ETV Bharat / state

ಜಕ್ಕೂರು ಏರೊಡ್ರಮ್ ನಲ್ಲಿ ಏರ್ ಕ್ರಾಫ್ಟ್ ಲ್ಯಾಂಡಿಂಗ್, ಪಾರ್ಕಿಂಗ್ ದರ ಪರಿಷ್ಕರಿಸಿ ಆದೇಶ - Revised order to the parking rate for Aircraft landing

ಏರ್ ಕ್ರಾಫ್ಟ್ ಪಾರ್ಕಿಂಗ್ ಪ್ರತಿ ಗಂಟೆಗೆ ರೂ. 50. ಇತ್ತು. ಎಷ್ಟೇ ಸಮಯ ಪಾರ್ಕಿಂಗ್ ಮಾಡಿದರೂ ಪ್ರತಿ ಗಂಟೆಗೆ ರೂ. 50 ಮಾತ್ರ ಬಾಡಿಗೆ ಇತ್ತು. ಇದನ್ನು ಈಗ ಪರಿಷ್ಕರಿಸಲಾಗಿದೆ.

Revised order to the parking rate for Aircraft landing at jakkuru Aerodrome
ಏರ್ ಕ್ರಾಫ್ಟ್ ಪಾರ್ಕಿಂಗ್
author img

By

Published : Sep 11, 2021, 12:09 AM IST

ಬೆಂಗಳೂರು: ಜಕ್ಕೂರು ಸರ್ಕಾರಿ ವೈಮಾನಿಕ ಶಾಲೆಯಲ್ಲಿ ಏರ್ ಕ್ರಾಫ್ಟ್ ಲ್ಯಾಂಡಿಂಗ್ ಹಾಗೂ ಪಾರ್ಕಿಂಗ್ ಶುಲ್ಕವನ್ನು ಹೆಚ್ಚಿಸಿ ಸರ್ಕಾರ ಹೊರಡಿಸಿದೆ.

ಜಕ್ಕೂರು ಸರ್ಕಾರಿ ವೈಮಾನಿಕ ತರಬೇತಿ ಶಾಲೆಯ ಆವರಣದಲ್ಲಿ ಏರ್ ಕ್ರಾಫ್ಟ್ ಹಾಗೂ ಮೈಕ್ರೋ ಏರ್ ಕ್ರಾಫ್ಟ್ ಲ್ಯಾಂಡಿಂಗ್ ಹಾಗೂ ಪಾರ್ಕಿಂಗ್ ಗೆ ಅವಕಾಶವಿದೆ. ಹಲವು ವರ್ಷಗಳಿಂದ ಅತಿ ಕಡಿಮೆ ಶುಲ್ಕ ಇದ್ದರೂ ಶುಲ್ಕ ಪರಿಷ್ಕರಣೆ ಆಗಿರಲಿಲ್ಲ. ಕೆಲ ವರ್ಷಗಳ‌ ಸರ್ಕಾರ ದರ ಪರಿಷ್ಕರಿಸಿದ್ದರೂ ಏರ್ ಕ್ರಾಫ್ಟ್ ಕಂಪೆನಿಗಳು ಮನವಿ ಮಾಡಿದ್ದರಿಂದ ಅದನ್ನು ಸರ್ಕಾರ ಹಿಂಪಡೆದಿತ್ತು. ಸಚಿವ ನಾರಾಯಣಗೌಡ ಅವರು ಅತಿ ಕಡಿಮೆ ಶುಲ್ಕ ಇರುವುದನ್ನು ಗಮನಿಸಿ ಪರಿಷ್ಕರಣೆ ಸಂಬಂಧ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದರು.

ಏರ್ ಕ್ರಾಫ್ಟ್ ಪಾರ್ಕಿಂಗ್ ಪ್ರತಿ ಗಂಟೆಗೆ ರೂ. 50. ಇತ್ತು. ಎಷ್ಟೇ ಸಮಯ ಪಾರ್ಕಿಂಗ್ ಮಾಡಿದರೂ ಪ್ರತಿ ಗಂಟೆಗೆ ರೂ. 50 ಮಾತ್ರ ಬಾಡಿಗೆ ಇತ್ತು. ಇದನ್ನು ಈಗ ಪರಿಷ್ಕರಿಸಲಾಗಿದೆ. ಏರ್ ಕ್ರಾಫ್ಟ್ ಪ್ರತಿ ಲ್ಯಾಂಡಿಂಗ್ ಗೆ ಕೇವಲ ರೂ. 500 ಇತ್ತು. ಮೈಕ್ರೊ ಏರ್ ಕ್ರಾಫ್ಟ್ ಲ್ಯಾಂಡಿಂಗ್ ರೂ. 200 ಹಾಗೂ ಪಾರ್ಕಿಂಗ್ ಪ್ರತಿ ಗಂಟೆಗೆ ರೂ. 10 ಮಾತ್ರ ಇತ್ತು. ಇದೀಗ ನೂತನ ದರವನ್ನು ನಿಗದಿ ಪಡಿಸಲಾಗಿದೆ.

ತಕ್ಷಣದಿಂದಲೆ ಜಾರಿಗೆ ಬರುವಂತೆ ಶುಲ್ಕ ಪರಿಷ್ಕರಣೆ ಮಾಡಿ ಆದೇಶಿಸಲಾಗಿದೆ. ಈವರೆಗೆ ಜಕ್ಕೂರು ಏರೊಡ್ರಮ್ ನಲ್ಲಿ ನಾನ್ ಶೆಡ್ಯುಲ್ಡ್ ಏರ್ ಕ್ರಾಫ್ಟ್ ಲ್ಯಾಂಡಿಂಗ್ ಮತ್ತು ಪಾರ್ಕಿಂಗ್ ವ್ಯವಸ್ಥೆ ಇದೆ. ಆದರೆ ಶೆಡ್ಯುಲ್ಡ್ ಏರ್ ಕ್ರಾಫ್ಟ್ ಲ್ಯಾಂಡಿಂಗ್ ಗೆ ಅವಕಾಶ ಇರಲಿಲ್ಲ. ಸಚಿವ ನಾರಾಯಣಗೌಡ ಅವರು ಪ್ರವಾಸೋಧ್ಯಮ ಸಚಿವರ ಜೊತೆ ಸಭೆ ನಡೆಸಿದ್ದು, ಪ್ರವಾಸೋಧ್ಯಮಕ್ಕೆ ಅನುಕೂಲವಾಗುವಂತೆಯೂ ಏರೊಡ್ರಮ್ ಬಳಕೆ ಆಗುವಂತೆ ವ್ಯವಸ್ಥೆ ಮಾಡಲು ತೀರ್ಮಾನಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಜಕ್ಕೂರು ಏರೊಡ್ರಮ್ ಪ್ರವಾಸೋದ್ಯಮಕ್ಕೂ ತೆರೆದುಕೊಳ್ಳಲಿದೆ. ಶೆಡ್ಯುಲ್ಡ್ ಏರ್ ಕ್ರಾಫ್ಟ್ ಲ್ಯಾಂಡಿಂಗ್ ಮುಂದಿನ ದಿನಗಳಲ್ಲಿ ಆರಂಭವಾಗಲಿದೆ. ಹೀಗಾಗಿ ಶೆಡ್ಯುಲ್ಡ್ ಏರ್ ಕ್ರಾಫ್ಟ್ ಲ್ಯಾಂಡಿಂಗ್ ದರವನ್ನು ಈಗಲೆ ನಿಗದಿ ಮಾಡಲಾಗಿದೆ. ಪ್ರತಿ ಲ್ಯಾಂಡಿಂಗ್ ಗೆ ರೂ. 1000 ದರ ನಿಗದಿ ಮಾಡಲಾಗಿದೆ.

ನೂತನ ದರ ಪಟ್ಟಿಯ ವಿವರ:

  • ಏರ್ ಕ್ರಾಫ್ಟ್ ಪ್ರತಿ ಲ್ಯಾಂಡಿಂಗ್​​ಗೆ - 5000 ರೂ.
  • ಪಾರ್ಕಿಂಗ್ ಪ್ರತಿ ಗಂಟೆಗೆ - 100 ರೂ.
  • 24 ಗಂಟೆ ಬಳಿಕ ಪಾರ್ಕಿಂಗ್ ದರ ಪ್ರತಿ ಗಂಟೆಗೆ ಒಂದು ವಾರದವರೆಗೆ -200 ರೂ.
  • 15 ದಿನಗಳ ವರೆಗೆ ಪಾರ್ಕಿಂಗ್ ದರ -2500 ರೂ.
  • 15 ದಿನದಿಂದ ಒಂದು ತಿಂಗಳಿಗೆ - 50000 ರೂ.
  • ಮೈಕ್ರೊ ಲೈಟ್ ಏರ್ ಕ್ರಾಫ್ಟ್ ಲ್ಯಾಂಡಿಂಗ್ -400 ರೂ.
  • ಪಾರ್ಕಿಂಗ್ ದರ ಪ್ರತಿ ಗಂಟೆಗೆ - 20 ರೂ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.