ಬೆಂಗಳೂರು: ಕ್ಷುಲ್ಲಕ ಕಾರಣಕ್ಕೆ ರೌಡಿ ಶೀಟರ್ ಸುರೇಶ್ನನ್ನು ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಕೊತ್ತನೂರು ಪೊಲೀಸರು ಬಂಧಿಸಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಮನ್, ದಿನಕರ್, ರಂಜಿತ್, ಮೋಹನ್ ಹಾಗೂ ಮೂವರು ಕಾನೂನು ಸಂಘರ್ಷಕ್ಕೆ ಒಳಪಟ್ಟ ಬಂಧಿತ ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ.
ಡಿ.ಜಿ ಹಳ್ಳಿಯ ನಿವಾಸಿ ಸುರೇಶ್ ಕುಟುಂಬ ಹಾಗೂ ಸುಮನ್ ಕುಟುಂಬದ ಮಧ್ಯೆ ನೀರಿನ ವಿಚಾರವಾಗಿ ಜಗಳ ಏರ್ಪಟ್ಟಿತ್ತು. ಇದರಿಂದ ರೊಚ್ಚಿಗೆದ್ದ ಸುಮನ್ ಉಪಾಯವಾಗಿ ಸುರೇಶ್ನನ್ನು ಪಾರ್ಟಿ ಕೊಡಿಸುವುದಾಗಿ ಕರೆಸಿ, ಹತ್ಯೆಗೈದಿದ್ದಾರೆ.