ಅಕ್ರಮ ನಡೆದಿದೆ. ಹೀಗಾಗಿ ಮುನಿರತ್ನ ಅವರ ಆಯ್ಕೆಯನ್ನು ಅಸಿಂಧುಗೊಳಿಸಿ, ಉಳಿದೆಲ್ಲವರಿಗಿಂತ ಹೆಚ್ಚು ಮತ ಪಡೆದಿರುವ ತಮ್ಮನ್ನು ಕ್ಷೇತ್ರದ ಶಾಸಕ ಎಂದು ಘೋಷಿಸುವಂತೆ ಕೋರಿ ಹೈಕೋರ್ಟ್​​​ಗೆ ರಿಟ್ ಅರ್ಜಿ ಸಲ್ಲಿಸಿದ್ದರು. ಇದೇ ಅವಧಿಯಲ್ಲಿ ಮುನಿರತ್ನ ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರಿದ್ದರಿಂದ ಅನರ್ಹಗೊಂಡು ಕ್ಷೇತ್ರ ಖಾಲಿಯಾಗಿತ್ತು.

ಅಂತಿಮವಾಗಿ ಮುನಿರಾಜು ಅವರ ಅರ್ಜಿ ವಿಚಾರಣೆ ನಡೆಸಿದ್ದ ನ್ಯಾ. ದೀಕ್ಷಿತ್ ಅವರಿದ್ದ ಪೀಠ ಅರ್ಜಿದಾರರ ಕೋರಿಕೆಗೆ ಪೂರಕ ಆಧಾರಗಳಿಲ್ಲ ಎಂದು ತಿರಸ್ಕರಿಸಿತ್ತು. ಜತೆಗೆ ಕ್ಷೇತ್ರಕ್ಕೆ ಚುನಾವಣೆ ನಡೆಸಲು ಅಡ್ಡಿಯಿಲ್ಲ ಎಂದು ತಿಳಿಸಿತ್ತು.

ಮುನಿರಾಜು ಅರ್ಜಿ ವಜಾ

ಹಠಕ್ಕೆ ಬಿದ್ದ ಮುನಿರಾಜುಗೌಡ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು. ಸುಪ್ರೀಂಕೋರ್ಟ್ ಕೂಡ ಹೈಕೋರ್ಟ್ ತೀರ್ಪನ್ನೇ ಎತ್ತಿ ಹಿಡಿದು ಮುನಿರಾಜು ಅರ್ಜಿ ವಜಾಗೊಳಿಸಿತು. ಇದರಿಂದಾಗಿ ಚುನಾವಣೆಗೆ ಇದ್ದ ಅಡ್ಡಿ ನಿವಾರಣೆಯಾಗಿ, ತಡವಾಗಿಯಾದರೂ ಕ್ಷೇತ್ರಕ್ಕೆ ಚುನಾವಣೆ ನಡೆಯುತ್ತಿದೆ.

ಇನ್ನು ಮುನಿರತ್ನ ಅವರ ಚುನಾವಣಾ ಅಕ್ರಮದ ಕುರಿತಂತೆ ಜನಪ್ರತಿನಿಧಿಗಳ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣಾ ವಿಶೇಷ ನ್ಯಾಯಾಲಯ ವಿಚಾರಣೆ ನಡೆಸುತ್ತಿದೆ. ಈ ವಿಚಾರವಾಗಿ ತೀರ್ಪು ಹೊರಬರಲು ಇನ್ನೂ ಕಾಲಾವಕಾಶ ಬೇಕಾಗಿದೆ.

ಅಕ್ರಮಕ್ಕೆ ಬೀಳಲಿದ್ಯಾ ಕಡಿವಾಣ?

ಇಷ್ಟೆಲ್ಲ ರಾದ್ಧಾಂತಗಳಿಗೆ ಕಾರಣವಾದ ಆರ್​ಆರ್ ನಗರ ಕ್ಷೇತ್ರದಲ್ಲಿ ಈ ಬಾರಿಯೂ ಚುನಾವಣಾ ಅಕ್ರಮಗಳಿಗೆ ಬ್ರೇಕ್ ಬಿದ್ದಂತೆ ಕಾಣುತ್ತಿಲ್ಲ. ಈ ಹಿಂದೆ ನಕಲಿ ಗುರುತಿನ ಚೀಟಿ ಸಂಗ್ರಹಿಸಿದ್ದ ಆರೋಪಕ್ಕೆ ಸಿಲುಕಿರುವ ಬಿಜೆಪಿ ಅಭ್ಯರ್ಥಿ ಮುನಿರತ್ನ ವಿರುದ್ಧ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಮತದಾರರಿಗೆ ಹಣದ ಆಮಿಷ ಒಡ್ಡಿದ ಆರೋಪದಡಿ ದೂರು ದಾಖಲಿಸಿದ್ದಾರೆ.

ಹಾಗೆಯೇ ಕ್ಷೇತ್ರದಲ್ಲಿ ಹಣ ಹಂಚಿಕೆ ಮಾಡಿದ ಆರೋಪದಡಿ ಕಾಂಗ್ರೆಸ್​ನ ವಿಧಾನ ಪರಿಷತ್ ಸದಸ್ಯ ನಾರಾಯಣಸ್ವಾಮಿ ವಿರುದ್ಧ ಬಿಜೆಪಿ ಕಾರ್ಯಕರ್ತ ಪುನೀತ್ ಎಂಬುವವರು ದೂರು ದಾಖಲಿಸಿದ್ದಾರೆ.

ಅಷ್ಟಕ್ಕೂ ಮುನಿರತ್ನ ವಿರುದ್ಧ ದಾಖಲಾಗಿರುವ ಎಫ್ಐಆರ್ ಅಧಿಕಾರಿಗಳು ಇಚ್ಚೆಯಿಂದ ದಾಖಲಿಸಿರುವುದಲ್ಲ. ಚುನಾವಣಾ ಅಕ್ರಮದಂತಹ ಗುರುತರ ಆರೋಪದ ಬಗ್ಗೆ ದೂರು ಸ್ವೀಕರಿಸಿದ್ದ ಯಶವಂತಪುರ ಠಾಣೆ ಪೊಲೀಸರು ಮೊದಲಿಗೆ ಎನ್​​ಸಿಆರ್ ದಾಖಲಿಸಿ ಕೈತೊಳೆದುಕೊಂಡಿದ್ದರು. ಇದರಿಂದ ಅಸಮಾಧಾನಗೊಂಡ ಕಾರ್ಯಕರ್ತರು ನ್ಯಾಯಾಲಯದಲ್ಲಿ ಪಿಸಿಆರ್ ಸಲ್ಲಿಸಿ, ನ್ಯಾಯಾಲಯ ಸೂಚನೆ ನೀಡಿದ ನಂತರ ಅನಿವಾರ್ಯ ಎಂಬಂತೆ ಅಕ್ಟೋಬರ್ 23ರ ಸಂಜೆ 6.15ಕ್ಕೆ ಮುನಿರತ್ನ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ಕೇವಲ 15 ನಿಮಿಷಗಳ ಬಳಿಕ ಕಾಂಗ್ರೆಸ್ ಮುಖಂಡರ ವಿರುದ್ಧ ಎಫ್ಐಆರ್ ದಾಖಲಾಗಿದೆ.

ಕೊಳೆಗೇರಿ ನಿವಾಸಿಗಳೇ ಟಾರ್ಗೆಟ್

4.60 ಲಕ್ಷ ಮತದಾರರು ಇರುವ ಆರ್​​​ಆರ್ ನಗರ ಕ್ಷೇತ್ರದಲ್ಲಿ ಅತೀ ಹೆಚ್ಚು ಮತದಾನ ನಡೆಯುವುದು ಕೊಳೆಗೇರಿ ನಿವಾಸಿಗಳಿಂದಲೇ ಎಂಬುದು ಗಮನಾರ್ಹ. ಈ ಹಿಂದೆ ಸಿಕ್ಕಂತ ನಕಲಿ ವೋಟರ್ ಐಡಿಗಳು ಕೂಡ ಕೊಳೆಗೇರಿ ನಿವಾಸಿಗಳ ವಿಳಾಸದಲ್ಲಿ ಇದ್ದಂತವು. ಇಂತಹ ಪ್ರದೇಶಗಳಿಲ್ಲಿರುವ ಜನರಿಗೆ ಅಭ್ಯರ್ಥಿಗಳು ಈಗಾಗಲೇ ಡಿಟಿಎಚ್, ದಿನಸಿ, ಗೃಹೋಪಯೋಗಿ ವಸ್ತುಗಳು, ಹಣ ಹಂಚಿಕೆ ಮಾಡುತ್ತಿರುವ ಆರೋಪ ಕೇಳಿ ಬಂದಿದೆ.

ಈ ಸಂಬಂಧ ಪರಸ್ಪರ ದೂರು ದಾಖಲಾಗಿದೆ. ಕ್ಷೇತ್ರದಲ್ಲಿ ಅಕ್ರಮ ಹೆಚ್ಚುತ್ತಿದೆ ಎಂಬ ಕಾರಣಕ್ಕಾಗಿಯೇ ಎಎಪಿ ಕಾರ್ಯಕರ್ತರು, ಐಟಿ - ಇಡಿ ಇಲಾಖೆಗಳು ಕೂಡ ಈ ಸಂದರ್ಭದಲ್ಲಿ ಕಾರ್ಯಾಚರಣೆ ನಡೆಸಬೇಕು. ಚುನಾವಣೆ ಪಾರದರ್ಶಕವಾಗಿ ನಡೆಯಬೇಕು. ಇಲ್ಲದಿದ್ದರೆ ಚುನಾವಣೆಯನ್ನೇ ರದ್ದು ಮಾಡಿ ಎಂದು ಆಗ್ರಹಿಸಿದ್ದಾರೆ.

ಚುನಾವಣಾ ಆಯೋಗ ಸುಮ್ಮನಿದೆಯೇ?

ಈ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ ನಕಲಿ ಮತದಾನ ತಪ್ಪಿಸಲು ಹಾಗೂ ಚುನಾವಣಾ ಅಕ್ರಮಗಳನ್ನು ತಡೆಗಟ್ಟಲು ಹಲವು ಕ್ರಮಗಳನ್ನು ಜಾರಿ ಮಾಡಿದೆ. ಮೊದಲಿಗೆ ಕ್ಷೇತ್ರದ ಸರ್ಕಾರಿ ಅಧಿಕಾರಿಗಳನ್ನು ಚುನಾವಣೆಯಿಂದ ದೂರವಿಟ್ಟಿದೆ. ಈ ಜಾಗಕ್ಕೆ ಬೇರೆಡೆಯ ಅಧಿಕಾರಿಗಳನ್ನು ನಿಯೋಜಿಸಿದೆ. ಕಾನೂನು ಸುವ್ಯವಸ್ಥೆಗಷ್ಟೇ ಸ್ಥಳೀಯ ಪೊಲೀಸರು ಬಳಕೆಯಾಗುತ್ತಿದ್ದಾರೆ.

ಕ್ಷೇತ್ರದಲ್ಲಿ ಒಟ್ಟು 9 ಚೆಕ್ ಪೋಸ್ಟ್​ಗಳನ್ನು ತೆರೆದಿದ್ದು, ಪ್ರತಿ ಚೆಕ್ ಪೋಸ್ಟ್​ನಲ್ಲಿ ತಪಾಸಣೆಗಾಗಿ 5 ಮಂದಿ ಅಧಿಕಾರಿಗಳ ತಂಡಗಳನ್ನು ಮೂರು ಪಾಳಿಗಳಲ್ಲಿ ನಿಯೋಜಿಸಲಾಗಿದೆ. ಅದೇ ರೀತಿ ಕ್ಷೇತ್ರದಲ್ಲಿರುವ 9 ವಾರ್ಡ್​​ಗಳಲ್ಲಿಯೂ 3 ಪಾಳಿಯಲ್ಲಿ ಗಸ್ತು ತಿರುಗಲು 27 ಫ್ಲೈಯಿಂಗ್ ಸ್ಕ್ವಾಡ್ಸ್ ತಂಡಗಳನ್ನು ರಚಿಸಲಾಗಿದೆ. ಚುನಾವಣಾ ಆಯೋಗ ಏನೇ ಸೂಚನೆ ನೀಡಿದರೂ, ತಂಡಗಳನ್ನು ರಚಿಸಿದರೂ ಕರ್ತವ್ಯ ನಿರ್ವಹಿಸಬೇಕಿರುವುದು ಅಧಿಕಾರಿಗಳೇ ಆಗಿರುವುದರಿಂದ, ಇವರು ಎಷ್ಟರ ಮಟ್ಟಿಗೆ ಚುನಾವಣೆಯನ್ನು ಪಾರದರ್ಶಕವಾಗಿ ನಡೆಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.