ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಪುಡಿರೌಡಿಗಳ ಹಾವಳಿ ಮತ್ತೆ ಮಿತಿ ಮೀರಿದೆ. ಇಷ್ಟು ದಿನ ರಸ್ತೆ ಬದಿ ನಿಲ್ಲಿಸಿದ ವಾಹನಗಳನ್ನು ಜಖಂ ಮಾಡುತ್ತಿದ್ದ ಖದೀಮರು, ಇದೀಗ ಸಿಟಿ ಮಾರ್ಕೇಟ್ ಪೊಲೀಸ್ ಠಾಣೆಗೆ ನುಗ್ಗಿ ಕಲ್ಲು ತೂರಾಟ ಮಾಡಿದ್ದಾರೆ. ಅಲ್ಲದೇ ಠಾಣೆ ಮುಂದಿರುವ ಪೊಲೀಸ್ ವಾಹನಗಳನ್ನು ಪುಡಿ ಮಾಡಿದ್ದಾರೆ.
ಅನುಮಾಸ್ಪದವಾಗಿ ಮಾರಾಕಾಸ್ತ್ರಗಳನ್ನ ಹಿಡಿದು ಒಡಾಡುತ್ತಿದ್ದ 7 ಜನರನ್ನು ಕಳೆದ ರಾತ್ರಿ ಮಾರ್ಕೇಟ್ ಪೊಲೀಸರು ಆರೆಸ್ಟ್ ಮಾಡಿದ್ದಾರೆ. ಪೊಲೀಸರ ಅರೆಸ್ಟ್ ಮಾಡಿರುವುದಕ್ಕೆ ರೊಚ್ಚಿಗೆದ್ದ ಕಿಡಿಗೇಡಿಗಳು ಠಾಣೆಯ ಮೇಲೆ ಕಲ್ಲು ತೂರಿದ್ದಲ್ಲದೇ ಪೊಲೀಸರನ್ನು ಬೆದರಿಸಿ ಬಂಧಿಸಿದ್ದ ಬಂಧಿತರನ್ನು ಠಾಣೆಯಿಂದ ಕರೆದೊಯ್ದಿದ್ದಾರೆ.
ಅಷ್ಟು ಮಾತ್ರವಲ್ಲ, ಗಲಾಟೆ ವೇಳೆ ಪೊಲೀಸ್ ವಾಹನಗಳು, ಠಾಣೆಯ ಕೆಲಭಾಗ ಜಖಂಗೊಂಡಿದೆ. ಸದ್ಯ ಠಾಣೆ ಬಳಿ ಇದ್ದ ಪೊಲೀಸ್ ವಾಹನಗಳನ್ನು ಬೇರೆಡೆ ಶಿಫ್ಟ್ ಮಾಡಲಾಗಿದೆ.
ಈ ಸಂಬಂಧ ಪಶ್ಚಿಮ ವಿಭಾಗ ಡಿಸಿಪಿ ರಮೇಶ್ .ಬಿ. ಮಾತನಾಡಿ, ಕಾಟನ್ ಪೇಟೆಯಲ್ಲಿ ನಿನ್ನೆ ಉರೂಸ್ ನಡೀತಾ ಇತ್ತು. ಹೀಗಾಗಿ ಅನುಮಾನಾಸ್ಪದವಾಗಿ ಅವೆನ್ಯೂ ರಸ್ತೆಯಲ್ಲಿ ನಿಂತಿದ್ದ ಚಂದ್ರಲೇಔಟ್ ಹಾಗೂ ಗಂಗೋಡನಹಳ್ಳಿ ಪಾದರಾಯನಪುರ ನಿವಾಸಿಗಳಾದ ಮಹಮ್ಮದ್ ಸಾಹಿಲ್,ಇಬ್ರಾಹಿಂ ಖಾನ್, ಸೈಯದ್ ಮುಬಾರಕ್ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದೇವೆ. ಈ ಮೂವರ ಪೈಕಿ ಇಬ್ಬರ ಬಳಿ ಮಾರಕಾಸ್ತ್ರವಿರುವುದು ಪತ್ತೆಯಾಗಿದೆ ಎಂದರು.
ಬಳಿಕ ಎಸ್ ಐ ಶ್ಯಾಮಸುಂದರ್ ಅವರನ್ನು ಠಾಣೆಗೆ ಕರೆದುಕೊಂಡು ಬರುವಾಗ ಪೊಲೀಸರ ಮಧ್ಯೆ ಹಾಗೂ ಹುಡುಗರ ಮಧ್ಯೆ ಗಲಾಟೆ ಆಗಿತ್ತು. ಈ ವೇಳೆ, ಚೀತಾ ವಾಹನದ ಡೂಮ್ ಲೈಟ್ಗೆ ಸ್ವಲ್ಪ ಏಟಾಗಿದೆ. ಪೊಲೀಸ್ ಠಾಣೆ ಮೇಲೆ ಕಲ್ಲೆಸೆದಿರುವ ಬಗ್ಗೆ ತನಿಖೆ ಮುಂದುವರೆದಿದೆ ಎಂದು ಡಿಸಿಪಿ ಮಾಹಿತಿ ನೀಡಿದ್ರು.