ಬೆಂಗಳೂರು: ಕೆಲ ದಿನಗಳ ಹಿಂದೆ ಇನ್ಸ್ಪೆಕ್ಟರ್ವೊಬ್ಬರಿಗೆ ಕಾರಿನಿಂದ ಡಿಕ್ಕಿ ಹೊಡೆಸಿ ಎಸ್ಕೇಪ್ ಆಗಿದ್ದ ರೌಡಿ ಸ್ಲಂ ಭರತ್ನನ್ನು ರಾಜಗೋಪಾಲ ಪೊಲೀಸರು ಉತ್ತರಪ್ರದೇಶದಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕೆಲ ದಿನಗಳ ಹಿಂದೆ ರೌಡಿ ಭರತ್ ಬರ್ತ್ ಡೇ ಪಾರ್ಟಿಗೆಂದು ತೆರಳಿದ ವೇಳೆ ಪೊಲೀಸರು ಬಂಧಿಸಲು ಮುಂದಾಗಿದ್ದರು. ಈ ವೇಳೆ ಎಸ್ಕೇಪ್ ಆಗುವ ಭರದಲ್ಲಿ ಭರತ್, ಇನ್ಸ್ಪೆಕ್ಟರ್ ಕಾರಿಗೆ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಎಂದು ದೂರು ದಾಖಲಾಗಿತ್ತು. ಅಲ್ಲದೆ ಕಾಮಾಕ್ಷಿಪಾಳ್ಯದ ಮಹೇಶನ ಮರ್ಡರ್ ಕೇಸ್ನಲ್ಲಿ ಕೂಡ ಇದೇ ಭರತ್ ಮಾಸ್ಟರ್ ಮೈಂಡ್ ಎಂದು ಪೊಲೀಸರು ಹೇಳುತ್ತಿದ್ದಾರೆ.
ತನ್ನ ಗುರು ಗುಂಡ ಸೂರಿ ಕೊಲೆಗೆ ಪ್ರತೀಕಾರವಾಗಿ ಮಹೇಶನ ಕೊಲೆ ಮಾಡಲಾಗಿತ್ತು. ಮಹೇಶನ ಕೊಲೆ ನಂತರ ಪೊಲೀಸರಿಗೆ ಆರೋಪಿಗಳಾದ ಕುಳ್ಳ ಸೀನಾ, ಸುರೇಶ್, ನಾಗರಾಜ, ಸಿದ್ದರಾಜ, ಈಶ್ವರ್ ಶರಣಾಗಿದ್ದರು. ಸ್ಲಂ ಭರತ್ ಮಾತ್ರ ನಾಪತ್ತೆಯಾಗಿದ್ದು, ಈತನನ್ನು ಪೊಲೀಸರು ಹುಡುಕುತ್ತಿದ್ದರು. ರೌಡಿ ಸ್ಲಂ ಭರತ್ ಉತ್ತರಪ್ರದೇಶದ ತನ್ನ ಗೆಳತಿಯ ಮನೆಯಲ್ಲಿ ವಾಸವಾಗಿದ್ದನಂತೆ. ಇದೀಗ ಭರತ್ನನ್ನು ಪೊಲೀಸರು ಬಂಧಿಸಿದ್ದಾರೆ.