ETV Bharat / state

ಕಸ ವಿಲೇವಾರಿ ಸಮಸ್ಯೆ: ಕಸ ಗೂಡಿಸುವ ಯಂತ್ರಗಳಿಗೆ ಕೋಟ್ಯಂತರ ವೆಚ್ಚ..! - city’s municipal corporation

ರಾಜ್ಯವನ್ನು ಕಸಮುಕ್ತ ಮಾಡುವ ನಿಟ್ಟಿನಲ್ಲಿ ಸರ್ಕಾರವು ನಾನಾ ಕಸರತ್ತು ಮಾಡುತ್ತಿದ್ದು, ಅದರ ಭಾಗವಾಗಿ ಯಾಂತ್ರಿಕ ಕಸ ಗುಡಿಸುವ ಯಂತ್ರಗಳು ಕಾರ್ಯ ನಿರ್ವಹಿಸುತ್ತಿವೆ.

Road Sweeping machines
ಕಸ ಗೂಡಿಸುವ ಯಂತ್ರಗಳಿಗೆ ಕೋಟ್ಯಂತರ ವೆಚ್ಚ
author img

By

Published : Nov 10, 2020, 8:07 PM IST

ಬೆಂಗಳೂರು: ರಾಜ್ಯದ ಬಹುತೇಕ ನಗರಗಳಲ್ಲಿ ಕಸ ವಿಲೇವಾರಿಯ ಸಮಸ್ಯೆ ಕಾಡುತ್ತಿದ್ದು, ರಾಜ್ಯವನ್ನು ಕಸಮುಕ್ತ ಮಾಡುವ ನಿಟ್ಟಿನಲ್ಲಿ ಸರ್ಕಾರ ನಾನಾ ಕಸರತ್ತು ಮಾಡುತ್ತಿದೆ. ಅದರ ಭಾಗವಾಗಿ ಯಾಂತ್ರಿಕ ಕಸ ಗುಡಿಸುವ ಯಂತ್ರಗಳು ಕಾರ್ಯ ನಿರ್ವಹಿಸುತ್ತಿವೆ. ಆದರೂ ಕೂಡ ಈ ಸಮಸ್ಯೆ ಬಗೆಹರಿದಿಲ್ಲ.

ಬೆಂಗಳೂರು ನಗರದ ರಸ್ತೆಗಳನ್ನು ಸ್ವಚ್ಛವಾಗಿಟ್ಟುಕೊಳ್ಳಲು ಬಿಬಿಎಂಪಿಯು, ಇದೀಗ ಮತ್ತೆ 20 ಸ್ವಯಂಚಾಲಿತ ರಸ್ತೆ ಕಸ ಗುಡಿಸುವ ಯಂತ್ರಗಳ ಖರೀದಿಗೆ ಮುಂದಾಗಿದೆ. ಈಗಾಗಲೇ ಒಂದು ಯಂತ್ರಕ್ಕೆ 1 ಕೋಟಿ 36 ಲಕ್ಷ ರೂಪಾಯಿಯಂತೆ, ಒಟ್ಟು 23.28 ಕೋಟಿ ಖರ್ಚು ಮಾಡಿ 17 ವಾಹನಗಳನ್ನು ಖರೀದಿಸಲಾಗಿದೆ. ಅಲ್ಲದೆ ಈ ಹಿಂದೆಯೇ ಪಾಲಿಕೆ ಬಳಿ 9 ವಾಹನಗಳಿದ್ದವು. ಇದರಲ್ಲಿ ಒಂದೆರಡು ವಾಹನ ಕೆಟ್ಟು ನಿಂತಿದ್ದು, ಉಳಿದ 24 ವಾಹನಗಳ ಮಾಸಿಕ ನಿರ್ವಹಣೆಗೆ ಬಿಬಿಎಂಪಿಯು 50 ಲಕ್ಷ ರೂಪಾಯಿ ವೆಚ್ಚ ಮಾಡುತ್ತಿದೆ.

ಸರಿಯಾಗಿ ಜಿಪಿಎಸ್ ವ್ಯವಸ್ಥೆ ಅಳವಡಿಸಿದೆ, ಯಂತ್ರಗಳು ಕೆಲಸ ಮಾಡದಿದ್ದರೂ ಸಾರ್ವಜನಿಕ ತೆರಿಗೆ ಹಣ ಪೋಲು ಮಾಡಲಾಗ್ತಿದೆ ಎಂದು ಆರೋಪವಿದೆ. ಈ ನಡುವೆಯೂ 20 ರಿಂದ 25 ಹೊಸ ವಾಹನಗಳ ಖರೀದಿಗೆ ಪಾಲಿಕೆ ಮುಂದಾಗಿದೆ.

ಕಸ ಗೂಡಿಸುವ ಯಂತ್ರಗಳಿಗೆ ಕೋಟ್ಯಂತರ ವೆಚ್ಚ

ಇನ್ನು ಹುಬ್ಬಳ್ಳಿ ಧಾರವಾಡ ಅವಳಿ ನಗರದ ರಸ್ತೆಗಳನ್ನು ಸ್ವಚ್ಛಗೊಳಿಸಲು, ಈಗಾಗಲೇ 30 ಲಕ್ಷ ಮೌಲ್ಯದ ಎರಡು ಯಂತ್ರಗಳನ್ನು ಖರೀದಿಸಿ ನಿರ್ವಹಣೆಗೆ ಖಾಸಗಿ ಕಂಪನಿಗೆ ನೀಡಲಾಗಿದೆ. ಒಂದು ಯಂತ್ರವು ಎಂಟು ಕಿ.ಮೀ. ಸ್ವಚ್ಛಗೊಳಿಸುವ ಸಾಮರ್ಥ್ಯವನ್ನು ಹೊಂದಿದ್ದು, ಒಂದು ಹುಬ್ಬಳ್ಳಿಯಲ್ಲಿ ಮತ್ತೊಂದು ಧಾರವಾಡದಲ್ಲಿ ಕಾರ್ಯನಿರ್ವಹಿಸುತ್ತಿವೆ.

ಇನ್ನು ಶಿವಮೊಗ್ಗದಲ್ಲಿ ಒಂದು ಯಂತ್ರವನ್ನು‌ ತೆಗೆದು ಕೊಳ್ಳಲಾಗಿತ್ತು. ಆದರೆ ಅದು‌ ಬೇಗನೆ ರಿಪೇರಿಗೆ ಬಂದು‌ ಮೂಲೆ‌‌‌ ಸೇರಿದೆ. ಕಸ ಗುಡಿಸಲು ಯಂತ್ರದ ನಿರ್ವಹಣೆ, ಸರಿಯಾಗಿ ಆಗದ ಕಾರಣ ಅದು ಕೆಟ್ಟು ನಿಂತಿದೆ. ಅದನ್ನು ದುರಸ್ಥಿ ಮಾಡುವ ದುಸ್ಸಾಹಸಕ್ಕೆ ಕೈ ಹಾಕಿಲ್ಲ. ಯಾಕಂದ್ರೆ ಅದರ ವೆಚ್ಚ ಹೊಸ ಮಿಷನ್ ಖರೀದಿಗಿಂತ ದುಬಾರಿಯಾಗಿದೆ. ಇನ್ನು ಕಸಗೂಡಿಸಲು 126 ಪೌರ ಕಾರ್ಮಿಕರ ಕೊರತೆ ಇದ್ದು, ಆದ್ದರಿಂದ ನಗರದಲ್ಲಿ ಸ್ವಚ್ಛತೆ ಮರೆಯಾದಂತಾಗಿದೆ.

ರಸ್ತೆ ಮೇಲಿನ ಕಸ ತೆರವುಗೊಳಿಸಲು ಹಾಗೂ ಧೂಳಿನ ಸಮಸ್ಯೆ ನೀಗಿಸಲು ಈ ಯಂತ್ರಗಳು ಉಪಯುಕ್ತವಾಗಿವೆ. ರಸ್ತೆ ಬದಿಯಲ್ಲಿ ಶೇಖರಣೆಯಾಗುವ ಮಣ್ಣಿನಿಂದಾಗಿ ಬೇಸಿಗೆಯಲ್ಲಿ ಧೂಳೆದ್ದು, ವಾಹನ ಸವಾರರಿಗೆ ಸಾಕಷ್ಟು ತೊಂದರೆಯಾಗುತ್ತಿತ್ತು. ಮಳೆಗಾಲದಲ್ಲಿ ವಾಹನಗಳು ಸ್ಕಿಡ್ ಆಗಿ ಅವಘಡಗಳು ಸಂಭವಿಸುತ್ತಿದ್ದವು. ಇದಕ್ಕೆಲ್ಲ ಪರಿಹಾರವನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ಈ ಯಂತ್ರಗಳು ಕಾರ್ಯನಿರ್ವಹಿಸಲಿವೆ. ಆದರೆ ಇದನ್ನು ಸರಿಯಾಗಿ ನಿರ್ವಹಿಸುವ ಹೊಣೆ ಪಾಲಿಕೆಗಳದ್ದಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.