ETV Bharat / state

ಪಿ ಜಿ ಹಲರನ್‌ಕರ್ ನಿಧನ : ದೇಹದಾನ ಮಾಡಿ ಸಾರ್ಥಕತೆ ಮೆರೆದ ನಿವೃತ್ತ ಡಿಜಿಪಿ - ನಿವೃತ್ತ ಡಿಜಿಪಿ ಪಿ ಜಿ ಹಲಂಕರ್ ನಿಧನ

ಮೃತ ದೇಹ ಇಂದು ಮಧ್ಯಾಹ್ನ 2ಗಂಟೆಗೆ ಆಸ್ಪತ್ರೆ ತಲುಪಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ವೈದ್ಯಕೀಯ ಉದ್ದೇಶಗಳಿಗೆ ದೇಹವನ್ನು ದಾನ ಮಾಡಬೇಕೆಂದು ಅವರು ಬದುಕಿರುವಾಗಲೇ ಇಚ್ಛೆ ವ್ಯಕ್ತಪಡಿಸಿದ್ದರು..

Retired DGP P G Halankar Pass Away
ನಿವೃತ್ತ ಡಿಜಿಪಿ ಪಿ ಜಿ ಹಲಂಕರ್ ನಿಧನ
author img

By

Published : Jan 3, 2021, 11:06 AM IST

ಬೆಂಗಳೂರು : ನಿವೃತ್ತ ಡಿಜಿಪಿ ಪಿ ಜಿ ಹಲಂಕರ್ ( 88) ನಿನ್ನೆ ತಡ ರಾತ್ರಿ ವಿಕ್ರಮ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಸಾವಿನಲ್ಲೂ ಸಾರ್ಥಕತೆ ಮೆರೆದಿರುವ ಪ್ರಾಮಾಣಿಕ ಅಧಿಕಾರಿ ಪಿ ಜಿ ಹಲರನ್‌ಕರ್ ಮಾಡಿವಾಳದ ಸೇಂಟ್ ಜಾನ್ಸ್ ಆಸ್ಪತ್ರೆಗೆ ದೇಹ ದಾನ ಮಾಡಿದ್ದಾರೆ.

ಹಲರನ್‌ಕರ್ ಅವರು ಪತ್ನಿ,ಇಬ್ಬರು ಪುತ್ರರನ್ನು ಅಗಲಿದ್ದಾರೆ. ಅದರಲ್ಲಿ ಹಿರಿಯ ಮಗ ಸಮರ್ ಹಲರನ್‌ಕರ್ ಖ್ಯಾತ ಪತ್ರಕರ್ತರಾಗಿದ್ರೆ, ಇನ್ನೊಬ್ಬ ಮಗ ಅಮೆರಿಕದಲ್ಲಿ ಸಾಫ್ಟ್‌ವೇರ್ ಉದ್ಯೋಗಿಯಾಗಿದ್ದಾರೆ. ಕೇಂದ್ರ ಮೀಸಲು ಪಡೆಯ ಡಿಜಿ ಆಗಿ ಹಲರನ್‌ಕರ್ ಅವರು ನಿವೃತ್ತಿ ಹೊಂದಿದ್ದರು.

Retired DGP P G Halankar Pass Away
ನಿವೃತ್ತ ಡಿಜಿಪಿ ಪಿ ಜಿ ಹಲಂಕರ್ ನಿಧನ

ಮೃತ ದೇಹ ಇಂದು ಮಧ್ಯಾಹ್ನ 2ಗಂಟೆಗೆ ಆಸ್ಪತ್ರೆ ತಲುಪಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ವೈದ್ಯಕೀಯ ಉದ್ದೇಶಗಳಿಗೆ ದೇಹವನ್ನು ದಾನ ಮಾಡಬೇಕೆಂದು ಅವರು ಬದುಕಿರುವಾಗಲೇ ಇಚ್ಛೆ ವ್ಯಕ್ತಪಡಿಸಿದ್ದರು.

ಶವವನ್ನು ಎಂಬಾಲ್ಮಿಂಗ್ ಮಾಡಲು ಶವಾಗಾರದಲ್ಲಿ ಇಡಲಾಗುತ್ತದೆ. ಸಂಬಂಧಿಕರು ಮತ್ತು ಆಸ್ಪತ್ರೆ ಮೂಲಗಳ ಪ್ರಕಾರ ಸೋಮವಾರ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. ಇವರು ಮಾರ್ಚ್ 1983 ರಿಂದ ಡಿಸೆಂಬರ್ 1986ರವರೆಗೆ ಬೆಂಗಳೂರು ನಗರ ಪೊಲೀಸ್ ಆಯುಕ್ತರಾಗಿ ಸೇವೆ ಸಲ್ಲಿಸಿದ್ದರು.

ಓದಿ : ಜನವರಿ 4 ರಿಂದ ಬೆಂಗಳೂರು ಏರ್​​ಪೋರ್ಟ್ ರೈಲು ನಿಲ್ದಾಣಕ್ಕೆ ರೈಲು ಸಂಚಾರ ಆರಂಭ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.