ಬೆಂಗಳೂರು: ಕೋವಿಡ್ ನಂತರ ಶುರವಾಗಿದ್ದ ಹ್ಯಾಕಿಂಗ್ ಹಾವಳಿ ಇನ್ನೂ ನಿಂತಂತೆ ಕಾಣುತ್ತಿಲ್ಲ. ಪೊಲೀಸರ ಖಾತೆಗಳನ್ನೇ ಟಾರ್ಗೆಟ್ ಮಾಡ್ತಿರುವ ಸೈಬರ್ ಖದೀಮರು ತಮ್ಮ ಕೈಚಳಕ ಮುಂದುವರೆಸಿದ್ದು, ಈ ಬಾರಿ ರಿಟೈರ್ಡ್ ಅಧಿಕಾರಿ ಟೈಗರ್ ಅಶೋಕ್ ಕುಮಾರ್ ಸಾಮಾಜಿಕ ಜಾಲತಾಣದ ಖಾತೆಗೆ ಕನ್ನ ಹಾಕಲಾಗಿದೆ.
ಇದನ್ನೂ ಓದಿ: ಇನ್ನೊಂದು ತಿಂಗಳು ಪ್ರತಿಭಟನೆ ಮಾಡಿದರೂ ಬಗ್ಗಲ್ಲ, ಮುಷ್ಕರನಿರತರಿಗೆ ವೇತನ ನೀಡಲ್ಲ; ಸಿಎಂ
ಅಶೋಕ್ ಕುಮಾರ್ ಫೇಸ್ಬುಕ್ ಅಕೌಂಟ್ ಹ್ಯಾಕ್ ಮಾಡಲಾಗಿದ್ದು, ಈ ಬಗ್ಗೆ ಎಚ್ಚರ ವಹಿಸುವಂತೆ ಅಶೋಕ್ ಕುಮಾರ್ ಮನವಿ ಮಾಡಿದ್ದಾರೆ. ಯಾರೂ ಕೂಡ ಮೆಸೇಜ್ಗಳಿಗೆ ಉತ್ತರ ನೀಡದಂತೆ ಹಾಗೂ ಯಾವುದೇ ರೀತಿಯ ಹಣ ಹಾಕದಂತೆ ಮನವಿ ಮಾಡಿದ್ದಾರೆ.