ಬೆಂಗಳೂರು: ಚುನಾವಣೆಯಲ್ಲಿ ಅನೇಕ ಅವ್ಯವಹಾರಗಳು ನಡೆಯುತ್ತಿದ್ದು, ಈ ಬಗ್ಗೆ ಚುನಾವಣಾ ಆಯೋಗಕ್ಕೆ ತಿಳಿದರೂ ಏನು ಮಾಡದ ಪರಿಸ್ಥಿತಿಯನ್ನು ಎದುರಿಸುತ್ತಿದೆ ಎಂದು ನಿವೃತ್ತ ಐಎಎಸ್ ಅಧಿಕಾರಿ ಡಿ.ಆರ್. ದಾಸ್ ಗುಪ್ತಾ ಹೇಳಿದರು.
ಪ್ರೆಸ್ ಕ್ಲಬ್ನಲ್ಲಿ ಪೀಪಲ್ ಫಸ್ಟ್ ವತಿಯಿಂದ ಆಯೋಜಿಸಿದ್ದ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿ, ಚುನಾವಣೆಯನ್ನು ಪಾರದರ್ಶವಾಗಿ ಮಾಡುವ ಅಗತ್ಯ ಬಹಳಷ್ಟು ಇದೆ. ಆದರೆ, ಚುನಾವಣೆ ಅಳವಡಿಸಿರುವ ತಾಂತ್ರಿಕ ಯಂತ್ರಗಳಲ್ಲಿ ಕೆಲವೊಂದು ಸಲ ಮಾಡುವ ಬದಲಾವಣೆಯಿಂದ ಎಲ್ಲಿ ನಿಜಕ್ಕೂ ಏನಾಗಿದೆ ಎಂದು ತಿಳಿಯಲು ಸಾಧ್ಯವಿಲ್ಲ ಎಂದರು.
ಚುನಾವಣಾ ಆಯೋಗದ ಕೆಲವೊಂದು ನಿಯಮಗಳು ಬದಲಾಗಬೇಕು. ಮುಖ್ಯವಾಗಿ ಯಾವುದೇ ಪಕ್ಷಕ್ಕೆ ಬರುವ ಹಣದ ಮೂಲದ ಕುರಿತು ಅರಿಯಬೇಕು. ಅದು ಚಿಕ್ಕ ಪ್ರಮಾಣದ ಹಣವೇ ಆಗಿದ್ದರೂ ಅದರ ಕುರಿತು ಪಾರದರ್ಶಕತೆ ಇದ್ದಾಗ ರಾಜಕೀಯದಲ್ಲಿ ಆಗುವ ಅವ್ಯವಹಾರಕ್ಕೆ ಕಡಿವಾಣ ಬೀಳುತ್ತದೆ ಎಂದು ಹೇಳಿದರು.
ಅನೇಕ ಚುನಾವಣೆಗಳು ಮತ್ತು ಅಲ್ಲಿ ಆಗುವ ಕೆಲವೊಂದು ತಾಂತ್ರಿಕ ಮತ್ತು ಆಂತರಿಕ ಅವ್ಯವಹಾರದ ಕುರಿತು ಈ ಸಿಸಿಜಿ (ಸಿಟಿಜನ್ಸ್ ಕಮೀಷನ್ ಆನ್ ಎಲೆಕ್ಷನ್) ಮತ್ತು ಪೀಪಲ್ ಫಸ್ಟ್ ಸಾಕ್ಷಿ ಸಂಶೋಧನಾ ಆಧಾರಿತ ವರದಿ ಬಿಡುಗಡೆ ಮಾಡುತ್ತಿದೆ. ಅದರಲ್ಲಿರುವ ಸತ್ಯಾಂಶಗಳನ್ನು ತಿಳಿದುಕೊಂಡು ಜನರು ಯಾವ ರೀತಿ ದೇಶವನ್ನು ಉಳಿಸಿಕೊಳಲು ಮುನ್ನಡೆ ಬಗ್ಗೆ ಯೋಚಿಸಲು ಸಾಧ್ಯವಾಗುತ್ತದೆ ಎಂದರು.
ಇದನ್ನೂ ಓದಿ: ಬೆಂಗಳೂರಿಗೆ ಆಗಮಿಸಿದ ಯಶವಂತ ಸಿನ್ಹಾ.. ನಾಳೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಭಾಗಿ