ಬೆಂಗಳೂರು: ರಾಜ್ಯಾದ್ಯಂತ ಕೊರೊನಾ ಎಲ್ಲಾ ಕಡೆಗಳಲ್ಲಿ ವ್ಯಾಪಿಸಿದ್ದು, ಇದೀಗ ಅದರ ನಿಯಂತ್ರಣಕ್ಕೆ ಸರ್ಕಸ್ ಶುರುವಾಗಿದೆ. ಕೊರೊನಾ ಕಂಟ್ರೋಲ್ಗೆ ಸರ್ಕಾರವೂ ಹೊಸ ಹೊಸ ಪ್ಲಾನ್ ಹಾಕಿಕೊಂಡಿದ್ದು, ಇದೀಗ ಹೊರ ರಾಜ್ಯಗಳಿಂದ ಕರ್ನಾಟಕಕ್ಕೆ ಬರುವ ವ್ಯಕ್ತಿಗಳ ಸಂಚಾರ ನಿಯಂತ್ರಿಸುವ ಸಂಬಂಧ ಪರಿಷ್ಕೃತ ಆದೇಶ ಹೊರಡಿಸಿದೆ.
ಕೋವಿಡ್ ಸೋಂಕು ಹರಡುವಿಕೆ ತಡೆಗಟ್ಟಲು, ಕ್ವಾರಂಟೈನ್ ಕಣ್ಗಾವಲನ್ನು ತಾಂತ್ರಿಕತೆ ಮತ್ತು ಕಣ್ಗಾವಲು ತಂಡ ಹೆಚ್ಚಿಸುವ ಮೂಲಕ ಸದೃಢಗೊಳಿಸಲಾಗಿದೆ. ಈ ಹಿನ್ನೆಲೆ ಮಹಾರಾಷ್ಟ್ರದಿಂದ ಆಗಮಿಸುವ ಜನರಿಗೆ ಏಳು ದಿನಗಳ ಕಾಲ ಸಾಂಸ್ಥಿಕ ಕ್ವಾರಂಟೈನ್ ಹಾಗೂ 7 ದಿನ ಹೋಂ ಕ್ವಾರಂಟೈನ್ ಮಾಡಲಾಗುತ್ತದೆ.
ಮಹಾರಾಷ್ಟ್ರ ರಾಜ್ಯವನ್ನು ಹೊರತುಪಡಿಸಿ ಉಳಿದ ರಾಜ್ಯಗಳಿಂದ ಆಗಮಿಸುವ ವ್ಯಕ್ತಿಗಳಿಗೆ, 14 ದಿನ ಹೋಂ ಕ್ವಾರಂಟೈನ್ಗೆ ಆದೇಶಿಸಲಾಗಿದೆ.