ಬೆಂಗಳೂರು: ಡಿ.ಜೆ. ಹಳ್ಳಿ ಮತ್ತು ಕೆ.ಜಿ. ಹಳ್ಳಿ ಗಲಭೆ ಪ್ರಕರಣ ಸಂಬಂಧಿಸಿದಂತೆ, ನಗರ ಪೊಲೀಸ್ ಆಯುಕ್ತರ ಕಚೇರಿಗೆ ಶಿವಾಜಿ ನಗರ ಶಾಸಕ ರಿಜ್ವಾನ್ ಅರ್ಷದ್ ಭೇಟಿ ನೀಡಿದ್ದಾರೆ.
ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಅವರನ್ನ ರಿಜ್ವಾನ್ ಅರ್ಷದ್ ಹಾಗೂ ನಿವೃತ್ತ ಹಿರಿಯ ಅಧಿಕಾರಿ ಪೊಲೀಸ್ ಭಾವಾ ಅವರು ಅನಿರೀಕ್ಷಿತವಾಗಿ ಭೇಟಿಯಾಗಿದ್ದು, ಸದ್ಯ ಆಯುಕ್ತರ ಜೊತೆ ಘಟನೆಯ ಕುರಿತು ಮಾತುಕತೆ ನಡೆಸಿರುವ ಸಾಧ್ಯತೆ ಇದೆ.
ಇನ್ನು ಈ ಕುರಿತು 'ಈಟಿವಿ ಭಾರತ' ಪ್ರಶ್ನೆ ಮಾಡಿದಕ್ಕೆ, ಹಾಗೆ ಸುಮ್ಮನೆ ಬಂದಿದ್ದೇವೆ ಎಂದು ತಿಳಿಸಿದ್ದಾರೆ. ಸದ್ಯ ಡಿ.ಜೆ. ಹಳ್ಳಿ ಗಲಭೆ ಪ್ರಕರಣ ಗಂಭೀರ ಸ್ವರೂಪದತ್ತ ಸಾಗುತ್ತಿದ್ದು, ಘಟನೆ ಸಂಬಂಧಿಸಿದ ಕೇಸ್ ಕುರಿತು ಚರ್ಚೆ ನಡೆಸಿರುವ ಸಾಧ್ಯತೆ ಇದೆ.