ETV Bharat / state

ಬೆಂಗಳೂರು: ಬ್ಯಾಂಕ್‌ ಮ್ಯಾನೇಜರ್‌ಗೆ ಚಾಕು ತೋರಿಸಿ 4 ಲಕ್ಷ ಹಣದೊಂದಿಗೆ ಪರಾರಿ

ಮಡಿವಾಳದ ಎಸ್​​ಬಿಐ ಬ್ಯಾಂಕಿನಲ್ಲಿ ಸಂಜೆ ಆರು ಗಂಟೆಯ ವೇಳೆ ಮ್ಯಾನೇಜರ್ ಕಾರ್ಯನಿರ್ವಹಿಸುತ್ತಿದ್ದಾಗ ಒಳ ನುಗ್ಗಿದ ಆರೋಪಿ, ಚಾಕು ತೋರಿಸಿ ಹಣ ದೋಚಿದ್ದಾನೆ.

Robbery in SBI bank at bangalore
Robbery in SBI bank at bangalore
author img

By

Published : Jan 14, 2022, 8:40 PM IST

ಬೆಂಗಳೂರು: ಸಿನಿಮೀಯ ಶೈಲಿಯಲ್ಲಿ ಬ್ಯಾಂಕಿಗೆ‌ ನುಗ್ಗಿದ ಸುಲಿಗೆಕೋರನೊಬ್ಬ ಮ್ಯಾನೇಜರ್​ಗೆ ಚಾಕು ತೋರಿಸಿ ಬೆದರಿಸಿ ನಾಲ್ಕು ಲಕ್ಷ ರೂಪಾಯಿ ನಗದು ಹಾಗೂ ಚಿನ್ನಾಭರಣ ದೋಚಿರುವ ಘಟನೆ ಮಡಿವಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಮಡಿವಾಳದ ಎಸ್​​ಬಿಐ ಬ್ಯಾಂಕಿನಲ್ಲಿ ಸಂಜೆ ಆರು ಗಂಟೆಯ ವೇಳೆ ಮ್ಯಾನೇಜರ್ ಕಾರ್ಯನಿರ್ವಹಿಸುತ್ತಿದ್ದರು. ಈ ಸಂದರ್ಭದಲ್ಲಿ ಒಳನುಗ್ಗಿದ ಆರೋಪಿ, ಚಾಕು ತೋರಿಸಿ ಹಣ ನೀಡುವಂತೆ ತಾಕೀತು ಮಾಡಿದ್ದಾನೆ. ಕ್ಷಣಾರ್ಧದಲ್ಲಿ ಬ್ಯಾಂಕಿನಲ್ಲಿದ್ದ 4 ಲಕ್ಷ ರೂಪಾಯಿ ಹಣ ಹಾಗೂ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾನೆ.

ಇದನ್ನೂ ಓದಿ: ಗೌಸಿಯಾ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ನೌಕರರಿಗೆ ವಂಚನೆ: ಮಾಜಿ ಅಧ್ಯಕ್ಷನ ವಿರುದ್ಧ ಎಫ್‍ಐಆರ್

ದರೋಡೆಕೋರನ‌ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಆರೋಪಿ ಪತ್ತೆಗಾಗಿ ಮಡಿವಾಳ ವಿಭಾಗದ ಎಸಿಪಿ‌‌‌ ಸುಧೀರ್ ಹೆಗಡೆ ನೇತೃತ್ವದಲ್ಲಿ ತಂಡ ರಚಿಸಿ ಶೋಧ ಕಾರ್ಯ ನಡೆಸುತ್ತಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.