ETV Bharat / state

ಮಹಿಳಾ ಹೆಡ್​ಕಾನ್​ಸ್ಟೇಬಲ್ ಕಾರ್ಯಕ್ಕೆ ನಿವೃತ್ತ ಡಿಜಿ ಅಜಯ್‌ ಕುಮಾರ್ ಸಿಂಗ್ ಮೆಚ್ಚುಗೆ - Retired DG Ajay Kumar Singh News

ಕೊರೊನಾ ವಾರಿಯರ್​ ಆಗಿ ಕಾರ್ಯ ನಿರ್ವಹಿಸಿದ್ದ ಮಹಿಳಾ ಕಾನ್​ಸ್ಟೇಬಲ್ ಕಾರ್ಯವನ್ನು ಮೆಚ್ಚಿ ನಿವೃತ್ತ ಡಿಜಿ ಅಜಯ್ ಕುಮಾರ್ ಸಿಂಗ್ ಅವರು, ಚೆನ್ಮಮ್ಮ ಅವರಿಗೆ ಸನ್ಮಾನಿಸಿ ಐದು ಸಾವಿರ ನಗದು ನೀಡಿ ಪ್ರಶಂಸೆ ವ್ಯಕ್ತಪಡಿಸಿದರು‌‌.

Retired DG Ajay Kumar Singh
ಮಹಿಳಾ ಹೆಡ್​ಕಾನ್​ಸ್ಟೇಬಲ್ ಕಾರ್ಯಕ್ಕೆ ಗೌರವಿಸಿದ ನಿವೃತ್ತ ಡಿಜಿ ಅಜಯ್‌ ಕುಮಾರ್ ಸಿಂಗ್
author img

By

Published : Nov 22, 2020, 1:42 PM IST

ಬೆಂಗಳೂರು: ಕೊರೊನಾದಂತಹ ಸಂದಿಗ್ಧ ಪರಿಸ್ಥಿತಿಯ ನಡುವೆಯೂ ದಿಟ್ಟತನದಿಂದ ಉತ್ತಮವಾಗಿ ಕೆಲಸ‌ ಮಾಡಿದ್ದ ಹೆಣ್ಣೂರು ಪೊಲೀಸ್ ಠಾಣೆಯ ಮಹಿಳಾ ಕಾನ್​ಸ್ಟೇಬಲ್ ಚೆನ್ನಮ್ಮ ಅವರ ಕರ್ತವ್ಯವನ್ನು ಮೆಚ್ಚಿ ನಿವೃತ್ತ ಡಿಜಿ ಅಜಯ್ ಕುಮಾರ್ ಸಿಂಗ್ ಗೌರವಿಸಿದ್ದಾರೆ.

ಲಾಕ್​ಡೌನ್ ವೇಳೆ ತಮ್ಮ ಠಾಣಾ ವ್ಯಾಪ್ತಿಯಲ್ಲಿ ಶ್ರಮಿಸಿದ್ದ ಚೆನ್ನಮ್ಮ ಕೆಲಸವನ್ನು ನೋಡಿ ಇತ್ತೀಚೆಗೆ ಚಂದನಾ ವಾಹಿನಿ ಅತ್ಯುತ್ತಮ ಕೊರೊನಾ ವಾರಿಯರ್ಸ್​ಗಳಾಗಿ ಪ್ರಶಸ್ತಿ ನೀಡಿ ಗೌರವಿಸಿತ್ತು. ಇದನ್ನು ಕಂಡ ನಿವೃತ್ತ ಐಪಿಎಸ್ ಅಧಿಕಾರಿ ಅಜಯ್ ಕುಮಾರ್ ಸಿಂಗ್ ಇಂದು ನಗರ ಪೂರ್ವ ಡಿಸಿಪಿ ಕಚೇರಿಗೆ ಬಂದು ಡಿಸಿಪಿ ಶರಣಪ್ಪ ನೇತೃತ್ವದಲ್ಲಿ ಚೆನ್ಮಮ್ಮ ಅವರನ್ನು ಸನ್ಮಾನಿಸಿ ಐದು ಸಾವಿರ ನಗದು ನೀಡಿ ಪ್ರಶಂಸೆ ವ್ಯಕ್ತಪಡಿಸಿದರು‌‌.

ಈ ವೇಳೆ‌ ಮಾತನಾಡಿದ ಅವರು, ಪೊಲೀಸರ ಮನೋಬಲ ಹೆಚ್ಚಿಸುವ ನಿಟ್ಟಿನಲ್ಲಿ ಮಹಿಳಾ ಕಾನ್​ಸ್ಟೇಬಲ್‌ ಚೆನ್ನಮ್ಮ ಅವರನ್ನು ಗೌರವಿಸಲಾಗಿದೆ‌. ಇದೇ ರೀತಿ ಎಲ್ಲರೂ ಉತ್ತಮವಾಗಿ ಕೆಲಸ ಮಾಡಿ ಎಂದು ಶುಭ ಹಾರೈಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.