ಬೆಂಗಳೂರು : ಹಲಾಲ್ ವಿರುದ್ಧ ಹೋರಾಟ ಆರಂಭಿಸಿರುವ ರಿಷಿಕುಮಾರ್ ಸ್ವಾಮಿ ಮಂಗಳವಾರ ಪೇಜಾವರ ಶ್ರೀಗಳ ಸಮಾಧಿಗೆ ಭೇಟಿ ನೀಡಿ ನಮನ ಸಲ್ಲಿಸಿದರು.
ಶ್ರೀಗಳ ಅಪ್ಪಣೆಯ ಮೇರೆಗೆ ಇಂದಿನಿಂದ ಹಲಾಲ್ ವಿರುದ್ಧ ಹೋರಾಟ ಆರಂಭಿಸುತ್ತಿದ್ದೇವೆ ಎಂದು ಅವರು ಹೇಳಿದ್ದಾರೆ. ಬೆಂಗಳೂರಿನ ಬನಶಂಕರಿಯ ವಿದ್ಯಾಪೀಠದಲ್ಲಿರುವ ಪೇಜಾವರ ಶ್ರೀಗಳ ಸಮಾಧಿಗೆ ಭೇಟಿ ನೀಡಿದ ಬಳಿಕ ರಿಷಿಕುಮಾರ್ ಮಾತನಾಡಿದರು.
ಪೇಜಾವರ ಶ್ರೀಗಳು ನಮ್ಮನ್ನು ತಯಾರು ಮಾಡಿದ್ದಾರೆ. ಬೇರೆ ಧರ್ಮದವರು ಮಾಡುತ್ತಿರುವ ಹಲಾಲ್ವನ್ನು ನಮ್ಮ ಧರ್ಮದವರು ಖರೀದಿ ಮಾಡಿ ದೇವರಿಗೆ ಅರ್ಪಣೆ ಮಾಡುತ್ತಿರುವುದು ಅಪರಾಧ ಎಂದರು.
ಇಸ್ಲಾಂ ಧರ್ಮೀಯರು ಮಾಡುತ್ತಿರುವ ಹಲಾಲ್ ವಸ್ತುಗಳನ್ನು ಖರೀದಿ ಮಾಡಬೇಡಿ ಎಂದು ಆಗ್ರಹಿಸಿ ಈ ಅಭಿಯಾನವನ್ನು ರಿಷಿಕುಮಾರ್ ಸ್ವಾಮಿ ಆರಂಭಿಸಿದ್ದಾರೆ.
ಇದನ್ನೂ ಓದಿ: ಭಗವದ್ಗೀತೆ, ಕುರಾನ್ನಲ್ಲಿ ಕೆಟ್ಟ ಸಂಗತಿ ಇದ್ದರೆ ಎರಡನ್ನೂ ಅರಬ್ಬೀ ಸಮುದ್ರಕ್ಕೆ ಬಿಸಾಕಿ : ಸಿ.ಟಿ.ರವಿ