ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಉತ್ತರ ವಿಭಾಗದ ಪೊಲೀಸರು ರೌಡಿಶೀಟರ್ ಸ್ಲಂ ಭರತನ ಎನ್ಕೌಂಟರ್ ನಡೆಸಿದ ನಂತರ ಪಾತಕ ಲೋಕದ ಒಬ್ಬೊಬ್ಬರೇ ರೌಡಿಗಳು ಪೊಲೀಸರ ತುಪಾಕಿಗೆ ಹೆದರಿ ಸದ್ಯ ನ್ಯಾಯಾಲಯದ ಎದುರು ಶರಣಾಗ್ತಿದ್ದಾರೆ.
ಕಳೆದ ತಿಂಗಳು ಪಾತಕಿ ಸ್ಲಂ ಭರತ ಪೊಲೀಸರ ಗುಂಡೇಟಿಗೆ ಮಕಾಡೆ ಮಲಗಿದ್ದ. ಸ್ಲಂ ಭರತನ ಎನ್ಕೌಂಟರ್ನಿಂದ ಭಯ ಬಿದ್ದಿರುವ ರೌಡಿಗಳು, ಇದೀಗ ಸರೆಂಡರ್ ಆಗಲು ಶುರು ಮಾಡಿದ್ದಾರೆ. ನಿನ್ನೆ ಒಂದೇ ದಿನವೇ ಸ್ಲಂ ಭರತನ ಸಹಚರರು ಸೇರಿ ಐವರು ನ್ಯಾಯಾಲಯಕ್ಕೆ ಶರಣಾಗಿದ್ದಾರೆ. ಸ್ಲಂ ಮಧು, ಮುನಿರಾಜು ಅಲಿಯಾಸ್ ಕರಿಯಾ, ಸತೀಶ್ ಅಲಿಯಾಸ್ ತುರೆ, ವಿನಯ್ ಅಲಿಯಾಸ್ ಮಿಂಡ ಹಾಗೂ ಅಜಯ್ ಅಲಿಯಾಸ್ ಗಜ್ಜಿ ನ್ಯಾಯಾಲಯಕ್ಕೆ ಶರಣಾಗಿರುವ ಆರೋಪಿಗಳು.
ಇನ್ನು ಬಂಧಿತ ಆರೋಪಿಗಳ ಮೇಲೆ ಕೊಲೆ, ಕೊಲೆ ಯತ್ನ, ದರೋಡೆ ಹೀಗೆ ನಾನಾ ಪ್ರಕರಣಗಳು ದಾಖಲಾಗಿದ್ದು, ಸದ್ಯ ಉತ್ತರ ವಿಭಾಗ ಪೊಲೀಸರು ಐವರು ಆರೋಪಿಗಳನ್ನ ವಶಕ್ಕೆ ಪಡೆದು ತನಿಖೆ ನಡೆಸಲು ಮುಂದಾಗಿದ್ದಾರೆ.