ದೇವನಹಳ್ಳಿ: ಮೇ 25 ರಿಂದ ದೇಶಿಯ ವಿಮಾನ ಸೇವೆಗೆ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದ ಹಿನ್ನೆಲೆ, ಮೊದಲ ದಿನವಾದ ಸೋಮವಾರ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ 74 ವಿಮಾನಗಳು ಹಾರಾಟ ನಡೆಸಿದ್ದು, 74 ವಿಮಾನಗಳ ಹಾರಾಟ ರದ್ದಾಗಿವೆ.
ಸೋಮವಾರ ಬೆಳಗ್ಗೆ 5:15ಕ್ಕೆ ಮೊದಲ ಏರ್ ಏಷ್ಯಾ ವಿಮಾನ ಬೆಂಗಳೂರಿನಿಂದ ರಾಂಚಿಗೆ ಹಾರಿದೆ. ಬೆಳಗ್ಗೆ 7:35ಕ್ಕೆ ಚೆನ್ನೈಯಿಂದ ಬೆಂಗಳೂರಿಗೆ ಇಂಡಿಗೋ ವಿಮಾನ ಆಗಮಿಸಿದೆ. ಸಂಜೆ 5 ಗಂಟೆಯ ತನಕ ಒಟ್ಟು 74 ವಿಮಾನಗಳು ಕೆಐಎಎಲ್ನಿಂದ ಹಾರಾಟ ನಡೆಸಿದ್ದು, 43 ವಿಮಾನಗಳು ನಿರ್ಗಮಿಸಿದರೆ, 31 ವಿಮಾನಗಳು ಆಗಮಿಸಿವೆ. 74 ವಿಮಾನಗಳ ಹಾರಾಟ ರದ್ದಾಗಿದೆ.
ನಿನ್ನೆ ಒಂದೇ ದಿನ ಸುಮಾರು 5,800 ಪ್ರಯಾಣಿಕರು ಬೆಂಗಳೂರಿನಿಂದ ದೇಶದ ವಿವಿಧ ಭಾಗಗಳಿಗೆ ಪ್ರಯಾಣಿಸಿದ್ದಾರೆ. ಅದೇ ರೀತಿ 2,800 ಪ್ರಯಾಣಿಕರು ದೇಶದ ವಿವಿಧ ಭಾಗಗಳಿಂದ ಬೆಂಗಳೂರಿಗೆ ಆಗಮಿಸಿದ್ದಾರೆ.