ಬೆಂಗಳೂರು: ಮಹಿಳೆ ಮೇಲೆ ಹಲ್ಲೆ ಪ್ರಕರಣ ಸಂಬಂಧ ಜೊಮ್ಯಾಟೋದ ಫುಡ್ ಡೆಲಿವರಿ ಬಾಯ್ ಕಾಮರಾಜ್ ಸಾಮಾಜಿಕ ಜಾಲತಾನದಲ್ಲಿ ಕಣ್ಣೀರು ಸುರಿಸಿದ್ದಾರೆ.
ಕನ್ನಡ ಪರ ಹೋರಾಟಗಾರ ರೂಪೇಶ್ ರಾಜಣ್ಣನೊಂದಿಗೆ ಡೆಲಿವರಿ ಆರಂಭದಿಂದ ಹಿಡಿದು ಕೊನೆವರೆಗೂ ಏನೆಲ್ಲಾ ಆಯಿತು ಎಂಬುದರ ಬಗ್ಗೆ ಮಾತನಾಡಿರುವ ಕಾಮರಾಜ್ ಕಣ್ಣೀರು ಸುರಿಸಿದ್ದಾರೆ. ಮಾ.10 ರಂದು ಹೆಚ್ಎಸ್ಆರ್ ಲೇಔಟ್ ರೆಸ್ಟೋರೆಂಟ್ನಿಂದ ಎಲೆಕ್ಟ್ರಾನಿಕ್ ಸಿಟಿಯ ದೊಡ್ಡ ತೂಗೂರು ಬಳಿ ಅಪಾರ್ಟ್ಮೆಂಟ್ ನಿವಾಸಕ್ಕೆ ಫುಡ್ ತಲುಪಿಸಲು ಆರ್ಡರ್ ಬಂದಿತ್ತು. ಬೇಗೂರು, ಬೊಮ್ಮನಹಳ್ಳಿ ಮಾರ್ಗವಾಗಿ ಹೋಗಿದ್ದರಿಂದ ರಸ್ತೆ ಕಾಮಗಾರಿ ಹಾಗೂ ಟ್ರಾಫಿಕ್ ಹೆಚ್ಚಾಗಿದ್ದರಿಂದ ನಿಗದಿತ ಸಮಯದೊಳಗೆ ಹೋಗಲು ಸಾಧ್ಯವಾಗಲಿಲ್ಲ ಎಂದು ಹೇಳಿದರು.
- " class="align-text-top noRightClick twitterSection" data="">
ಈ ಬಗ್ಗೆ ಹಿತೇಶಾ ಚಂದ್ರಾಣಿ ಎಂಬುವರ ಬಳಿ ಕ್ಷಮೆ ಕೇಳಿದರೂ ನನ್ನ ಮೇಲೆ ಕಿಡಿಕಾರಿದ್ದರು. ಈ ವೇಳೆ, ಮಾತಿಗೆ ಮಾತು ಬೆಳೆದು ಮಹಿಳೆ ಮತ್ತು ನನ್ನ ನಡುವೆ ಜಗಳವಾಯಿತು. ಚಪ್ಪಲಿ ಕೈಗೆತ್ತಿಕೊಂಡು ನನ್ನ ಮೇಲೆ ಎಸೆದಿದ್ದರು ಎಂದು ಕಾಮರಾಜ್ ವಿಡಿಯೋದಲ್ಲಿ ವಿವರಿಸಿದ್ದಾನೆ.
ಕಾಮರಾಜ್ ಪರವಾಗಿ ಕನ್ನಡಪರ ಹೋರಾಟಗಾರ ರೂಪೇಶ್ ರಾಜಣ್ಣ ಫೇಸ್ಬುಕ್ನಲ್ಲಿ ಲೈವ್ ಬಂದಿದ್ದು, ಕಾಮರಾಜ್ಗೆ ಧೈರ್ಯ ತುಂಬಿದ್ದಾರೆ.