ಬೆಂಗಳೂರು: ಅಯೋಧ್ಯೆ ತೀರ್ಪನ್ನು ಸ್ವಾಗತ ಮಾಡುತ್ತೇವೆ ಎಂದು ನಾನು ಒಂದು ವರ್ಷದ ಹಿಂದೆಯೇ ಹೇಳಿದ್ದೆ. ನಮ್ಮ ಧರ್ಮ ಗುರುಗಳು ಕೂಡ, ಯಾವುದೇ ತೀರ್ಪು ಬಂದರೂ ಸ್ವಾಗತ ಮಾಡ್ತಿವಿ ಅಂತ ಹೇಳಿದ್ರು ಎಂದು ಅನರ್ಹ ಶಾಸಕ ರೋಷನ್ ಬೇಗ್ ಹೇಳಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಕೆಲವರು ಮೇಲ್ಮನವಿ ಹಾಕುತ್ತೇವೆ ಎನ್ನುತ್ತಿದ್ದಾರೆ. ಅಂತವರಿಗೆ ನಾನು ಮನವಿ ಮಾಡುತ್ತೇನೆ, ದಯವಿಟ್ಟು ಅಂತಹ ಕೆಲಸ ಮಾಡಬೇಡಿ. ನಮಗೂ ಸಾಕಾಗಿ ಹೋಗಿದೆ. ನಮಗೆ ಸಮಾನತೆ ಬೇಕು, ಸೌಹಾರ್ದತೆಯಿಂದ ಬದುಕಬೇಕು ಎಂದರು.
ಒಳ್ಳೆಯ ತೀರ್ಪು ಬಂದಿದೆ. ಸುಪ್ರೀಂಕೋರ್ಟ್ ಆದೇಶದಂತೆ ರಾಮಮಂದಿರ ಕಟ್ಟುವಾಗ ನಾವು ಮುಸ್ಲಿಂ ಸ್ವಯಂ ಸೇವಕರನ್ನ ಕರೆದುಕೊಂಡು ಬರ್ತೇವೆ. ಹಾಗೆಯೇ ಮಸೀದಿ ಕಟ್ಟುವಾಗ ಹಿಂದೂಗಳು ಕೂಡ ಬನ್ನಿ. ಹಿಂದೂ-ಮುಸ್ಲಿಂಮರು ಸೇರಿ ರಾಮಮಂದಿರ, ಮಸೀದಿ ಕಟ್ಟೋಣ ಎಂದು ಸಾಮರಸ್ಯದ ಮಾತುಗಳನ್ನಾಡಿದರು.