ಬೆಂಗಳೂರು: ನಗರದ ಕೆ.ಜಿ.ಹಳ್ಳಿ ಬಳಿ ರೌಡಿಶೀಟರ್ ಓರ್ವ ಬರ್ಬರವಾಗಿ ಹತ್ಯೆಯಾಗಿರುವ ಘಟನೆ ಬೆಳಕಿಗೆ ಬಂದಿದೆ.
ಪ್ಲೈವುಡ್ ತಬರೇಜ್ ಹತ್ಯೆಯಾದ ರೌಡಿ ಶೀಟರ್. ವಿವಿಧ ಪ್ರಕರಣದಲ್ಲಿ ಭಾಗಿಯಾಗಿ ಪರಪ್ಪನ ಅಗ್ರಹಾರ ಜೈಲು ಸೇರಿದ್ದ ಈತ, ಕಳೆದ 10 ದಿನಗಳ ಹಿಂದೆಷ್ಟೆ ಬಿಡುಗಡೆಯಾಗಿದ್ದ. ಕಳೆದ ರಾತ್ರಿ ಬಿಟಿಎಂ ಲೇಔಟ್ನಲ್ಲಿ ಅಪರಿಚಿ ತ ವ್ಯಕ್ತಿಗಳು ಗುರುತು ಪತ್ತೆಯಾಗದ ರೀತಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿ ಎಸ್ಕೇಪ್ ಆಗಿದ್ದಾರೆ.
ಕೊಲೆಯಾದ ಪ್ಲೈವುಡ್ ತಬರೇಜ್ ಹಾಗೂ ರೌಡಿ ಶೀಟರ್ ಚಪ್ಪಡಿ ನದಿಂ ನಡುವೆ ಹಳೇ ದ್ವೇಷ ಇತ್ತು ಎನ್ನಲಾಗಿದ್ದು, ಈ ಕಾರಣದಿಂದ ಚಪ್ಪಡಿ ಹುಡುಗರೇ ಕೊಲೆ ಮಾಡಿರಬಹುದು ಎಂದು ಶಂಕಿಸಲಾಗಿದೆ. ಪೊಲೀಸರು ಈಗಾಗಲೇ ವಿಶೇಷ ತಂಡ ರಚನೆ ಮಾಡಿ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ. ಕೊಲೆಯಾದ ತಬರೇಜ್ ವಿರುದ್ಧ ನಗರದ ಹಲವು ಪೊಲೀಸ್ ಠಾಣೆಗಳಲ್ಲಿ ಕೊಲೆ, ಕೊಲೆಯತ್ನ, ಕಳ್ಳತನ, ಡಕಾಯಿತಿ ಪ್ರಕರಣಗಳಿರುವ ಬಗ್ಗೆ ತಿಳಿದು ಬಂದಿದೆ.