ಬೆಂಗಳೂರು: ಜಯ ಕರ್ನಾಟಕ ಸಂಸ್ಥಾಪಕ, ಮಾಜಿ ಡಾನ್ ಮುತ್ತಪ್ಪ ರೈ ತನ್ನ ಜೊತೆ ಕೆಲಸ ಮಾಡಿದವರಿಗೆ ಆಸ್ತಿಯನ್ನ ಹಂಚಿದ್ದಾರೆಂಬುದನ್ನ ಅವರ ವಕೀಲರು ಬಹಿರಂಗಪಡಿಸಿದ್ದರು. ಹೀಗಾಗಿ ಇದರ ಕುರಿತು ಮುತ್ತಪ್ಪ ರೈ ಭೂಗತ ಪಾತಕಿಯಾಗಿದ್ದ ವೇಳೆ ತನಿಖೆ ನಡೆಸಿದ್ದ, ನಿವೃತ್ತ ಪೊಲೀಸ್ ಅಧಿಕಾರಿ ಬಿ ಕೆ ಶಿವರಾಮ್ ಈ ಬಗ್ಗೆ ಮಾತಾಡಿದ್ದಾರೆ.
ಭೂಗತ ಲೋಕವನ್ನು ಆಳಿದವರು ಪೊಲೀಸರು, ಡಾನ್ಗಳು ಅಲ್ಲ ಎಂದು ಹೇಳಿದ್ದಾರೆ. ಪೊಲೀಸರನ್ನು ಮೀರಿ ಭೂಗತ ಲೋಕವಿಲ್ಲ. ಅವರು ಜನರ ಮಧ್ಯೆ ಧೈರ್ಯವಾಗಿ ಓಡಾಟ ಮಾಡಿಲ್ಲದ ಹೇಡಿಗಳು ಎಂದಿದ್ದಾರೆ.
ಬೆಂಗಳೂರು ಬಹಳಷ್ಟು ಬೆಳೆಬಾಳುವ ನಗರ. ಇಲ್ಲಿರುವ ಭೂಮಿಗೆ ಬಹಳಷ್ಟು ಬೇಡಿಕೆಯಿದೆ. ಹೀಗಾಗಿ ಮುತ್ತಪ್ಪ ರೈ ಅಂತಹ ಡಾನ್ಗಳು ಬಡವರನ್ನ ಹೆದರಿಸಿ, ಸಂಘಟನೆ ಬಾವುಟ ಹಿಡಿದು ಹುನ್ನಾರದ ಆಸ್ತಿ ಮಾಡಿದ್ದಾರೆ ಎಂದು ಹೇಳಿದ್ದಾರೆ. ಆಸ್ತಿಗಳನ್ನು ಒಳ್ಳೆಯ ದಾರಿಯಿಂದ ಮಾಡಿಲ್ಲ.
ರೈ ಹಂಚಿದ ಆಸ್ತಿ ಎಲ್ಲವೂ ಬಡವರದ್ದಾಗಿದೆ. ಆತ ದಾನ ಶೂರ ಕರ್ಣ ಅಲ್ಲ. ಆತ ಕೆಲಸಗಾರರಿಗೆ ನೀಡಿರುವ ಆಸ್ತಿ ಬಡವರ ಪಾಲಿನದ್ದು ಎಂದು ತಿಳಿಸಿದ್ದಾರೆ.