ETV Bharat / state

ಬೆಂಗಳೂರಿನಲ್ಲಿ ರೌಡಿಶೀಟರ್‌ ಕೊಲೆ ಪ್ರಕರಣ: ದುಷ್ಕರ್ಮಿಗಳ ಕೃತ್ಯ ಸಿಸಿಟಿವಿಯಲ್ಲಿ ಸೆರೆ - ಬೆಂಗಳೂರು ಕ್ರೈಂ ಸುದ್ದಿ

ಬಾಣಸವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇತ್ತೀಚೆಗೆ ರೌಡಿಶೀಟರ್​ ಹರೀಶ್​ ಎಂಬಾತನನ್ನು ಬರ್ಬರವಾಗಿ ಕೊಲೆ ಮಾಡಲಾಗಿತ್ತು. ಈ ಘಟನೆಯ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದೆ.

Harish Murder Case
ಮಾರಕಾಸ್ತ್ರದಿಂದ ಕೊಚ್ಚಿ ಕೊಲೆಗೈದ ದೃಶ್ಯ
author img

By

Published : Aug 8, 2021, 12:57 PM IST

ಬೆಂಗಳೂರು: ಇತ್ತೀಚೆಗೆ ಬಾಣಸವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರೌಡಿಶೀಟರ್ ಹರೀಶ್​ ಎಂಬಾತನನ್ನು ಐವರು ದುಷ್ಕರ್ಮಿಗಳು ಕೊಲೆ ಮಾಡಿದ್ದರು. ಈ ಪ್ರಕರಣ ಸಂಬಂಧ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದರು. ಇದೀಗ ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ವಿಡಿಯೋ ವೈರಲ್ ಆಗಿದೆ.

ಹಳೆ ದ್ವೇಷದ ಹಿನ್ನೆಲೆಯಲ್ಲಿ ರಕ್ಷಿತ್, ಅವಿನಾಶ್, ಇಂದ್ರಜಿತ್ ಸೇರಿದಂತೆ ಐವರು ಕಳೆದ ತಿಂಗಳು ಹರೀಶ್​ನನ್ನು ಕೊಲೆ ಮಾಡಿದ್ದರು.

ಘಟನೆಯ ಸಿಸಿಟಿವಿ ದೃಶ್ಯ

ಯಾವುದೋ ಪ್ರಕರಣ ಸಂಬಂಧ ಬಸವೇಶ್ವರ ನಗರ ನಿವಾಸಿಯಾಗಿದ್ದ ಹರೀಶ್​ನನ್ನು ಬಾಣಸವಾಡಿ ಠಾಣೆಗೆ ಬರುವಂತೆ ಪೊಲೀಸರು ಸೂಚಿಸಿದ್ದರು.‌ ಇದರಂತೆ ಠಾಣೆಗೆ ಜುಲೈ 27ರಂದು ಹರೀಶ್​ ಬಂದಿದ್ದ. ಈ ವೇಳೆ ರಕ್ಷಿತ್​ಗೆ ಕರೆ ಮಾಡಿದ್ದ ಹರೀಶ್​, "ನಿನ್ನ ಏರಿಯಾಗೆ ಬಂದಿದ್ದೇನೆ. ನನ್ನ ಕೈಗೆ ಸಿಕ್ಕರೆ ಹೊಡೆದು ಹಾಕುತ್ತೇನೆ" ಎಂದು ಅವಾಝ್​ ಹಾಕಿದ್ದನಂತೆ.

ಇದರಿಂದ ಕೋಪಗೊಂಡ ರಕ್ಷಿತ್, ಗ್ಯಾಂಗ್ ಕಟ್ಟಿಕೊಂಡು ಬಂದು ಹರೀಶ್​ಗಾಗಿ ಹುಡುಕಾಟ ನಡೆಸಿದ್ದಾನೆ. ಕೊನೆಗೆ ಪೊಲೀಸ್ ಠಾಣೆಯಿಂದ ಹೊರ ಬರುವ ವಿಚಾರ ತಿಳಿದು, ಹರೀಶ್ ಮೇಲೆ ಅಟ್ಯಾಕ್ ಮಾಡಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆ ಮಾಡಿದ್ದಾನೆ.

ಪ್ರಾಣ ಹೋದರೂ ತಣ್ಣಗಾಗದ ಕೋಪ: ರೌಡಿಶೀಟರ್ ಹರೀಶ್​ನನ್ನು ಕೊಲೆ ಮಾಡುವ ಉದ್ದೇಶದಿಂದ ರಕ್ಷಿತ್ ಗ್ಯಾಂಗ್ ಬಾಣಸವಾಡಿ ಸಿಎಂಆರ್ ಕಾಲೇಜು ಬಳಿ ಹೊಂಚು ಹಾಕಿ ಕುಳಿತಿತ್ತು. ಈ ವೇಳೆ ಹರೀಶ್ ಬೈಕ್​ನಲ್ಲಿ ಬರುತ್ತಿದ್ದಂತೆ ಏಕಾಏಕಿ ದಾಳಿ ಮಾಡಿದ ಗುಂಪು ಹತ್ಯೆ ಮಾಡಿದೆ. ಹರೀಶ್​ ಪ್ರಾಣ ಹೋದರೂ ಸಹ ಕೋಪ ತಣ್ಣಗಾಗದೆ, ರಕ್ಷಿತ್​ ತಂಡ ಮತ್ತೆ ಮತ್ತೆ ಮಚ್ಚಿನಿಂದ ಕೊಚ್ಚಿ ಹಾಕಿರುವುದು ವಿಡಿಯೋದಲ್ಲಿ ಕಂಟುಬರುತ್ತದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.