ETV Bharat / state

ಬಿಟ್ ಕಾಯಿನ್‌ ದಂಧೆ.. ಶ್ರೀಕಿ ಹೇಗೆಲ್ಲಾ ಹ್ಯಾಕ್ ಮಾಡ್ತಿದ್ದ ಎಂದು ಬಾಯ್ಬಿಟ್ಟ ರಾಬಿನ್ ಖಂಡೇನ್ ವಾಲಾ.. - ರಾಬಿನ್ ಖಂಡೇನ್ ವಾಲ

ಐದು ವರ್ಷಗಳ ಕಾಲ ಬಿಟ್ ಕಾಯಿನ್ ದಂಧೆಯಲ್ಲಿ ಭಾಗಿಯಾಗಿ ಇದೀಗ ಸಿಸಿಬಿ ಪೊಲೀಸರಿಂದ ಬಂಧಿತನಾಗಿರುವ ಪ್ರಕರಣ ಎರಡನೇ ಆರೋಪಿ ರಾಬಿನ್ ಖಂಡೇನ್ ವಾಲಾ (Robin Khanden Wala), ಶ್ರೀಕಿಯ (shriki) ದಂಧೆಯ ಬಗ್ಗೆ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾನೆ..

Sriki
Sriki
author img

By

Published : Nov 14, 2021, 2:46 PM IST

ಬೆಂಗಳೂರು : ಬಿಟ್ ಕಾಯಿನ್‌ ದಂಧೆ (Bitcoin Scam) ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ರಾಷ್ಟ್ರಮಟ್ಟದಲ್ಲಿ ಸದ್ದು ಮಾಡುತ್ತಿದೆ. ಹಗರಣದ ಕೇಂದ್ರ ಬಿಂದುವಾಗಿರುವ ಶ್ರೀಕೃಷ್ಣ, ವೆಬ್ ಸೈಟ್ ಹ್ಯಾಕ್ ಮಾಡಿ ಬಿಟ್ ಕಾಯಿನ್ ವಹಿವಾಟು ಹೇಗೆ ನಡೆಸುತ್ತಿದ್ದ ಎಂಬುದರ ಸ್ಫೋಟಕ ಸತ್ಯ ಬಹಿರಂಗವಾಗಿದೆ.

ಐದು ವರ್ಷಗಳ ಕಾಲ ಬಿಟ್ ಕಾಯಿನ್ ದಂಧೆಯಲ್ಲಿ ಭಾಗಿಯಾಗಿ, ಇದೀಗ ಸಿಸಿಬಿ ಪೊಲೀಸರಿಂದ ಬಂಧಿತನಾಗಿರುವ ಪ್ರಕರಣದ ಎರಡನೇ ಆರೋಪಿ ರಾಬಿನ್ ಖಂಡೇನ್ ವಾಲe (Robin Khanden Wala), ಶ್ರೀಕಿಯ (shriki) ದಂಧೆಯ ಬಗ್ಗೆ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾನೆ.

ಹ್ಯಾಕಿಂಗ್ ಹೇಗೆ ಮಾಡುತ್ತಿದ್ದ? ಯಾರಿಗೆಲ್ಲಾ ಮಾರಾಟ ಮಾಡುತ್ತಿದ್ದ?. ಈ ದಂಧೆಯಲ್ಲಿ ಯಾರು ಯಾರು ಭಾಗಿಯಾಗಿದ್ದಾರೆ? ಎಂಬುದರ ಬಗ್ಗೆ ಸವಿಸ್ತಾರವಾಗಿ ತನಿಖಾಧಿಕಾರಿಗಳ ಮುಂದೆ ಏಳು ಪುಟಗಳ ಹೇಳಿಕೆ ನೀಡಿದ್ದಾನೆ ರಾಬಿನ್. ಅದರ ಪ್ರತಿ‌ ಈಟಿವಿ ಭಾರತಕ್ಕೆಗೆ ಲಭ್ಯವಾಗಿದೆ.

50 ಕೋಟಿ ರೂ.ಬಿಟ್ ಕಾಯಿನ್ ವ್ಯವಹಾರ : ಪಶ್ಚಿಮ ಬಂಗಾಳ ಮೂಲದ‌ ರಾಬಿನ್‌ ಖಂಡೇನ್‌ ವಾಲಾ ಸಿಎ ವ್ಯಾಸಂಗ ಮಾಡಿದ್ದಾನೆ. 2012ರಿಂದ 16 ರವರೆಗೆ ತಂದೆ ನಡೆಸುತ್ತಿದ್ದ ರೈಸ್ ಮಿಲ್ ನೋಡಿಕೊಳ್ಳುತ್ತಿದ್ದ. 2016ರಲ್ಲಿ ಬ್ಯುಸಿನೆಸ್ ಮಾಡುವ ಉದ್ದೇಶದಿಂದ ರಾಬಿನ್ ಸರ್ವೀಸಸ್ ಹೆಸರಿನಲ್ಲಿ ಬಿಟ್ ಕಾಯಿನ್ ವ್ಯವಹಾರ ಆರಂಭಿಸಿದ್ದ. ಲೋಕಲ್ ಬಿಟ್ ಕಾಯಿನ್ ಡಾಟ್ ಕಾಮ್, paxfull, remitano.com, binance.com ಸೇರಿದಂತೆ ವಿವಿಧ ವೆಬ್‌ಸೈಟ್‌ಗಳಲ್ಲಿ ಬಿಟ್ ಕಾಯಿನ್ ವ್ಯವಹಾರ ಆರಂಭಿಸಿದ್ದ. ಇದಕ್ಕೆ‌ ಪ್ರತಿಯಾಗಿ ಶೇ.2ರಷ್ಟು ಕಮಿಷನ್ ಪಡೆಯುತ್ತಿದ್ದ. ಇದುವರೆಗೆ ₹50 ಕೋಟಿ ವ್ಯವಹಾರ ಮಾಡಿರುವುದು ತಿಳಿದು ಬಂದಿದೆ.

ಹ್ಯಾಕರ್ ಶ್ರೀಕಿ ಪರಿಚಯವಾಗಿದ್ದು ಹೇಗೆ? : 2017ರಲ್ಲಿ ಏಪ್ರಿಲ್​ನಲ್ಲಿ ಲೋಕಲ್ ಬಿಟ್ ಕಾಯಿನ್ ಡಾಟ್ ಕಾಮ್​ನಲ್ಲಿ ಖಂಡೇನ್ ವಾಲಾಗೆ ಹ್ಯಾಕರ್ ಶ್ರೀಕೃಷ್ಣ ಪರಿಚಯಿಸಿಕೊಂಡಿದ್ದಾನೆ. ಇಬ್ಬರು ಹಾಗೆಯೇ ಚಾಟ್ ಮಾಡಿಕೊಂಡಿದ್ದಾರೆ. ಈ ವೇಳೆ ಶ್ರೀಕೃಷ್ಣ 900 ಬಿಟ್ ಕಾಯಿನ್​​ಗಳಿದ್ದು ಮಾರಾಟ ಮಾಡಲು ಮಾಡುವಂತೆ ತಿಳಿಸಿದ್ದಾನೆ‌. ಇದಕ್ಕೆ ಒಪ್ಪಿಕೊಂಡ ಖಂಡೇನ್, ಬಿಟ್ ಕಾಯಿನ್ ಪಡೆದು ಮಾರಾಟ ಮಾಡಿ, ಅದರಿಂದ ಬಂದ ಹಣವನ್ನ ಶ್ರೀಕಿ ಹೇಳಿದ ಬ್ಯಾಂಕ್ ಖಾತೆಗೆ ಹಾಕುತ್ತಿದ್ದ ಎನ್ನಲಾಗಿದೆ. ಹೀಗೆ ಸುಮಾರು ಐದಾರು ಕೋಟಿ‌ ರೂ. ವ್ಯವಹಾರ ನಡೆಸಿರುವುದಾಗಿಯೂ ತನಿಖಾಧಿಕಾರಿಗಳ ಮುಂದೆ ಹೇಳಿಕೆ ನೀಡಿದ್ದಾನೆ‌.

ಹ್ಯಾಕ್ ಮಾಡಿ ಬಂದ‌ ಹಣದಲ್ಲಿ ಶ್ರೀಕಿ ಮೋಜು- ‌ಮಸ್ತಿ: ಶ್ರೀಕಿ ಬಿಟ್ ಕಾಯಿನ್ ಅಷ್ಟೇ ಅಲ್ಲದೆ, ಗೋವಾದಲ್ಲಿ ಪೋಕರ್ ಆಲ್‌ಲೈನ್ ಗೇಮ್ ಸಹ ಹ್ಯಾಕ್ ಮಾಡಿರುವುದು ರಾಬಿನ್ ತನಿಖೆ ವೇಳೆ ಬಯಲಾಗಿದೆ. ಪೋಕರ್ ಗೇಮ್ ಹ್ಯಾಕ್ ಮಾಡಿ ಕೋಟಿ ಕೋಟಿ ಹಣ ಎಗರಿಸಿದ್ದ ಶ್ರೀಕಿ, ಗೋವಾದಲ್ಲಿ ಮೋಜು‌-ಮಸ್ತಿ ಮಾಡ್ತಿದ್ದನಂತೆ. 2017ರಿಂದಲೂ ಹಲವು ವೆಬ್‌ಸೈಟ್ ಹ್ಯಾಕ್ ಮಾಡ್ತಿದ್ದ ಶ್ರೀಕಿ, 130 ಬಿಟ್ ಕಾಯಿನ್​ಗಳನ್ನು ರಾಬಿನ್​ಗೆ ನೀಡಿದ್ದ.

ಇದನ್ನ ಮಾರಾಟ ಮಾಡಿ 3,48 ಕೋಟಿ ರೂ‌.ಹಣವನ್ನ 50ಕ್ಕೂ ಅಧಿಕ ಜನರ ಅಕೌಂಟ್‌ಗೆ ವರ್ಗಾವಣೆ ಮಾಡಿರುವುದಾಗಿ ಬಾಯಿಬಿಟ್ಟಿದ್ದಾನೆ. ‌ಜೊತೆಗೆ ಶ್ರೀಕಿ ಉಳಿಯುತ್ತಿದ್ದ ಐಷಾರಾಮಿ ಹೋಟೆಲ್​ಗಳಿಗೂ ಹಣ ವರ್ಗಾವಣೆ‌ ಮಾಡ್ತಿದ್ದ ಎಂದು ವಿಚಾರಣೆ ವೇಳೆ ಬಯಲಾಗಿದೆ.

ಹ್ಯಾಕ್ ಮಾಡೋನೊಬ್ಬ, ಮಾರಾಟ ಮಾಡೋನೊಬ್ಬ: 2017ರಲ್ಲಿ ಶ್ರೀಕೃಷ್ಣ,ಇಥಿರಿಯಂ ಟೋಕನ್​ಗಳನ್ನು ನೀಡಿ ಮಾರಾಟ ಮಾಡಲು ಹೇಳಿದ್ದಂತೆ ನಾನು ಮಾರಾಟ ಮಾಡಿದ್ದೆ. ಇದರಿಂದ ಬಂದ 30 ಕಾಯಿನ್​ಗಳಲ್ಲಿ 10 ಕಾಯಿನ್ ಕಮಿಷನ್ ರೂಪದಲ್ಲಿ ಪಡೆದುಕೊಂಡು, ಉಳಿದು 20 ಬಿಟ್ ಕಾಯಿನ್​ಗಳನ್ನು ಶ್ರೀಕಿಯ ವ್ಯಾಲೆಟ್​ಗೆ ಹಾಕಿದ್ದೆ. 2018ರಲ್ಲಿ ಬೆಂಗಳೂರಿಗೆ ಬಂದಿದ್ದಾಗ ಶ್ರೀಕಿ ಹ್ಯಾಕರ್ ಎಂಬುವುದು ಗೊತ್ತಾಗಿದೆ.

ಖಾಸಗಿ ಹೋಟೆಲ್‌ನಲ್ಲಿ ಭೇಟಿ ವೇಳೆ ಮೊಹಮ್ಮದ್ ನಲಪಾಡ್ ಸೇರಿದಂತೆ ಇನ್ನಿತರೆ ಆತನ ಗೆಳೆಯರಿಗೆ ನನ್ನನ್ನ ಬಿಟ್ ಕಾಯಿನ್ ಟ್ರೇಡರ್ ಎಂದು ಶ್ರೀಕಿ ಪರಿಚಯಿಸಿದ್ದ. ಹೋಟೆಲ್​ನಲ್ಲಿ ತಂಗಿದ್ದಾಗ ಬಿಟ್ ಕಾಯಿನ್ ಬಗ್ಗೆಯೂ ಚರ್ಚೆ ನಡೆಸಿದ್ದೆವು. ಇದಾದ ಕೆಲವು ತಿಂಗಳ ಬಳಿಕ ಪ್ರಕರಣದಲ್ಲಿ ಮೊಹಮ್ಮದ್ ನಲಪಾಡ್‌ನನ್ನು ಬಂಧಿಸಲಾಗಿತ್ತು. ಪೊಲೀಸರು ನನ್ನನ್ನು ಹುಡುಕುತ್ತಿದ್ದಾರೆ ಎಂದು ಶ್ರೀಕಿ ಹೇಳಿದ್ದರಿಂದ ಆತನಿಗೆ ನನ್ನ ಮನೆಯಲ್ಲಿ ಐದು ದಿನಗಳ ಕಾಲ ಆಶ್ರಯ ನೀಡಿದ್ದೆ. ಈ ಅವಧಿಯಲ್ಲಿ ದೆಹಲಿ, ಚಂಡೀಗಢ, ಜೈಪುರ ಹಾಗೂ ಮುಂಬೈ ಸೇರಿ ಹಲವೆಡೆ ಶ್ರೀಕಿಯೊಂದಿಗೆ ಓಡಾಡಿಕೊಂಡಿದ್ದೆ ಎಂದು ಹೇಳಿದ್ದಾನೆ.

ಹವಾಲಾ ಮುಖಾಂತರ ಹಣ ವರ್ಗಾವಣೆ : 2018ರಲ್ಲಿ ಹಣದ ಅವಶ್ಯಕತೆ ಇದೆ. ಬಿಟ್ ಕಾಯಿನ್‌ ಕಳುಹಿಸುವಂತೆ ಸೂಚಿಸಿದ್ದರಿಂದ ನನ್ನ ಬಳಿಯಿದ್ದ 30 ಬಿಟ್ ಕಾಯಿನ್ ವರ್ಗಾಯಿಸಿದ್ದೆ. ಅದಾದ ನಂತರ ಮತ್ತೆ ಬೆಂಗಳೂರಿಗೆ ಬಂದಿದ್ದಾಗ ಸುಜಯ್, ಸುನೀಶ್, ಪ್ರಸಿದ್ದ್ ಶೆಟ್ಟಿ ಹಾಗೂ ಸುರೇಶ್ ಎಂಬುವರ ಪರಿಚಯವಾಗಿದೆ. ಎಲ್ಲರೂ ಸೇರಿ ಗೋವಾದ ಪಿಸಿ ಪೋಕರ್ ಆನ್‌ಲೈನ್ ಆಟವನ್ನ ಹ್ಯಾಕ್ ಮಾಡಿ ಎದುರಾಳಿ ಬಳಿಯ ಕಾರ್ಡ್ ತಿಳಿದುಕೊಂಡು ಆಟವಾಡಿ ಹಣ ಸಂಪಾದನೆ ಮಾಡಿದ್ದೆವು.

2017 ರಿಂದ 2019ರವರೆಗೂ ಶ್ರೀಕಿಯ ಖರ್ಚುವೆಚ್ಚಗನ್ನು ನಾನೇ ನೋಡಿಕೊಂಡಿದ್ದೇನೆ. ಈವರೆಗೂ 130 ವ್ಯಾಲೆಟ್‌ಗಳನ್ನು ಪಡೆದು ಬೇರೆಯವರಿಗೆ ಮಾರಾಟ ಮಾಡಿ ಬಂದ ಹಣದಲ್ಲಿ ನನ್ನ ಪಾಲನ್ನು ಉಳಿಸಿಕೊಂಡು ಬಾಕಿಯಿರುವ 3.48 ಕೋಟಿ ರೂಪಾಯಿ ಶ್ರೀಕಿ ಹೇಳಿದ ಬ್ಯಾಂಕ್ ಅಕೌಂಟ್​ಗಳಿಗೆ ವರ್ಗಾಯಿಸಿದ್ದೇನೆ.

ಶ್ರೀಕಿ ನಗದು ಹಣ ಬೇಕೆಂದಾಗ ಕ್ಯಾಶ್ ವ್ಯವಹಾರ ಮಾಡುವ ಹೈದರಾಬಾದ್​ನ ಅಭಿಷೇಕ್‌ ಮುಖಾಂತರ ಶ್ರೀಕಿ ಹೇಳಿದ ವ್ಯಕ್ತಿಗೆ ಹವಾಲಾ ಮುಖಾಂತರ 1.5 ಕೋಟಿ ರೂ. ಸೇರಿದಂತೆ 4.98 ಕೋಟಿ ರೂಪಾಯಿ ಹಣ ಕಳುಹಿಸಿದ್ದೇನೆ. ಶ್ರೀಕಿ ಹ್ಯಾಕ್ ಮಾಡಲು ಮ್ಯಾಕ್ ಬುಕ್‌ ಪ್ರೊ ಲ್ಯಾಪ್‌ಟಾಪ್ ಬಳಸುತ್ತಿದ್ದ. ಜೊತೆಗೆ ನನ್ನ ಲ್ಯಾಪ್‌ಟಾಪ್ ಸಹ ಹ್ಯಾಕಿಂಗ್ ಮಾಡಲು ಬಳಸುತ್ತಿದ್ದ ಎಂದು ತನಿಖಾಧಿಕಾರಿಗಳ ಮುಂದೆ‌ ಖಂಡೇನ್ ವಾಲಾ ಹೇಳಿಕೆ ನೀಡಿದ್ದಾನೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.