ಬೆಂಗಳೂರು : ರಾಜ್ಯ ರಾಜಧಾನಿಯಲ್ಲಿ ರೌಡಿಶೀಟರ್ ಬರ್ಬರ ಹತ್ಯೆ ನಡೆದಿದೆ. ರವಿವರ್ಮ ಅಲಿಯಾಸ್ ಅಪ್ಪು ಕೊಲೆಯಾದ ರೌಡಿಶೀಟರ್ ಅನ್ನೋ ಮಾಹಿತಿ ದೊರೆತಿದೆ.
ನಿನ್ನೆ ತಡ ರಾತ್ರಿ ವಿವೇಕನಗರದ ರೋಜ್ ಗಾರ್ಡನ್ ಬಳಿ ಬರ್ಬರ ಹತ್ಯೆಯಾಗಿರುವುದು ಇದೀಗ ಬೆಳಕಿಗೆ ಬಂದಿದೆ.
ಸ್ನೇಹಿತರ ಮನೆಗೆ ತೆರಳಿದ್ದ ರವಿವರ್ಮ ಹೊರ ಬರುತ್ತಿದ್ದಂತೆ ಹತ್ಯೆ ನಡೆದಿದೆ. ಮರ್ಡರ್ ಮಾಡಿ ಎಸ್ಕೇಪ್ ಆಗಿರುವ ದುಷ್ಕರ್ಮಿಗಳನ್ನು ಹಿಡಿಯಲು ಪೊಲೀಸರು ಬಲೆ ಬೀಸಿದ್ದಾರೆ. ವಿವೇಕನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ:ಮಹಾರಾಷ್ಟ್ರ ಆಸ್ಪತ್ರೆಯಲ್ಲಿ ಆಕ್ಸಿಜನ್ ಸೋರಿಕೆ.. 22 ಜನರ ದುರ್ಮರಣ!