ETV Bharat / state

ಕಾರೇ ಈತನ ಮನೆ, ಕಳ್ಳತನ ಮಾಡೋದೇ ಕಾಯಕ..ಕೊನೆಗೂ ಸೆರೆ ಸಿಕ್ಕ ಅಪರಾಧಗಳ ಸೆಂಚುರಿ ಪಾತಕಿ - ಬೆಂಗಳೂರು ಕ್ರೈಂ ಸುದ್ದಿ

ಈತನಿಂದ 40 ಲಕ್ಷ ಬೆಲೆಯ 850 ಗ್ರಾಂ ಮೌಲ್ಯದ ಚಿನ್ನಾಭರಣ ವಶಕ್ಕೆ ಪಡೆದುಕೊಂಡಿದ್ದಾರೆ. ಪ್ರಕರಣ ಪತ್ತೆಯಿಂದ ಸುದ್ದಗುಂಟೆಪಾಳ್ಯ 2, ತಿಲಕನಗರ 1, ಹಾಸನ 4, ಕೆ.ಆರ್.ಪೇಟೆ 2, ಚನ್ನರಾಯಪಟ್ಟ 1, ತಿಪಟೂರು 2, ಒಟ್ಟು 12 ಕಳವು ಪ್ರಕರಣಗಳು ಪತ್ತೆಯಾಗಿವೆ.

robber
robber
author img

By

Published : Dec 26, 2020, 10:45 PM IST

Updated : Dec 26, 2020, 11:03 PM IST

ಬೆಂಗಳೂರು: ಹತ್ತಲ್ಲ, ಇಪ್ಪತ್ತಲ್ಲ 100ಕ್ಕಿಂತ ಹೆಚ್ಚು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ ಪೊಲೀಸರಿಗೆ ತಲೆನೋವಾಗಿ ಪರಿಣಾಮಿಸಿದ್ದ ಕುಖ್ಯಾತ ಆರೋಪಿಯನ್ನು ಸುದ್ದುಗುಂಟೆಪಾಳ್ಯ ಪೊಲೀಸರು ಬಂಧಿಸಿದ್ದಾರೆ.

ಮಾಗಡಿ ರಸ್ತೆಯ ನಿವಾಸಿ ಆರೋಪಿ ಸಂತೋಷ್ ಆಲಿಯಾಸ್ ಎಮ್ಮೆ (37) ಬಂಧಿತ ಆರೋಪಿ. ಈತನಿಂದ 40 ಲಕ್ಷ ಬೆಲೆಯ 850 ಗ್ರಾಂ ಮೌಲ್ಯದ ಚಿನ್ನಾಭರಣ ವಶಕ್ಕೆ ಪಡೆದುಕೊಂಡಿದ್ದಾರೆ. ಪ್ರಕರಣ ಪತ್ತೆಯಿಂದ ಸುದ್ದಗುಂಟೆಪಾಳ್ಯ 2, ತಿಲಕನಗರ 1, ಹಾಸನ 4, ಕೆ.ಆರ್.ಪೇಟೆ 2, ಚನ್ನರಾಯಪಟ್ಟ 1, ತಿಪಟೂರು 2, ಒಟ್ಟು 12 ಕಳವು ಪ್ರಕರಣಗಳು ಪತ್ತೆಯಾಗಿವೆ.

robber-who-was-involved-in-more-than-12-cases-arrested
ಸಂತೋಷ್ ಆಲಿಯಾಸ್ ಎಮ್ಮೆ

ಈತನಿಂದ 40 ಲಕ್ಷ ರೂ. ಬೆಲೆ ಬಾಳುವ 850 ಗ್ರಾಂ ತೂಕದ ಚಿನ್ನಾಭರಣ, 250 ಗ್ರಾಂ ಬೆಳ್ಳಿ ಸಾಮಾನುಗಳನ್ನು ವಶಪಡಿಸಿಕೊಳ್ಳಲಾಗಿದೆ. ಈತನ ವಿರುದ್ದ ನಗರದ ತಲ್ಲಘಟ್ಟಪುರ, ಸಿ.ಕೆ.ಅಚ್ಚುಕಟ್ಟು, ಕೋಣನಕುಂಟೆ, ಬನಶಂಕರಿ, ಹಲಸೂರು, ಸುಬ್ರಮಣ್ಯಪುರ, ಗಿರಿನಗರ, ಬಸವನಗುಡಿ, ಜ್ಞಾನಭಾರತಿ, ಪುಟ್ಟೇನಹಳ್ಳಿ, ಭಾರತಿ ನಗರ, ಆರ್.ಎಂ.ಸಿ.ಯಾರ್ಡ್, ಜಯನಗರ ಚಂದ್ರಾಲೇಔಟ್, ಬ್ಯಾಡರಹಳ್ಳಿ ಪೊಲೀಸ್ ಠಾಣೆ ಸೇರಿದಂತೆ ರಾಜ್ಯದ ವಿವಿಧ ಪೊಲೀಸ್ ಠಾಣೆಗಳಲ್ಲಿ 100ಕ್ಕೂ ಹೆಚ್ಚು ಕಳವು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಕಾರ್​ನಲ್ಲಿ ವಾಸ, ಕದಿಯೋದೆ ಇವನ ಕಾಯಕ!

100ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಭಾಗಿಯಾಗಿ ಜೈಲು ಸೇರಿದ್ದ ಈತ ಕಳೆದು ಒಂದು ವರ್ಷದ ಹಿಂದೆ ಜಾಮೀನು ಪಡೆದು ಹೊರ ಬಂದು ಹಳೆ ಚಾಳಿಯನ್ನು ಮುಂದುವರೆಸಿದ್ದ. ಬೆಂಗಳೂರು, ಹಾಸನ, ತುಮಕೂರು ಸೇರಿದಂತೆ ರಾಜ್ಯದೆಲ್ಲೆಡೆ ಸಂಚರಿಸಿ ಬೀಗ ಹಾಕಿದ ಮನೆಗಳನ್ನು ಗುರುತಿಸಿಕೊಂಡು ಮನೆಗಳ್ಳತನ ಮಾಡುತ್ತಿದ್ದ. ಬಂಧನ ಭೀತಿಯಿಂದ ತನ್ನ ಬಳಿಯಿದ್ದ ಕಾರಿನಲ್ಲಿ‌ ರಾಜ್ಯದ ಉದ್ದಗಲ್ಲಕೂ ಸಂಚರಿಸಿ ಕಾರನ್ನು ಮನೆ ಮಾಡಿಕೊಂಡಿದ್ದ. ವಾಮಮಾರ್ಗದಿಂದ ಗಳಿಸಿ ಹಣವನ್ನು ಮೋಜು ಮಸ್ತಿಗಾಗಿ ವಿನಿಯೋಗಿಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

Last Updated : Dec 26, 2020, 11:03 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.