ETV Bharat / state

ರೋಷನ್ ಬೇಗ್ ಅನಾರೋಗ್ಯ: ಸಿಬಿಐ ತನಿಖೆಗೆ ಕೊಂಚ ಹಿನ್ನಡೆ

author img

By

Published : Nov 29, 2020, 1:47 PM IST

ಸಿಬಿಐ ಎದುರು ಮನ್ಸೂರ್ ಖಾನ್ ತನ್ನಿಂದ ಬೇಗ್ 400ಕೋಟಿ ರೂ. ಪಡೆದಿರುವ ವಿಚಾರ, ಹಾಗು ಹಣ ಕೇಳಲು ಹೋದಾಗ ಬೆದರಿಕೆ ಹಾಕಿರುವ ವಿಚಾರ ಬಾಯ್ಬಿಟ್ಟಿದ್ದ ಎನ್ನಲಾಗ್ತಿದೆ. ಹೀಗಾಗಿ ಮನ್ಸೂರ್ ಖಾನ್ ಹಾಗೂ ರೋಷನ್ ಬೇಗ್ ಅವರನ್ನು ಎದುರು ಬದುರು ಕೂರಿಸಿ ವಿಚಾರಣೆ ನಡೆಸಲು ಸಿಬಿಐ ಅಧಿಕಾರಿಗಳು ನಿರ್ಧಾರ ಮಾಡಿದ್ದರು.

Roshan Beg
ರೋಷನ್ ಬೇಗ್

ಬೆಂಗಳೂರು: ಐಎಂಎ ಬಹುಕೋಟಿ ವಂಚನೆ ಪ್ರಕರಣದ ಐಎಂಎ ಮುಖ್ಯಸ್ಥ ಮನ್ಸೂರ್ ಖಾನ್ ನಿಂದ 400 ಕೋಟಿ ರೂ. ಹಣ ಪಡೆದ ಆರೋಪ ಎದುರಿಸುತ್ತಿರುವ ರೋಷನ್ ಬೇಗ್ ಸದ್ಯದ ಮಟ್ಟಿಗೆ ಸಿಬಿಐ ವಿಚಾರಣೆಯಿಂದ ಬಚಾವ್ ಆಗಿದ್ದಾರೆ. ಯಾಕಂದ್ರೆ ಸದ್ಯ ಬೇಗ್ ಆರೋಗ್ಯದಲ್ಲಿ ಇನ್ನೂ ಸಧಾರಣೆ ಕಂಡಿಲ್ಲ. ಹೀಗಾಗಿ ರೋಷನ್ ಬೇಗ್ ಗೆ ಜಯದೇವ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ.

ಈಗಾಗಲೇ ಸಿಬಿಐ ಎದುರು ಮನ್ಸೂರ್ ಖಾನ್ ತನ್ನಿಂದ ಬೇಗ್ 400ಕೋಟಿ ರೂ. ಹಣ ಪಡೆದಿರುವ ವಿಚಾರ, ಹಾಗು ಹಣ ಕೇಳಲು ಹೋದಾಗ ಬೆದರಿಕೆ ಹಾಕಿರುವ ವಿಚಾರ ಬಾಯ್ಬಿಟ್ಟಿದ್ದ ಎನ್ನಲಾಗ್ತಿದೆ. ಹೀಗಾಗಿ ಮನ್ಸೂರ್ ಖಾನ್ ಹಾಗೂ ರೋಷನ್ ಬೇಗ್ ಅವರನ್ನ ಎದುರು ಬದುರು ಕೂರಿಸಿ ವಿಚಾರಣೆ ನಡೆಸಲು ಸಿಬಿಐ ಅಧಿಕಾರಿಗಳು ನಿರ್ಧಾರ ಮಾಡಿದ್ದರು. ಹಾಗೆ ನ್ಯಾಯಾಲಯದ ಅನುಮತಿ ಪಡೆದಿದ್ದರು. ಈ ವೇಳೆ ಮೂರು ದಿನ ನ್ಯಾಯಾಲಯ ಅನುಮತಿ ನೀಡಿದರು ಕೂಡ ಸದ್ಯದ ಮಟ್ಟಿಗೆ ರೋಷನ್ ಬೇಗ್​ ತನಿಖೆಗೆ ಸಹಕಾರ ನೀಡುವ ಹಂತದಲ್ಲಿ ಇಲ್ಲಾ. ಹೀಗಾಗಿ ಸದ್ಯ ಮನ್ಸೂರ್ ಖಾನ್ ಅನ್ನ ಸಿಬಿಐ ಕೂಡ ಮತ್ತೆ ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಿದ್ದು, ರೋಷನ್ ಬೇಗ್​ ಆರೋಗ್ಯ ಚೇತರಿಕೆ ಕಂಡ ಬಳಿಕ ಮತ್ತೆ ವಶಕ್ಕೆ ಪಡೆದು ಇಬ್ಬರನ್ನು ವಿಚಾರಣೆ ನಡೆಸಲಿದ್ದಾರೆ ಎನ್ನಲಾಗ್ತಿದೆ.

ಓದಿ:ನಗರ ಪೊಲೀಸ್​ ಆಯುಕ್ತರಿಗೆ ಪತ್ರ ಬರೆದ ಹಿರಿಯ ಕಾನ್​​​ಸ್ಟೇಬಲ್​ಗಳು: ಕಾರಣ?

ಸದ್ಯ ರೋಷನ್ ಬೇಗ್ ಹೃದಯಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವ ಕಾರಣ ಜಯದೇವ್ ಆಸ್ಪತ್ರೆಗೆ ದಾಖಲಿಸಲಾಗಿದೆ. ತಿವ್ರ ನಿಗಾ ಘಟಕದಲ್ಲಿಡಲಾಗಿದೆ. ಹೀಗಾಗಿ ಸಿಬಿಐ ತನಿಖೆಗೆ ಕೊಂಚ ಹಿನ್ನಡೆಯಾಗಿದೆ ಎಂದು ತಿಳಿದುಬಂದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.