ಬೆಂಗಳೂರು: ರಾಜ್ಯದಲ್ಲಿ ಕೋವಿಡ್-19 ಹೆಚ್ಚುತ್ತಿರುವ ಸಂದರ್ಭದಲ್ಲಿ ಹೆಚ್ಚಿನ ಸಂಖ್ಯೆಯ ಕೋವಿಡ್ ಪ್ರಕರಣಗಳು ಅಕ್ಕ-ಪಕ್ಕದಲ್ಲಿರುವ/ ಹತ್ತಿರದಲ್ಲಿಯೇ ಇರುವ ಮನೆಗಳು ಅಥವಾ ಅಪಾರ್ಟ್ಮೆಂಟ್/ ವಸತಿ ಸಮುಚ್ಛಯಗಳಲ್ಲಿ ವರದಿಯಾಗುತ್ತಿದೆ. ಇದರಿಂದ ಕಂಟೇನ್ಮೆಂಟ್ ವಲಯಗಳ ಸಂಖ್ಯೆ ಮಿತಿ ಮೀರಿದ್ದು, ಅಧಿಕಾರಿಗಳಿಗೆ ಸರ್ವೇ ಚಟುವಟಿಕೆ ಸುಲಭವಾಗಿ ಕೈಗೊಳ್ಳಲು ಅಡ್ಡಿಯಾಗುತ್ತಿದೆ. ಅಲ್ಲದೇ ಪೆರಿಮೀಟರ್ ಕಂಟ್ರೋಲ್ಅನ್ನು ಸಹ ಖಚಿತಪಡಿಸಿಕೊಳ್ಳುವುದು ಕಷ್ಟ ಸಾಧ್ಯವಾಗಿದೆ. ಈ ಹಿನ್ನೆಲೆಯಲ್ಲಿ ಕಂಟೇನ್ಮೆಂಟ್ ಝೋನ್ ಹಾಗೂ ಬಫರ್ ಝೋನ್ಗಳ ಅಧಿಸೂಚನೆ ಹಾಗೂ ಮುಕ್ತಗೊಳಿಸಿರುವ ಕುರಿತು ಪರಿಷ್ಕೃತ ಸುತ್ತೋಲೆ ಹೊರಡಿಸಿದೆ.
ಕಂಟೆನ್ಮೇಂಟ್ ವಲಯ:
1) ಕಂಟೇನ್ಮೆಂಟ್ ವಲಯ- ಕೊರೊನಾ ದೃಢಪಟ್ಟ ಪ್ರಕರಣ/ ವ್ಯಕ್ತಿಯು ವಾಸವಿರುವ ಮನೆಯ ಸುತ್ತಲಿನ ಸುಸ್ಪಷ್ಟ ( well- defined) ಪ್ರದೇಶವನ್ನ ಕಂಟೇನ್ಮೆಂಟ್ ವಲಯವೆಂದು ಕರೆಯಲಾಗುತ್ತೆ.
2) ಒಂದು ಪ್ರದೇಶದಲ್ಲಿ 20 ಸಕ್ರಿಯ ಕೋವಿಡ್ ಪ್ರಕರಣಗಳು ಇದ್ದರೆ 100 ಮೀಟರ್ ವ್ಯಾಪ್ತಿಯಲ್ಲಿದ್ದ ಪಕ್ಷದಲ್ಲಿ ನಗರ ಮತ್ತು ಗ್ರಾಮೀಣ ಭಾಗದಲ್ಲಿ ವಲಯ ಘೋಷಿಸಬಹುದು.
3) ಮ್ಯಾಪ್ ಮೂಲಕ ಭೌಗೋಳಿಕ ಪ್ರಸರಣದ ಆಧಾರ, ಗುರುತಿಸಲಾದ ಪರಧಿ, ಪರಧಿ ವಲಯ ನಿಯಂತ್ರಣದ ಆಧಾರದ ಮೇಲೆ ವಲಯವೆಂದು ಅಧಿಕಾರಿಗಳು ಘೋಷಿಸಬೇಕು.
4) ಮನೆಯಲ್ಲಿಯೇ ಒಬ್ಬರು ಪ್ರತ್ಯೇಕವಾಗಿ ಸಿಸಿಸಿಯಲ್ಲಿದ್ದರೆ ಅಥವಾ ಆಸ್ಪತ್ರೆಯಲ್ಲಿದ್ದರೆ ಇದರ ಆಧಾರ ಮೇಲೆ ಕಂಟೇನ್ಮೆಂಟ್ ವಲಯವನ್ನ ಘೋಷಿಸುವಂತಿಲ್ಲ.
5) ಮನೆಯ ಮೇಲೆ ನೋಟಿಸ್ ಅಂಟಿಸುವುದು, ಬ್ಯಾರಿಕೇಡ್ ಅಳವಡಿಸುವುದು, ಹ್ಯಾಂಡ್ ಸ್ಟ್ಯಾಪಿಂಗ್ ಮಾಡುವಂತಿಲ್ಲ.
ಬಫರ್ ಝೋನ್: ಹೊಸದಾಗಿ ಕೋವಿಡ್ ಪ್ರಕರಣಗಳು ವರದಿಯಾಗುವ ಸಂಭವವಿರುವ ಪ್ರದೇಶವನ್ನು ಬಫರ್ ಝೋನ್ ಎಂದು ಕರೆಯಲಾಗುತ್ತೆ. ನಗರ ಮತ್ತು ಗ್ರಾಮೀಣ ಪ್ರದೇಶಗಳಿಗೆ ಅನ್ವಯವಾಗುವಂತೆ ಕಂಟೇನ್ಮೆಂಟ್ ವಲಯದ ಸುತ್ತಲಿನ 200 ಮೀಟರ್ ಪ್ರದೇಶವನ್ನು ಬಫರ್ ಝೋನ್ ಎಂದು ಕರೆಯಲಾಗುತ್ತದೆ.
- ಪ್ರತಿದಿನ ಮನೆ ಮನೆ ಸಮೀಕ್ಷೆ ನಡೆಸಬೇಕು.
- ಬಫರ್ ಝೋನ್‌ನಲ್ಲಿ ಕಡ್ಡಾಯವಾಗಿ ವಾರದಲ್ಲಿ ಎರಡು ಬಾರಿ ಸಮೀಕ್ಷೆ - ಕೋವಿಡ್ ಪರೀಕ್ಷೆ ನಡೆಸಬೇಕು.
- ಕೋವಿಡ್ ವರದಿಯಾದ 14 ದಿನಗಳ ನಂತರ 20ಕ್ಕಿಂತ ಕಡಿಮೆ ಸಕ್ರಿಯ ಕೇಸ್ಗಳಿದ್ದಲ್ಲಿ ಕಂಟೇನ್ಮೆಂಟ್ ವಲಯ ಮುಂದುವರೆಯಲಿದೆ.