ETV Bharat / state

ಕರ್ನಾಟಕದ ಪ್ರವಾಸೋದ್ಯಮ ಉತ್ತೇಜಿಸಲು ಶೀಘ್ರ ಪರಿಷ್ಕೃತ ನೀತಿ ಪ್ರಕಟ: ಸಚಿವ ಎಚ್ ಕೆ ಪಾಟೀಲ್

ಕನ್ನಡಿಗರ ಹೆಮ್ಮೆಯ ರಾಷ್ಟ್ರಕೂಟ ದೊರೆ ಅಮೋಘವರ್ಷ ನೃಪತುಂಗನ ಕೋಟೆಯನ್ನು ಸಂರಕ್ಷಣೆ ಹಾಗೂ ಇನ್ನಷ್ಟು ಅಭಿವೃದ್ಧಿಪಡಿಸಲು ತೀಮಾನಿಸಲಾಗಿದೆ. ರಾಷ್ಟ್ರಕೂಟರ ಕಾಲದ ಕನ್ನಡದ ಹಾಗೂ ದೇಶದ ಮೊದಲ ವಿವಿ ಆಗಿರುವ ನಾಗಾವಿ ವಿಶ್ವವಿದ್ಯಾನಿಲಯದ ಮಹತ್ವಪೂರ್ಣ ಮಾಹಿತಿಗಳು ಲಭ್ಯವಾಗಿವೆ ಎಂದು ಪ್ರವಾಸೋದ್ಯಮ ಸಚಿವ ಎಚ್ ಕೆ‌ ಪಾಟೀಲ್ ತಿಳಿಸಿದರು.

Minister HK Patil spoke to the media.
ಮಾಧ್ಯಮದವರೊಂದಿಗೆ ಸಚಿವ ಎಚ್ ಕೆ ಪಾಟೀಲ್ ಮಾತನಾಡಿದರು.
author img

By ETV Bharat Karnataka Team

Published : Nov 15, 2023, 9:17 PM IST

Updated : Nov 15, 2023, 10:09 PM IST

ಸಚಿವ ಎಚ್ ಕೆ ಪಾಟೀಲ್ ಸುದ್ದಿಗಾರರೊಂದಿಗೆ ಮಾತನಾಡಿದರು.

ಬೆಂಗಳೂರು: ಕರ್ನಾಟಕದಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸಲು ಪರಿಷ್ಕೃತ ಪ್ರವಾಸೋದ್ಯಮ ನೀತಿಯನ್ನು ಸದ್ಯದಲ್ಲೇ ಪ್ರಕಟಿಸುವುದಾಗಿ ಕಾನೂನು ಹಾಗೂ ಪ್ರವಾಸೋದ್ಯಮ ಸಚಿವ ಎಚ್.ಕೆ‌.ಪಾಟೀಲ್ ತಿಳಿಸಿದ್ದಾರೆ.

ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ರಾಜ್ಯದಲ್ಲಿರುವ ಸ್ಮಾರಕಗಳನ್ನು ಸಂರಕ್ಷಿಸಲು ವಿಶೇಷ ಗಮನ ನೀಡಿರುವುದಾಗಿ ಹೇಳಿದ ಅವರು, ಲಲಿತ ಮಹಲ್ ಪ್ಯಾಲೇಸ್ ನವೀಕರಣ, ಮೈಸೂರಿನ ಲಲಿತ ಮಹಲ್ ಪ್ಯಾಲೇಸ್ ಹೋಟೆಲ್​​ ನವೀಕರಿಸಿ ಸಂರಕ್ಷಿಸಲು ನಿರ್ಧರಿಸಲಾಗಿದೆ. ಲಲಿತ ಮಹಲ್ ಹೋಟೆಲ್ ಕಟ್ಟಡ ದುರ್ಬಲವಾಗಿದ್ದು, ಈ ಹಿನ್ನೆಲೆಯಲ್ಲಿ ಅದನ್ನು ಸಂರಕ್ಷಿಸಲು ತುರ್ತಾಗಿ ನವೀಕರಣ ಕಾರ್ಯವನ್ನು ಕೈಗೆತ್ತಿಕೊಳ್ಳಬೇಕಿದೆ ಎಂದ ಅವರು, ಈ ಹಿನ್ನೆಲೆಯಲ್ಲಿ ಟೆಂಡರ್ ಕರೆಯಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಮಾಹಿತಿ ನೀಡಿದರು.

ಈ ಕಟ್ಟಡದ ನವೀಕರಣದ ಕಾರ್ಯವನ್ನು ಸರ್ಕಾರ ಕೈಗೆತ್ತಿಕೊಳ್ಳುವುದಿಲ್ಲ. ಹೀಗಾಗಿ ಈ ಕಾರ್ಯವನ್ನು ಖಾಸಗಿಯವರಿಗೆ ವಹಿಸಿ ಕೊಡಲು ತೀರ್ಮಾನಿಸಲಾಗಿದೆ ಎಂದು ಪ್ರಶ್ನೆಯೊಂದಕ್ಕೆ ಅವರು ಉತ್ತರಿಸಿದರು. ಕನ್ನಡಿಗರ ಹೆಮ್ಮೆಯ ರಾಷ್ಟ್ರಕೂಟ ದೊರೆ ಅಮೋಘವರ್ಷ ನೃಪತುಂಗನ ಕೋಟೆಯನ್ನು ಸಂರಕ್ಷಣೆ ಹಾಗೂ ಅಭಿವೃದ್ಧಿಪಡಿಸಲು ನಿರ್ಧರಿಸಿದ್ದು, ಮಳಖೇಡದಲ್ಲಿರುವ ಈ ಕೋಟೆಯನ್ನು ಒಂದು ಹಂತದಲ್ಲಿ ಸಂರಕ್ಷಿಸುವ ಕೆಲಸವಾಗಿದ್ದರೂ ಅದನ್ನು ಇನ್ನಷ್ಟು ಅಭಿವೃದ್ಧಿಪಡಿಸಲು ತೀಮಾನಿಸಲಾಗಿದೆ ಎಂದು ತಿಳಿಸಿದರು.

ಸ್ಮಾರಕಗಳನ್ನು ಸಂರಕ್ಷಿಸುವ ಯೋಜನೆಗೆ ಸರ್ಕಾರ ಬದ್ಧವಾಗಿದೆ. ಈ ಹಿನ್ನೆಲೆ ಇತ್ತೀಚೆಗೆ ತಾವು ಕೈಗೊಂಡ ಮೂರು ದಿನಗಳ ಪ್ರವಾಸದ ವಿವರ ನೀಡಿದ ಅವರು, ನೃಪತುಂಗನ ಕೋಟೆ ಇರುವ ಮಳಖೇಡಕ್ಕೆ ಭೇಟಿ ನೀಡಿದ ಬಗ್ಗೆ ವಿವರಿಸಿದರು. ನಮ್ಮ ಸ್ಮಾರಕ ದರ್ಶನ ಮತ್ತು ಸಂರಕ್ಷಣೆಗಾಗಿ ಪ್ರವಾಸ ಕಾರ್ಯಕ್ರಮದ ಮೊದಲ ಹಂತದ ಕಾರ್ಯಕ್ರಮ ಪೂರ್ಣಗೊಂಡಿದೆ. ಈ ಸ್ಮಾರಕಗಳ ದರ್ಶನ, ಸಂರಕ್ಷಣೆಗಾಗಿ ಈ ಸ್ಮಾರಕಗಳ ದರ್ಶನ, ಸಂರಕ್ಷಣೆಗಾಗಿ ಪ್ರವಾಸದ ಸಂದರ್ಭದಲ್ಲಿ ಬಸವನಾಡು ಕಲ್ಯಾಣ ಕರ್ನಾಟಕದ ಹಲವು ಹತ್ತು ಸ್ಮಾರಕಗಳ ದರ್ಶನ ಪಡೆಯಲಾಗಿದೆ. ಈ ಸಂದರ್ಭದಲ್ಲಿ ಭೇಟಿ ನೀಡಿದ ಬಹುತೇಕ ಸ್ಮಾರಕಗಳನ್ನು ಆಸಕ್ತ, ಖಾಸಗಿ ವ್ಯಕ್ತಿಗಳಿಗೆ ದತ್ತು ನೀಡಲಾಗಿದೆ ಎಂದು ಮಾಹಿತಿ ನೀಡಿದರು.

ಈ ಸ್ಮಾರಕಗಳ ರಕ್ಷಣೆ ಹಾಗೂ ನಿರ್ವಹಣೆಗೆ ಹಲವಾರು ಸಂಸ್ಥೆಗಳು ಸ್ವಯಂಪ್ರೇರಿತವಾಗಿ ಸರ್ಕಾರದ ದತ್ತು ಯೋಜನೆಗೆ ಸ್ಪಂದಿಸಿವೆ. ಐತಿಹಾಸಿಕ ಬೀದರ್ ಜಿಲ್ಲೆಯ ನರಸಿಂಹ ಝರಣಾ ದೇಗುಲ ದರ್ಶನದೊಂದಿಗೆ ಸಚಿವರು ಪ್ರವಾಸ ಆರಂಭಿಸಿದರು. ಪ್ರವಾಸ ಕಾರ್ಯಕ್ರಮದ ನಿಮಿತ್ತ ಬೀದರ್‌ನ ಅಷ್ಟಕೋನಾಕಾರದ ಬಾವಿಯ ವೀಕ್ಷಣೆ ಮಾಡಲಾಯಿತು. ಇದಾದ ನಂತರ ಇರಾನ್ ದೇಶದ ಸುರಂಗ ಕಾಲುವೆಗಳನ್ನು ಹೋಲುವ ನೀರಿನ ಕರೇಜ್ ಅನ್ನು ತಂಡ ವೀಕ್ಷಿಸಿತು. ಈ ರೀತಿಯ ನೀರಿನ ಕಾಲುವೆಗಳು ಬೀದರ್​​​ನ ವಿಶೇಷಗಳಾಗಿವೆ. ನೂರಾರು ವರ್ಷಗಳ ಹಿಂದೆ ನಿರ್ಮಿಸಿರುವ ಈ ಸುರಂಗ ಕಾಲುವೆಗಳನ್ನು ಅಭಿವೃದ್ಧಿ ಪಡಿಸಿ ಸಂರಕ್ಷಿಸುವ ರೂಪುರೇಷೆಗಳನ್ನು ಸಿದ್ಧಪಡಿಸಲಾಗಿದೆ ಎಂದು ವಿವರಿಸಿದರು.

ರಾಷ್ಟ್ರಕೂಟರ ಕಾಲದ ನಾಗಾವಿ ವಿಶ್ವವಿದ್ಯಾನಿಲಯ: ಇದೇ ರೀತಿ ದೇಶದ ಪುರಾತನ ವಿಶ್ವವಿದ್ಯಾನಿಲಯಗಳಲ್ಲಿ ಒಂದಾದ ನಾಗಾವಿ ವಿಶ್ವವಿದ್ಯಾನಿಲಯ ರಾಷ್ಟ್ರಕೂಟರ ಕಾಲದಲ್ಲಿ ಆರಂಭವಾಗಿದ್ದು, ಈಗಲೂ ಅದರ ಅವಶೇಷಗಳು ಉಳಿದುಕೊಂಡಿವೆ. ಸುಮಾರು 400 ಎಕರೆ ಪ್ರದೇಶದಲ್ಲಿ ಹರಡಿಕೊಂಡಿರುವ ನಾಗಾವಿ ವಿಶ್ವವಿದ್ಯಾನಿಲಯಕ್ಕೆ ಆ ಕಾಲದಲ್ಲಿ ವಿದೇಶಗಳಿಂದ ವ್ಯಾಸಂಗಕ್ಕೆ ಬರುತ್ತಿದ್ದ ಮಾಹಿತಿ ಇದೆ ಎಂದರು.

ಕಲಬುರ್ಗಿ ಜಿಲ್ಲೆಯ ಇತಿಹಾಸ ಪ್ರಸಿದ್ಧ ಶ್ರದ್ಧಾ ಕೇಂದ್ರ ನಾಗಾವಿ ಶ್ರೀ ಯಲ್ಲಮ್ಮ ದೇವಿ ದೇವಾಸ್ಥಾನದ ಐತಿಹಾಸಿಕ ತಾಣಕ್ಕೆ ಭೇಟಿ ನೀಡಲಾಯಿತು. ರಾಷ್ಟಕೂಟರ ಆಳ್ವಿಕೆ ಕಾಲದಲ್ಲಿ ನಾಗಾವಿ ವಿಶ್ವವಿದ್ಯಾಲಯದ ಕೇಂದ್ರವಾಗಿತು ಎಂಬುದು ಪುರಾತತ್ವ ವಸ್ತು ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆಯ ಸಂಶೋಧನೆಯಿಂದ ಬೆಳಕಿಗೆ ಬಂದಿದೆ. ಇಲ್ಲಿರುವ 60 ಕಂಬಗಳ ಮಂಟಪವನ್ನು ಅಂದಿನ ಘಟಿಕಾಸ್ಥಾನ ಎಂದು ಶಾಸದಲ್ಲಿ ಹೆಸರಿಸಲಾಗಿತ್ತು. ಇದನ್ನು ಆಗ ಅಸ್ತಿತ್ವದಲ್ಲಿದ್ದ ಮೊದಲ ಕನ್ನಡ ವಿಶ್ವವಿದ್ಯಾಲಯ ಎಂದು ಇತಿಹಾಸಕಾರರು ಹೆಮ್ಮೆಯಿಂದ ಹೇಳುತ್ತಿದ್ದಾರೆ.

ಹೈದರಾಬಾದ್ ಮ್ಯೂಜಿಯಂ ವಸ್ತು ಸಂಗ್ರಹಾಲಯದಲ್ಲಿ ದೊರಕಿರುವ ಸಾಹಿತ್ಯದಿಂದ ನಾಗಾವಿ ವಿಶ್ವವಿದ್ಯಾಲಯದ ಕುರಿತು ವಿವರ ದೊರಕಿದೆ. ನಾಗಾವಿ ವಿಶ್ವವಿದ್ಯಾನಿಲಯ ಕನ್ನಡಿಗರು ಹೆಮ್ಮೆ ಪಡುವ ಸ್ಮಾರಕವಾಗಿದ್ದು, 1927 ರಲ್ಲಿ ಹೈದರಾಬಾದ್ ನಿಜಾಮ ಈ ವಿಶ್ವವಿದ್ಯಾನಿಲಯದ ಕುರಿತು ಅಧ್ಯಯನಕ್ಕೆ ಪ್ರೋತ್ಸಾಹ ನೀಡಿದ್ದರ ಫಲವಾಗಿ 1928 ರಲ್ಲಿ ಒಂದು ಪುಸ್ತಿಕೆ ಪ್ರಕಟಗೊಂಡಿದೆ. ಇದರಿಂದ ನಾಗಾವಿ ವಿಶ್ವವಿದ್ಯಾನಿಲಯಕ್ಕೆ ಸಂಬಂಧಿಸಿದ ಅನೇಕ ಮಹತ್ವಪೂರ್ಣ ಮಾಹಿತಿಗಳು ಲಭ್ಯವಾಗಿವೆ ಎಂದು ಸಚಿವ ಹೆಚ್​​​​ ಕೆ ಪಾಟೀಲ್​​ ಹೇಳಿದರು.

ಶಿರವಾಳದ ದೇವಾಲಯ ಸಮುಚ್ಚಯ: ಇದೇ ರೀತಿ ಯಾದಗಿರಿ ತಾಲೂಕಿನ ಶಿರವಾಳದಲ್ಲಿ ನೂರಾರು ಎಕರೆ ಪ್ರದೇಶದಲ್ಲಿ ದೇವಾಲಯಗಳ ಸಮುಚ್ಚಯವಿದ್ದು, ಇಂತಹ ಮತ್ತೊಂದು ಸಮುಚ್ಚಯ ಎಲ್ಲೂ ಇಲ್ಲ ಎಂದ ಸಚಿವರು, ಇಲ್ಲಿ ಮುನ್ನೂರಾ ಅರವತ್ತು ಗುಡಿಗಳಿವೆ, ನೂರಾರು ಬಾವಿಗಳಿವೆ ಎಂದು ಪಾಟೀಲ್​ ಸಂಪೂರ್ಣ ವಿವರ ನೀಡಿದರು. ಮಳಖೇಡದ ಕೋಟೆ, ನಾಗಾವಿ ವಿಶ್ವವಿದ್ಯಾನಿಲಯ ಮತ್ತು ಶಿರವಾಳದ ದೇವಾಲಯ ಸಮುಚ್ಚಯವನ್ನು ಸಂರಕ್ಷಿಸಲು ಖಾಸಗಿಯವರಿಗೆ ವಹಿಸಿಕೊಡಲಾಗುವುದು ಎಂದ ಅವರು, ಈ ಕುರಿತು ಹಲವು ಮಂದಿ ಆಸಕ್ತರು ಮುಂದೆ ಬಂದಿದ್ದಾರೆ ಎಂದು ತಿಳಿಸಿದರು.
ಇದನ್ನೂಓದಿ:ಪುತ್ರನನ್ನು ಗ್ರ್ಯಾಂಡ್ ಆಗಿ ಲಾಂಚ್ ಮಾಡಿದ ಯಡಿಯೂರಪ್ಪ: ಮಾಸ್ ಇಮೇಜ್ ಟಚ್ ನೀಡಿದ ಪದಗ್ರಹಣ ಸಮಾರಂಭ

Last Updated : Nov 15, 2023, 10:09 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.