ಬೆಂಗಳೂರು: ಶಿವಾಜಿನಗರದಲ್ಲಿ ರಿಜ್ವಾನ್ ಅರ್ಷದ್ಗೆ ಎಲ್ಲರ ಸಹಕಾರ ಸಿಗಲಿದೆ. ನಾಳೆ ನಡೆಯಲಿರುವ ಸಭೆಗೆ ಪಾಲಿಕೆ ಸದಸ್ಯರು ಬರುತ್ತಾರೆ ಎಂದು ಮಾಜಿ ಸಚಿವ ಯು ಟಿ ಖಾದರ್ ತಿಳಿಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಶಿವಾಜಿನಗರ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ ಮುಖಂಡರ ಸಭೆ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ನಮ್ಮಲ್ಲಿ ಯಾವುದೇ ಅಸಮಾಧಾನವಿಲ್ಲ. ರಿಜ್ವಾನ್ ಅರ್ಷದ್ ಪರ ಎಲ್ಲರೂ ಇದ್ದಾರೆ. ರಿಜ್ವಾನ್ ಅರ್ಷದ್ ಗೆದ್ದೇ ಗೆಲ್ತಾರೆ ಎಂದು ವಿವರಿಸಿದರು. ರೋಷನ್ ಬೇಗ್ ಸಹಕಾರ ಪಡೆಯುವ ವಿಚಾರ ಮಾತನಾಡಿ, ಪಕ್ಷದ ನಾಯಕರ ಜೊತೆ ಚರ್ಚಿಸಿ ತೀರ್ಮಾನಿಸ್ತೇವೆ. ಅವರ ಬೆಂಬಲ ಪಡೆಯಬೇಕೋ.. ಬೇಡ್ವೋ.. ನಿರ್ಧರಿಸ್ತೇವೆ ಎಂದು ಹೇಳಿದರು.