ಬೆಂಗಳೂರು: ರಾಜ್ಯದಲ್ಲಿ 4.O ಲಾಕ್‌ಡೌನ್ ನ ಪರಿಷ್ಕೃತ ಮಾರ್ಗಸೂಚಿಯನ್ನು ರಾಜ್ಯ ಸರ್ಕಾರ ಹೊರಡಿಸಿದೆ. ಅಧಿಕಾರಿಗಳ ಜೊತೆ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ್ದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ರಾಜ್ಯದಲ್ಲಿ ಕಂಟೇನ್ಮೆಂಟ್ ಝೋನ್ ಹೊರತು ಪಡಿಸಿ ಇತರೆಡೆ ಬಹುತೇಕ ಎಲ್ಲಾ ಚಟುವಟಿಕೆ, ವ್ಯಾಪಾರ, ವಹಿವಾಟಿಗೆ ಅನುಮತಿ ನೀಡಲಾಗುವುದು ಎಂದು ಸ್ಪಷ್ಟಪಡಿಸಿದ್ದರು.
ಅದರಂತೆ ಮೇ 31ರ ವರೆಗಿರುವ ನಾಲ್ಕನೇ ಹಂತದ ಲಾಕ್‌ಡೌನ್ ನ ಪರಿಷ್ಕೃತ ಮಾರ್ಗಸೂಚಿಯನ್ನು ಸರ್ಕಾರ ಹೊರಡಿಸಿದೆ.
ನಾಳೆಯಿಂದ ಏನೆಲ್ಲಾ ಇರಲಿದೆ :
- ವಾಣಿಜ್ಯ ಚಟುವಟಿಕೆಗಳಿಗೆ ಪೂರ್ಣ ವಿನಾಯಿತಿ
- ಓಲಾ, ಉಬರ್, ಕ್ಯಾಬ್, ಆಟೋಗಳ ಸಂಚಾರ
- ಬಿಎಂಟಿಸಿ, ಕೆಎಸ್ ಆರ್ ಟಿಸಿ, ಖಾಸಗಿ ಬಸ್ ಸಂಚಾರ
- ಅಂತರ್ ಜಿಲ್ಲೆಗಳ ಓಡಾಟಕ್ಕೆ ಪಾಸ್ ಇಲ್ಲ
- ಎಲ್ಲಾ ಅಂಗಡಿ ಮುಂಗಟ್ಟುಗಳ ವಹಿವಾಟಿಗೆ ಅವಕಾಶ
- ಅಂತರ್ ಜಿಲ್ಲೆ ರೈಲು ಸಂಚಾರ
- ಎಲ್ಲಾ ಸರ್ಕಾರಿ ಕಚೇರಿ 100% ಸಿಬ್ಬಂದಿ ಹಾಜರಾತಿ
- ಸಲೂನ್, ಸ್ಪಾ, ಬ್ಯೂಟಿ ಪಾರ್ಲರ್, ಆಭರಣ ಅಂಗಡಿ ಓಪನ್
- ಮದ್ಯ ಮಾರಾಟ ಅಬಾಧಿತ
- ಪ್ರೇಕ್ಷಕರಿಲ್ಲದೆ ಕ್ರೀಡಾಂಗಣ, ಸ್ಟೇಡಿಯಂಗಳ ಕಾರ್ಯಚಟುವಟಿಕೆಗೆ ಅವಕಾಶ
- ಪಾರ್ಕ್ ಗಳಿಗೆ ನಿರ್ಬಂಧಿತ ಅನುಮತಿ
- ಎರಡು ರಾಜ್ಯ ಒಪ್ಪಿದರೆ ಅಂತಾರಾಜ್ಯ ಬಸ್ ಸಂಚಾರ
ಯಾವುದಕ್ಕೆ ಅವಕಾಶ ಇರುವುದಿಲ್ಲ: - ಹೋಟೆಲ್, ರೆಸ್ಟೋರೆಂಟ್, ಪಬ್ ಗಿಲ್ಲ ಅವಕಾಶ
- ಮೆಟ್ರೋ ರೈಲು, ವಿಮಾನ ಹಾರಾಟ ಇಲ್ಲ
- ಸಿನಿಮಾ ಥಿಯೇಟರ್, ಮಾಲ್ ಇರಲ್ಲ
- ಜಿಮ್, ಈಜುಕೊಳ, ಬಾರ್ಗಳು ಇರಲ್ಲ
- ಶಾಲಾ ಕಾಲೇಜುಗಳು ಬಂದ್
- ದೇಗುಲ, ಚರ್ಚ್, ಮಸೀದಿಗಳು ತೆರೆಯಲ್ಲ
- ಧಾರ್ಮಿಕ ಸಭೆ, ಸಮಾರಂಭ, ಪ್ರಾರ್ಥನೆಗೆ ನಿಷೇಧ
- ಕಂಟೇನ್ಮೆಂಟ್ ಪ್ರದೇಶದಲ್ಲಿ ಎಲ್ಲವೂ ನಿಷೇಧ
- ಸಂಜೆ 7 ರಿಂದ ಬೆಳಗ್ಗೆ 7 ರ ವರೆಗೆ ನಿಷೇಧಾಜ್ಞೆ
- ಪ್ರತಿ ಭಾನುವಾರ ಸಂಪೂರ್ಣ ಲಾಕ್‌ಡೌನ್
- 65 ವರ್ಷ ಮೇಲ್ಪಟ್ಟವರು, ಗರ್ಭಿಣಿ, 10 ವರ್ಷ ಕೆಳಗಿನ ಮಕ್ಕಳಿಗೆ ಹೊರ ಬರಲು ನಿರ್ಬಂಧ