ETV Bharat / state

ಬಾರ್​ಗೆ ನುಗ್ಗಿ ಪುಡಿರೌಡಿಗಳ ದಾಂಧಲೆ: ಪುಂಡರ ಕೃತ್ಯ ಸಿಸಿಟಿವಿಯಲ್ಲಿ‌ ಸೆರೆ

author img

By

Published : Aug 30, 2021, 12:05 PM IST

Updated : Aug 30, 2021, 12:30 PM IST

ಸುಬ್ರಮಣ್ಯಪುರ ಪೊಲೀಸ್ ಠಾಣಾ ವ್ಯಾಪ್ತಿಯ ಇಟ್ಟಮಡು ಬಳಿಯ ಎಸ್ಎಲ್​ವಿ ಬಾರ್​ಗೆ ನುಗ್ಗಿದ ಕಿಡಿಗೇಡಿಗಳಿಬ್ಬರು ದಾಂಧಲೆ ನಡೆಸಿದ್ದಾರೆ.

bengaluru
ದಾಂಧಲೆ ನಡೆಸಿದ ಪುಡಿರೌಡಿಗಳು

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ನಗರದಲ್ಲಿ ಪುಡಿ ರೌಡಿಗಳ ಹಾವಳಿ ಮಿತಿಮೀರುತ್ತಿದೆ. ಹಣಕ್ಕಾಗಿ ಮಾರಕಾಸ್ತ್ರಗಳನ್ನು ತೋರಿಸಿ ಅಂಗಡಿ ಮಾಲೀಕರನ್ನು ಬೆದರಿಸಿ ಅಟ್ಟಹಾಸ ಪ್ರದರ್ಶಿಸುತ್ತಿದ್ದಾರೆ. ಇದೀಗ ಇಂತಹದ್ದೇ ಘಟನೆ ನಗರದಲ್ಲಿ ನಡೆದಿದೆ.

ಸಿಸಿಟಿವಿ ದೃಶ್ಯ

ಸುಬ್ರಮಣ್ಯಪುರ ಪೊಲೀಸ್ ಠಾಣಾ ವ್ಯಾಪ್ತಿಯ ಇಟ್ಟಮಡು ಬಳಿಯ ಎಸ್ಎಲ್​ವಿ ಬಾರ್​ಗೆ ನುಗ್ಗಿದ ಕಿಡಿಗೇಡಿಗಳಿಬ್ಬರು ಗಲಾಟೆ ಮಾಡಿದ್ದಾರೆ. ನಿನ್ನೆ ಸಂಜೆ 7.30ರ ವೇಳೆಗೆ ಬಾರ್​ಗೆ ನುಗ್ಗಿದ ಇಬ್ಬರು, ಲಾಂಗ್ ಹಿಡಿದು ಅಲ್ಲಿದ್ದ ಜನರನ್ನು ಬೆದರಿಸಿದ್ದಾರೆ. ಜೊತೆಗೆ ಶಾಪ್​ನ ಗ್ಲಾಸ್​ಗಳನ್ನು ಒಡೆದು ಹಾಕಿದ್ದಾರೆ. ಈ ಘಟನೆ ಸಂಬಂಧ ಪೊಲೀಸರು ದೂರು ದಾಖಲಿಸಿಕೊಂಡಿದ್ದು ತನಿಖೆ ನಡೆಸುತ್ತಿದ್ದಾರೆ.

Last Updated : Aug 30, 2021, 12:30 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.