ಬೆಂಗಳೂರು: ಕೊಲೆ, ಕೊಲೆ ಯತ್ನ ಸೇರಿದಂತೆ ವಿವಿಧ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ರೌಡಿಶೀಟರ್ ಮೇಲೆ ಹಲಸೂರು ಪೊಲೀಸರು ಗೂಂಡಾ ಕಾಯ್ದೆಯಡಿ ಬಂಧಿಸಿದ್ದಾರೆ.
ಲಾಲ್ ಅಲಿಯಾಸ್ ಲಾರೆನ್ಸ್ ಗೂಂಡಾ ಕಾಯ್ದೆಯಡಿ ಜೈಲು ಸೇರಿದ ರೌಡಿಶೀಟರ್ ಆಗಿದ್ದಾನೆ. ಹಲಸೂರಿನ ಮರ್ಫಿ ಟೌನ್ ನಿವಾಸಿಯಾಗಿರುವ ಈತನ ವಿರುದ್ದ ಕೊಲೆ, ಕೊಲೆ ಯತ್ನ, ಮಾದಕ ವಸ್ತುಗಳ ಮಾರಾಟ, ದರೋಡೆಗೆ ಸಂಚು, ಸರ್ಕಾರಿ ನೌಕರರ ಮೇಲೆ ಹಲ್ಲೆ ಹಾಗೂ ದೊಂಬಿ ಪ್ರಕರಣ ಸೇರಿದಂತೆ ಹಲಸೂರು ಪೊಲೀಸ್ ಠಾಣೆಯಲ್ಲಿ 14 ಪ್ರಕರಣಗಳು ದಾಖಲಾಗಿವೆ.
ರೌಡಿಶೀಟರ್ನನ್ನು ಠಾಣೆಗೆ ಕರೆಯಿಸಿ ಹಲವು ಬಾರಿ ಮುಚ್ಚಳಿಕೆ ಬರೆಸಿಕೊಂಡಿದ್ದರೂ ತಮ್ಮ ರೌಡಿ ಚಟುವಟಿಕೆಗಳನ್ನು ಮುಂದುವರೆಸಿ ಸಮಾಜದ ನೆಮ್ಮದಿಗೆ ಭಂಗ ತಂದಿದ್ದ ಎಂದು ತಿಳಿದು ಬಂದಿದೆ .
ಈ ಎಲ್ಲ ಅಪರಾಧದ ಹಿನ್ನೆಲೆ ರೌಡಿಶೀಟರ್ನನ್ನು ಗೂಂಡಾ ಕಾಯ್ದೆಯಡಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.