ETV Bharat / state

ಆರ್​ಆರ್​ ನಗರ ಉಪಚುನಾವಣೆ: ಜೆಡಿಎಸ್​ಗೆ ಸಿಪಿಐ(ಎಂ) ಬೆಂಬಲ

ಆರ್​ಆರ್​ ನಗರ ಉಪಚುನಾವಣೆಯಲ್ಲಿ ಜನತಾ ದಳ ಅಭ್ಯರ್ಥಿಗೆ ಭಾರತ ಕಮ್ಯೂನಿಸ್ಟ್ ಪಕ್ಷ ಬೆಂಬಲ ಸೂಚಿಸಿ ಮತದಾರರು ಸಹಕರಿಸಬೇಕಾಗಿ ಮನವಿ ಮಾಡಿದೆ.

RR Nagar by election
ಆರ್​ಆರ್​ ನಗರ ಉಪಚುನಾವಣೆ
author img

By

Published : Oct 31, 2020, 7:29 PM IST

ಬೆಂಗಳೂರು: ನವೆಂಬರ್ 3 ರಂದು ನಡೆಯುತ್ತಿರುವ ಆರ್​ಆರ್​ ನಗರ ಕ್ಷೇತ್ರ ಉಪ ಚುನಾವಣೆಯಲ್ಲಿ ಜನತಾ ದಳ ಅಭ್ಯರ್ಥಿಗೆ ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್​​ವಾದಿ) ಬೆಂಗಳೂರು ಉತ್ತರ ಮತ್ತು ದಕ್ಷಿಣ ಜಿಲ್ಲಾ ಸಮಿತಿಗಳು ಬೆಂಬಲಿಸಿ, ಜೆಡಿಎಸ್ ಅಭ್ಯರ್ಥಿಗೆ ಮತ ನೀಡಿ ಬಿಜೆಪಿ ಸೋಲಿಸಿ ಪರ್ಯಾಯ ರೂಪಿಸಲು ಮತದಾರರು ಸಹಕರಿಸಬೇಕಾಗಿ ಸಿಪಿಐ(ಎಂ) ಮನವಿ ಮಾಡಿದೆ.

ಆಪರೇಷನ್ ಕಮಲ ಎಂಬ ಸಂಸದೀಯ ಪ್ರಜಾಪ್ರಭುತ್ವ ವಿರೋಧಿ ಕ್ರಮಕ್ಕೆ ಬಲಿಯಾದ ಹಾಲಿ ಬಿಜೆಪಿ ಅಭ್ಯರ್ಥಿ ಮಾಜಿ ಕಾಂಗ್ರೆಸ್ ಶಾಸಕರ ರಾಜಿನಾಮೆಯಿಂದ ಇಂತಹ ಮರು ಚುನಾವಣೆ ಬಂದೊದಗಿದೆ. ಆಪರೇಷನ್ ಕಮಲದಿಂದ ಅಧಿಕಾರ ಹಿಡಿದಿರುವ ಬಿಜೆಪಿ ಸರ್ಕಾರವು ಕೋವಿಡ್ ನಿಯಂತ್ರಿಸುವಲ್ಲಿ ಸಂಪೂರ್ಣ ವಿಫಲವಾಗಿದೆ. ಜನತೆಗೆ ಲಾಕ್​​​​​ಡೌನ್ ಸಂಕಷ್ಟಕ್ಕೆ ಪರಿಹಾರ ನೀಡದೇ ವಂಚಿಸಿದೆ. ಕೋವಿಡ್ ಪರಿಹಾರದಲ್ಲೂ ಭ್ರಷ್ಟಾಚಾರದಲ್ಲಿ ತೊಡಗಿದೆ ಎಂದು ತಿಳಿಸಿದೆ.

ಅಲ್ಲದೇ ಕೋವಿಡ್ ನೆಪದಲ್ಲಿ ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರ್ಕಾರಗಳು ಕಾರ್ಮಿಕ ವಿರೋಧಿ ರೈತ ವಿರೋಧಿ ತಿದ್ದುಪಡಿಗಳನ್ನು ಕಾರ್ಮಿಕ ಕಾನೂನುಗಳಿಗೆ ಮತ್ತು ಕೃಷಿ ಕಾನೂನುಗಳಿಗೆ ತಂದು ರೈತರು ಮತ್ತು ಕಾರ್ಮಿಕರಿಗೆ ಮಾರಕವಾಗಿ ಪರಿಣಮಿಸಿವೆ. ಬೆಲೆ ಏರಿಕೆ ನಿಯಂತ್ರಿಸುವಲ್ಲಿ, ಉದ್ಯೋಗ ಒದಗಿಸಲು ಸಂಪೂರ್ಣವಾಗಿ ವಿಫಲವಾಗಿವೆ. ಬಿಜೆಪಿ ಸರ್ಕಾರಗಳ ನೀತಿಗಳು ರಾಷ್ಟ್ರದ ಆರ್ಥಿಕತೆ ದಿವಾಳಿಯಾಗಿಸಿವೆ. ರಾಷ್ಟ್ರದ ಬುನಾದಿಯಾಗಿರುವ ಜಾತ್ಯತೀತತೆ, ಬಹುತ್ವ, ಒಕ್ಕೂಟ ವ್ಯವಸ್ಥೆಗೆ ಕೇಂದ್ರ ಬಿಜೆಪಿ ಸರ್ಕಾರವೂ ಗಂಡಾಂತರಕಾರಿಯಾಗಿದೆ ಎಂದಿದೆ.

ಹಾಗೇ ಜನತೆಯ ಆಸ್ತಿಯಾದ ರೈಲ್ವೆ, ಬ್ಯಾಂಕ್, ವಿಮೆ, ರಕ್ಷಣ ಉತ್ಪಾದನೆಯ ಮತ್ತು ಇತರ ಸಾರ್ವಜನಿಕ ಉದ್ದಿಮೆಗಳ ಖಾಸಗೀಕರಣಕ್ಕೆ ಬಿಜೆಪಿ ಸರ್ಕಾರ ಮುಂದಾಗಿದೆ. ರಾಜ್ಯದ ಜಿ.ಎಸ್.ಟಿ ಪಾಲು ಪರಿಹಾರ ನೀಡದೇ ರಾಜ್ಯವನ್ನು ಸಾಲದ ಬಲೆಗೆ ದೂಡಿದೆ. ಉತ್ತರ ಕರ್ನಾಟಕದ ಜನತೆಗೆ ನೆರೆ ಪರಿಹಾರ ನೀಡದೇ ವಂಚಿಸಿ ಇಂತಹ ಬೆಳವಣಿಗೆಗಳಿಗೆ ಕಾರಣವಾಗಿರುವ ಬಿಜೆಪಿಯ ಸೋಲು ಪ್ರಸ್ತುತ ಸಂದರ್ಭದಲ್ಲಿ ನಿರ್ಣಾಯಕವಾಗಿದೆ. ಆದ ಕಾರಣ ಬಿಜೆಪಿ ಅಭ್ಯರ್ಥಿಯನ್ನು ತಿರಸ್ಕರಿಸಬೇಕೆಂದು ಸಿಪಿಐ (ಎಂ) ನ ಬೆಂಗಳೂರು ದಕ್ಷಿಣ ಜಿಲ್ಲಾ ಸಮಿತಿ ಕಾರ್ಯದರ್ಶಿ ಕೆ.ಎನ್.ಉಮೇಶ್ ಹಾಗೂ ಬೆಂಗಳೂರು ಉತ್ತರ ಜಿಲ್ಲಾ ಸಮಿತಿ ಕಾರ್ಯದರ್ಶಿ ಎನ್. ಪ್ರತಾಪ್ ಸಿಂಹ ಅವರು ಮನವಿ ಮಾಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.