ETV Bharat / state

ಬೆಂಗಳೂರಲ್ಲಿ ಬೆಳ್ಳಂಬೆಳಗ್ಗೆ ಗುಂಡಿನ ಸದ್ದು: ರೌಡಿ ಶೀಟರ್ ಕಾಲಿಗೆ ಗುಂಡೇಟು - Rowdy Sheeter Avinash arrested by police

ಬೆಂಗಳೂರಿನ ಸಂಜಯ್ ನಗರ ಠಾಣೆ ಇನ್ಸ್​ಪೆಕ್ಟರ್ ಬಾಲ್​ರಾಜ್ ಅವರು ರೌಡಿ ಶೀಟರ್ ಅವಿನಾಶ್​ ಕಾಲಿಗೆ ಬೆಳಗ್ಗೆ ಗುಂಡು ಹಾರಿಸಿ ಬಂಧಿಸಿದ್ದಾರೆ.

Rowdy Sheeter Avinash
ರೌಡಿ ಶೀಟರ್ ಅವಿನಾಶ
author img

By

Published : Aug 21, 2021, 9:04 AM IST

ಬೆಂಗಳೂರು: ಬೆಳ್ಳಂಬೆಳಗ್ಗೆ ಕಾರ್ಯಾಚರಣೆ ನಡೆಸಿರುವ ಸಂಜಯ್ ನಗರ ಠಾಣೆ ಪೊಲೀಸರು ಕುಖ್ಯಾತ ರೌಡಿಶೀಟರ್​ ಅವಿನಾಶ್​ ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ.

ರಾಮಮೂರ್ತಿ ನಗರ ನಿವಾಸಿಯಾದ ರೌಡಿಶೀಟರ್ ಅವಿನಾಶ್, ಸಂಜಯ್ ನಗರ ಪೊಲೀಸ್​ ಠಾಣೆ ಸಿಬ್ಬಂದಿ ಸಂತೋಷ್ ಎಂಬುವರ ಮೇಲೆ ಹಲ್ಲೆ ನೆಡೆಸಿದ್ದ. ಈ ಹಿನ್ನೆಲೆಯಲ್ಲಿ ಸಂಜಯ್ ನಗರ ಠಾಣೆ ಇನ್ಸ್​ಪೆಕ್ಟರ್ ಬಾಲ್​ರಾಜ್ ನೇತೃತ್ವದಲ್ಲಿ ಪೊಲೀಸರು ಬೆಳಗ್ಗೆ ಕಾರ್ಯಚರಣೆ ನಡೆಸಿ, ಆರೋಪಿಯನ್ನು ಬಂಧಿಸಿದ್ದಾರೆ.

ಅಷ್ಟೇ ಅಲ್ಲದೆ, ಈ ಹಿಂದೆ ಕೂಡ ಮುನಿರಾಜು ಎಂಬಾತ ತನ್ನ ಹೆಂಡತಿ ಮಗುವಿನೊಂದಿಗೆ ಕೋವಿಡ್ ಲಸಿಕೆ ಹಾಕಿಸಿಕೊಳ್ಳಲು ತೆರಳುತ್ತಿದ್ದಾಗ ಅವಿನಾಶ್​ ಆ್ಯಂಡ್​ ಗ್ಯಾಂಗ್ ಹಲ್ಲೆ ಮಾಡಿದ್ದರು. ಈ ಕುರಿತು ಯಲಹಂಕ ಪೊಲೀಸ್ ಠಾಣೆ ದೂರು ದಾಖಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.