ETV Bharat / state

ಬೈಕ್ ಪಾರ್ಕ್ ವಿಚಾರಕ್ಕೆ ಗಲಾಟೆ: ಯುವಕನ ಕೈಕಾಲು ಕಟ್ಟಿ ಹತ್ಯೆ ಮಾಡಿದ ರೂಮ್‌ಮೇಟ್ಸ್

ಒಂದೇ ಮನೆಯಲ್ಲಿ ವಾಸವಿದ್ದ ಯುವಕರು ತಮ್ಮ ರೂಮ್​ಮೇಟ್​ ಒಬ್ಬನನ್ನು ವೈಯರ್​ನಿಂದ ಕಟ್ಟಿಹಾಕಿ ಬಾಯಿಗೆ ಬಟ್ಟೆ ತುರುಕಿ ಕೊಲೆ ಮಾಡಿರುವ ಘಟನೆ ಯಲಹಂಕ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಜನಾರ್ಧನ ಭಟ್ಟ
ಜನಾರ್ಧನ ಭಟ್ಟ
author img

By

Published : Mar 31, 2023, 5:39 PM IST

ಈಶಾನ್ಯ ವಿಭಾಗದ ಡಿಸಿಪಿ ಲಕ್ಷ್ಮೀಪ್ರಸಾದ್

ಬೆಂಗಳೂರು : ಬೈಕ್ ಪಾರ್ಕ್ ವಿಚಾರಕ್ಕಾಗಿ ಉಂಟಾದ ಜಗಳದಿಂದ ಬೇಸತ್ತಿದ್ದ ಇಬ್ಬರು ಸ್ನೇಹಿತರು ಅದೇ ಮನೆಯಲ್ಲಿ ವಾಸವಾಗಿದ್ದ ಮತ್ತೋರ್ವ ಸ್ನೇಹಿತನನ್ನು ವೈಯರ್​ನಲ್ಲಿ‌ ಕಟ್ಟಿಹಾಕಿ ಬಾಯಿಗೆ ಬಟ್ಟೆ ತುರುಕಿ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾರೆ.

ಯಲಹಂಕ ಪೊಲೀಸ್ ಠಾಣೆ ವ್ಯಾಪ್ತಿಯ ಶ್ರೀನಿವಾಸಪುರದ ಮನೆಯೊಂದರಲ್ಲಿ‌ ಮಾರ್ಚ್ 29ರ ರಾತ್ರಿ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಉಡುಪಿ ಮೂಲದ ಜನಾರ್ಧನ ಭಟ್ಟ (29) ಕೊಲೆಯಾದ ಯುವಕ. ಕಳೆದ‌ ಒಂದೂವರೆ ವರ್ಷಗಳಿಂದ ಶ್ರೀನಿವಾಸಪುರದಲ್ಲಿ ವಾಸವಾಗಿದ್ದರು. ಜೀವನಕ್ಕಾಗಿ‌ ಕಂಪನಿಯೊಂದರಲ್ಲಿ ಟಿ.ವಿ ರಿಪೇರಿ‌‌ ಕೆಲಸ ಮಾಡಿಕೊಂಡಿದ್ದ. ಅದೇ ಕಂಪೆನಿಯಲ್ಲಿ‌‌ ಪ್ರಿಡ್ಜ್ , ಎಸಿ ರಿಪೇರಿ ಕೆಲಸ‌‌ ಮಾಡುತ್ತಿದ್ದ ಪಶ್ಚಿಮ ಬಂಗಾಳ‌ ಮೂಲದ ರಿಜ್ವಾನ್ ಹಾಗೂ ಸುಲೆಮಾನ್ ಕೆಲ ತಿಂಗಳಿಂದ ಜನಾರ್ಧನ್ ವಾಸವಾಗಿರುವ ರೂಮಿನಲ್ಲಿ ವಾಸ್ತವ್ಯ ಹೂಡಿದ್ದರು.

ಇದೇ ತಿಂಗಳು‌ ಮಾರ್ಚ್ 29 ರಂದು ರಾತ್ರಿ ಮನೆ ಮುಂದೆ ಬೈಕ್ ನಿಲ್ಲಿಸುವ ವಿಚಾರಕ್ಕೆ ಮೂವರ ನಡುವೆ ಗಲಾಟೆಯಾಗಿದೆ. ಜಗಳ ತಾರಕಕ್ಕೇರುತ್ತಿದ್ದಂತೆ ಮನೆಯಲ್ಲಿ ಆರೋಪಿಗಳು ಜನಾರ್ಧನ್​​ನ ಕೈಕಾಲುಗಳಿಗೆ ವೈಯರ್ ಕಟ್ಟಿ ಬಾಯಿಗೆ ಪ್ಲಾಸ್ಟರ್ ತುರುಕಿ ಕತ್ತು ಹಿಸುಕಿ ಹತ್ಯೆ‌ ಮಾಡಿ ಪರಾರಿಯಾಗಿದ್ದಾರೆ. ಮಾರನೇ‌ ದಿನ ಬೆಳಗ್ಗೆ ನೆರೆಹೊರೆ ಮನೆಯವರು ಬಂದು ನೋಡಿದಾಗ ಕೊಲೆಯಾದ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ. ಕೊಲೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಆರೋಪಿಗಳ ಬಂಧ‌ನಕ್ಕಾಗಿ ಶೋಧ ಕಾರ್ಯ ಚುರುಕುಗೊಳಿಸಿದ್ದಾರೆ ಎಂದು ಈಶಾನ್ಯ ವಿಭಾಗದ ಡಿಸಿಪಿ ಲಕ್ಷ್ಮೀಪ್ರಸಾದ್ ತಿಳಿಸಿದ್ದಾರೆ.

ಮೂರು ದಿವಸದಿಂದ ಕಿತ್ತಾಡಿದ್ದಾರೆ : ಈ ಬಗ್ಗೆ ಸ್ಥಳೀಯರಾದ ರುಕ್ಮಿಣಿ ಎಂಬುವವರು ಪ್ರತಿಕ್ರಿಯಿಸಿದ್ದು, ಮೂವರು ಒಂದೇ ಮನೆಯಲ್ಲಿ ವಾಸಮಾಡುತ್ತಿದ್ದರು. ಅವರನ್ನು ನೋಡಿದ್ದೇನೆ. ಆದರೆ ಅವರ ಪರಿಚಯವಿಲ್ಲ. ಒಟ್ಟಿಗೆ ಒಂದೇ ಕಂಪನಿಯಲ್ಲಿ ಕೆಲಸಕ್ಕೆ ಹೋಗುತ್ತಿದ್ದರು ಎಂಬುದು ನಮಗೆ ನಿನ್ನೆ ಗೊತ್ತಾಗಿದ್ದು, ಅದಕ್ಕೂ ಮುಂಚೆ ಅವನೊಬ್ಬನೆ ಇದ್ದ. ಎರಡು ತಿಂಗಳ ನಂತರ ಅವರಿಬ್ಬರು ಬಂದಿದ್ದಾರೆ. ಮೂರು ದಿವಸದಿಂದ ಕಿತ್ತಾಡುತ್ತಿದ್ದರು. ಮೊನ್ನೆ ರಾತ್ರಿ ​ಫುಲ್​ ಗಲಾಟೆ ಆಗುತ್ತಿತ್ತು. ನಾವು ನೋಡಿದ್ವಿ. ಸುಮ್ನೆ ನಮಗೂ ಆ ಹುಡುಗನಿಗೂ ಒಮ್ಮೆ ಜಗಳವಾಗಿತ್ತು. ಯಾಕೆಂದರೆ ಅವನು ಕುಡಿದು ನಡೆದಾಡುತ್ತಿದ್ದ. ಹಾಗಾಗಿ ನಾವು ಬೈದಿದ್ದೆವು. ನಂತರ ಒಮ್ಮೆ ಹೊಡೆದಿದ್ದೆವು. ನಂತರ ಅವನು ಚೆನ್ನಾಗಿಯೇ ಇದ್ದ. ನಿನ್ನೆ ನೋಡಿದ್ರೆ ಈ ಅವಾಂತರ ನಡೆದಿದೆ. ಅವರ ತಂದೆ ತಾಯಿಯೂ ಬಂದಿರಲಿಲ್ಲ, 4 ಗಂಟೆವರೆಗೂ ಇಲ್ಲಿಯೇ ಹೆಣ ಇತ್ತು ಎಂದಿದ್ದಾರೆ.

ಇದನ್ನೂ ಓದಿ : ಬೆಂಗಳೂರು: ಲಿಪ್ ಸ್ಟಿಕ್ ಹಾಕಿ ಮಹಿಳೆಯರ‌‌ ಒಳ ಉಡುಪು ಧರಿಸುತ್ತಿದ್ದ ಪತಿ ವಿರುದ್ದ ಪತ್ನಿ ದೂರು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.