ETV Bharat / state

ಕರ್ನಾಟಕ ರಾಜ್ಯೋತ್ಸವದಲ್ಲೂ ಪುನೀತ್ ನೆನಪು ಸ್ಮರಿಸುತ್ತಿರುವ ಕನ್ನಡ ಭವನ.. - respect to punith rajkumar in kannada rajyotsava function

ಈಗ ಕನ್ನಡ ಭವನ ಮತ್ತು ರವೀಂದ್ರ ಕಲಾಕ್ಷೇತ್ರದಲ್ಲಿ ಕನ್ನಡ ರಾಜ್ಯೋತ್ಸವಕ್ಕೆ ವಿಶೇಷ ಲೈಟಿಂಗ್ ವ್ಯವಸ್ಥೆ ಮಾಡಲಾಗಿದೆ. ಅದರಲ್ಲೂ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರಿಗೆ ಗೌರವ ಸಲ್ಲಿಸುವ ಫೋಟೋಗಳನ್ನು ಪ್ರೊಜೆಕ್ಟರ್ ಮೂಲಕ ಗೋಡೆಗಳಿಗೆ ಹರಿ ಬಿಡಲಾಗುತ್ತಿದೆ..

respect-to-punith-rajkumar-in-kannada-rajyotsava-function
ಪುನೀತ್ ನೆನಪು ಸ್ಮರಿಸುತ್ತಿರುವ ಕನ್ನಡ ಭವನ
author img

By

Published : Oct 31, 2021, 10:44 PM IST

Updated : Nov 1, 2021, 7:40 AM IST

ಬೆಂಗಳೂರು : ಪವರ್​ಸ್ಟಾರ್ ಪುನೀತ್ ರಾಜ್​ಕುಮಾರ್ ಹಠಾತ್ ನಿಧನಕ್ಕೆ ಇಡೀ ಕರ್ನಾಟಕ ರಾಜ್ಯ ದುಃಖತಪ್ತವಾಗಿದೆ. ಅದರಲ್ಲೂ ರಾಜ್ಯ ಸರ್ಕಾರವು ಪುನೀತ್​​ ನಿಧನರಾದ ಸಮಯದಿಂದ ಅಂತ್ಯಸಂಸ್ಕಾರದವರೆಗೂ ಸಕಲ ರೀತಿಯಲ್ಲಿ ಕಾರ್ಯನಿರ್ವಹಿಸಿ ಜನರ ಮೆಚ್ಚುಗೆಗೆ ಪಾತ್ರವಾಗಿದೆ.

ಈ ಮಧ್ಯೆ ಕನ್ನಡ ರಾಜ್ಯೋತ್ಸವಕ್ಕೆ ವಿಶೇಷ ಅಭಿಯಾನವನ್ನು ರಾಜ್ಯ ಸರ್ಕಾರ ಈ ಬಾರಿ ಹಮ್ಮಿಕೊಂಡಿತ್ತು. ಆದರೆ, ಪುನೀತ್ ರಾಜ್​ಕುಮಾರ್ ಅಕಾಲಿಕ ಮರಣದಿಂದ ಎಲ್ಲಾ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ತಾತ್ಕಾಲಿಕ ಬ್ರೇಕ್ ಹಾಕಿತ್ತು.

ಈಗ ಕನ್ನಡ ಭವನ ಮತ್ತು ರವೀಂದ್ರ ಕಲಾಕ್ಷೇತ್ರದಲ್ಲಿ ಕನ್ನಡ ರಾಜ್ಯೋತ್ಸವಕ್ಕೆ ವಿಶೇಷ ಲೈಟಿಂಗ್ ವ್ಯವಸ್ಥೆ ಮಾಡಲಾಗಿದೆ. ಅದರಲ್ಲೂ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರಿಗೆ ಗೌರವ ಸಲ್ಲಿಸುವ ಫೋಟೋಗಳನ್ನು ಪ್ರೊಜೆಕ್ಟರ್ ಮೂಲಕ ಗೋಡೆಗಳಿಗೆ ಹರಿ ಬಿಡಲಾಗುತ್ತಿದೆ.

"ಮಾತಾಡ್ ಮಾತಾಡ್ ಕನ್ನಡ" "ಕನ್ನಡಕ್ಕಾಗಿ ನಾವು" ಎನ್ನುವ ಕರ್ನಾಟಕ ರಾಜ್ಯೋತ್ಸವದ ವಿಶೇಷ ಅಭಿಯಾನವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಕ್ಟೋಬರ್ 29ರಿಂದ 31ರವರೆಗೂ ಹಮ್ಮಿಕೊಂಡಿತ್ತು.

ಈ ಹಿನ್ನೆಲೆಯಲ್ಲಿ ಪ್ರೊಜೆಕ್ಟರ್ ಮೂಲಕ ಕನ್ನಡ ಭವನ ಮತ್ತು ರವೀಂದ್ರ ಕಲಾ ಕ್ಷೇತ್ರದ ಕಟ್ಟಡಗಳಿಗೆ ಬೆಳಕಿನಲ್ಲಿ ಕನ್ನಡ ರಾಜ್ಯೋತ್ಸವದ ಬಗೆಗೆ ಮತ್ತು ಪುನೀತ್ ರಾಜಕುಮಾರ್ ಅವರ ಭಾವಚಿತ್ರವನ್ನು ಪ್ರದರ್ಶಿಸಲಾಗುತ್ತಿದೆ.

ಗೀತ ಗಾಯನ, ವಿಚಾರ ಸಂಕಿರಣ ಕಾವ್ಯ ಕುಂಚ ಗಾಯನ, ಸುಗಮ ಸಂಗೀತ, ವಾದ್ಯ ಸಂಗೀತ ಜಾನಪದ ನೃತ್ಯ, ರೂಪಕ, ಯಕ್ಷಗಾನ, ಶಾಸ್ತ್ರೀಯ ನೃತ್ಯ, ನಾಟಕ ಪ್ರದರ್ಶನ, ಭರತನಾಟ್ಯ, ವೀಣಾವಾದನ ಹೀಗೆ ಹತ್ತು ಹಲವು ಕಾರ್ಯಕ್ರಮಗಳನ್ನು ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಹಮ್ಮಿಕೊಂಡಿತ್ತು.

ಆದರೆ, ಸಾಕಷ್ಟು ಕಲಾ ಕಾರ್ಯಕ್ರಮಗಳು ರದ್ದುಗೊಂಡಿವೆ. ಆದರೆ, ಬಿಲ್ಡಿಂಗ್​ಗಳ ಮೇಲೆ ಪುನೀತ್ ರಾಜ್​ಕುಮಾರ್ ಅವರ ಕನ್ನಡದ ಬಾವುಟದ ಮೇಲಿನ ಚಿತ್ರವನ್ನು ಲೈಟಿಂಗ್ ವ್ಯವಸ್ಥೆಯ ಮೂಲಕ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮಾಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಸಹ ಮೆಚ್ಚುಗೆಗೆ ಪಾತ್ರವಾಗಿದೆ.

ಅಗಲಿದ ಮೇರು ನಟನಿಗೆ ಈ ಮೂಲಕ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಶ್ರದ್ಧಾಂಜಲಿ ಸಲ್ಲಿಸುತ್ತಿದೆ. ಸಂಗೀತ-ನೃತ್ಯ ಕಾರ್ಯಕ್ರಮಗಳು ರದ್ದುಗೊಂಡಿದ್ದರೂ ನಾಳೆ ನಡೆಯುವ ಕನ್ನಡ ರಾಜ್ಯೋತ್ಸವವನ್ನು ಪುನೀತ್ ರಾಜಕುಮಾರ್ ನೆನೆಯುವ ಮೂಲಕ ಸರಳವಾಗಿ ಆಚರಿಸಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ಧರಿಸಿದೆ.

ಕನ್ನಡ ಕನ್ನಡ ಭವನದ ಮೇಲೆ ವಿಶೇಷ ಲೈಟಿಂಗ್ ವ್ಯವಸ್ಥೆಯನ್ನು ಪುನೀತ್ ರಾಜಕುಮಾರ್​ಗೆ ಗೌರವ ಸೂಚಿಸುವ ಮೂಲಕ ಮಾಡಲಾಗಿದೆ. ಈ ಪ್ರಯತ್ನ ಜನರ ಮೆಚ್ಚುಗೆಗೂ ಪಾತ್ರವಾಗಿದೆ ಎಂದು ಅಧಿಕಾರಿಗಳು ಹೇಳುತ್ತಾರೆ.

ಕಲಾಕೃತಿಯಲ್ಲಿ ಮೂಡಿದ ಪುನೀತ್: ಕನ್ನಡ ರಾಜ್ಯೋತ್ಸವದ ಪ್ರಯುಕ್ತ ನಡೆಯುತ್ತಿರುವ ಕಲಾಕೃತಿ ರಚನೆ ಮಾಡುವ ಕಾರ್ಯಾಗಾರದಲ್ಲಿ ಅಪ್ಪು ಮುಖವನ್ನು ಹೋಲುವ ಕಲಾಕೃತಿಯನ್ನು ಕೆಲವೇ ಗಂಟೆಗಳಲ್ಲಿ ತಯಾರಿಸುವ ಮೂಲಕ ಕಲಾವಿದರೂ ಸಹ ಶ್ರದ್ದಾಂಜಲಿ ಅರ್ಪಿಸಿದ್ದಾರೆ.

punith-rajkumar
ಕಲಾಕೃತಿಯಲ್ಲಿ ಮೂಡಿದ ಪುನೀತ್ ರಾಜ್​ಕುಮಾರ್
ಸರಳ ರಾಜ್ಯೋತ್ಸವ: ಒಟ್ಟಿನಲ್ಲಿ ದೊಡ್ಡಮನೆ ಕಿರಿಮಗ ಪುನೀತ್ ರಾಜ್​ಕುಮಾರ್ ಅಗಲಿಕೆಯ ದುಃಖದಲ್ಲಿ ಈ ಬಾರಿಯ ಕನ್ನಡ ರಾಜ್ಯೋತ್ಸವ ಅತ್ಯಂತ ಸರಳವಾಗಿ ರಾಜ್ಯ ಸರ್ಕಾರ, ಪಾಲಿಕೆ ಮತ್ತು ಹಲವು ಸಂಘಟನೆಗಳಿಂದ ನಡೆಯಲಿದೆ.

ಓದಿ: ಇತಿಹಾಸ ಉಪನ್ಯಾಸಕ, ಸಾಹಿತಿ ಕೊಳ್ಳೇಗಾಲದ ಮಹಾದೇವಗೆ ಒಲಿದ ರಾಜ್ಯೋತ್ಸವ ಪ್ರಶಸ್ತಿ

Last Updated : Nov 1, 2021, 7:40 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.