ಬೆಂಗಳೂರು: ನವೆಂಬರ್ 3ರಂದು ನಡೆಯಲಿರುವ ರಾಜರಾಜೇಶ್ವರಿ ಕ್ಷೇತ್ರದ ಉಪಚುನಾವಣೆಯಲ್ಲಿ ಇದೀಗ ಹಣದ ಹೊಳೆ ಹರಿಯುತ್ತಿದೆ ಎಂಬ ಮಾತು ಗಂಭೀರವಾಗಿ ಕೇಳಿ ಬಂದಿದ್ದು, ಇದೇ ವಿಚಾರವಾಗಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದರು.
ಇದಕ್ಕೆ ಪೂರಕ ಎಂಬ ರೀತಿಯಲ್ಲಿ ಲಕ್ಷಾಂತರ ರೂಪಾಯಿ ಇಟ್ಟುಕೊಂಡು ಹೋಗುತ್ತಿದ್ದ ಯೂತ್ ಕಾಂಗ್ರೆಸ್ ಅಧ್ಯಕ್ಷರ ಕಾರು ಜಪ್ತಿ ಮಾಡಲಾಗಿದೆ.
ಆರ್.ಆರ್ ನಗರದಲ್ಲಿ ಬಿಜೆಪಿಗಿಂತ ವೇಗವಾಗಿ ಕಾಂಗ್ರೆಸ್ನಿಂದ ಹಣ ಹಂಚಿಕೆ: ಹೆಚ್ಡಿಕೆ ಆರೋಪ
ಆರ್ ಆರ್ ನಗರ ಚುನಾವಣೆ ಬಹಿರಂಗ ಪ್ರಚಾರ ಇಂದು ಸಂಜೆ ಅಂತ್ಯವಾಗಲಿದ್ದು, ಇದರ ಮಧ್ಯೆ ಮತದಾರರಿಗೆ ಹಣ ಆಮಿಷ ಕೆಲಸವಾಗುತ್ತಿದೆ. ಫ್ಲೈಯಿಂಗ್ ಸ್ಕ್ವ್ಯಾಡ್ನಿಂದ ಹಣ ಪತ್ತೆ ಹಚ್ಚಲಾಗಿದೆ. ಜಾಲಹಳ್ಳಿಯ ಹೆಚ್ಎಂಟಿ ಬಳಿಯ ಆಂಜನೇಯ ದೇವಸ್ಥಾನದ ಬಳಿ ಈ ಘಟನೆ ನಡೆದಿದೆ. ಆರ್ಆರ್ ನಗರ ಯೂತ್ ಕಾಂಗ್ರೆಸ್ನ ಶಿವಕುಮಾರ್ ಕಾರಿನಲ್ಲಿ 2 ಲಕ್ಷ ರೂ. ಪತ್ತೆಯಾಗಿದ್ದು, ಸದ್ಯ ಕಾರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.
ಕಾರಿನಲ್ಲಿ ಹಣ ಜೊತೆ ಕಾಂಗ್ರೆಸ್ ಶಾಲುಗಳಿದ್ದವು ಎಂದು ತಿಳಿದು ಬಂದಿದ್ದು, ಇದಕ್ಕೆ ಸಂಬಂಧಿಸಿದಂತೆ ಜಾಲಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.