ETV Bharat / state

ಮುನ್ನೆಲೆಗೆ ಬಂದಿರುವ ಮೀಸಲಾತಿ ಹೋರಾಟಗಳು : ಇದರಿಂದಾಗುವ ಲಾಭ, ನಷ್ಟವೇನು?

1999-2000ರಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಬೇರ್ಪಟ್ಟು ಪ್ರತ್ಯೇಕ ನಿರ್ದೇಶನಾಲಯವನ್ನು ಹೊಂದಿದೆ. ಇದೀಗ ಪಂಚಮಸಾಲಿ ಲಿಂಗಾಯತ ಸಮುದಾಯದವರು ಹಿಂದುಳಿದ 2ಎಗೆ ಸೇರ್ಪಡೆ ಮಾಡುವಂತೆ ಬೇಡಿಕೆ ಇಟ್ಟರೆ, ಕುರುಬ ಸಮುದಾಯವನ್ನು ಪರಿಶಿಷ್ಟ ವರ್ಗ(ಎಸ್ಟಿ)ಕ್ಕೆ ಸೇರಿಸಬೇಕೆಂದು ಒತ್ತಡ ಹಾಕಲಾಗುತ್ತಿದೆ..

Reservations Special Story
ಮುನ್ನೆಲೆಗೆ ಬಂದಿರುವ ಮೀಸಲಾತಿಗಳು
author img

By

Published : Feb 10, 2021, 7:58 PM IST

ಬೆಂಗಳೂರು : ಕೇಂದ್ರ ಸರ್ಕಾರದ ಎಸ್​​​ಸಿ, ಎಸ್​​​ಟಿ ಹಾಗೂ ಒಬಿಸಿ ಮೀಸಲಿನಿಂದ ರಾಜ್ಯದ 139 ಹಿಂದುಳಿದ ಜಾತಿಗಳು ಹೊರಗಿವೆ. ಅದರಲ್ಲೂ ಪ್ರಮುಖವಾಗಿ ರಾಜ್ಯದಲ್ಲಿ ತೀರಾ ಹಿಂದುಳಿದ ಜಾತಿಗಳೆಂದು ಗುರುತಿಸಲ್ಪಡುವ ಪ್ರವರ್ಗ-1ರಡಿ ಬರುವ ರಾಜ್ಯದ 46 ಜಾತಿಗಳಿಗೆ, ಕೇಂದ್ರ ಸರ್ಕಾರ ಯಾವುದೇ ಮೀಸಲು ಕಲ್ಪಿಸುತ್ತಿಲ್ಲ.

ಈ ಜಾತಿಗಳನ್ನು ರಾಜ್ಯದಲ್ಲಿ ಅತಿ ಹಿಂದುಳಿದ ಜಾತಿಗಳಾಗಿ ಗುರುತಿಸಿದ್ದು, ಇಂತಹ ಜಾತಿಗಳಿಗೆ ಮೀಸಲಾತಿ ನೀಡದಿರುವುದರಿಂದ ಕೇಂದ್ರದ ಶಿಕ್ಷಣ ಹಾಗೂ ಉದ್ಯೋಗದಲ್ಲಿ ಆದ್ಯತೆ ಸಿಗದೆ ಅನ್ಯಾಯ ಆಗುತ್ತಿದೆ. ಹೀಗಾಗಿ, 46 ಜಾತಿಗಳಿಗೆ ಮೀಸಲಾತಿ ನೀಡುವಂತೆ ಶಿಫಾರಸು ಮಾಡಲು ರಾಜ್ಯ ಸರ್ಕಾರ ಸಿದ್ಧತೆ ನಡೆಸುತ್ತಿದೆ.

ರಾಜ್ಯದಲ್ಲಿ ಹಿಂದುಳಿದ ವರ್ಗಗಳ ಪೈಕಿ ಪ್ರವರ್ಗ-1ಕ್ಕೆ ಸೇರಿರುವ ಜಾತಿಗಳನ್ನು ದಯನೀಯ ಸ್ಥಿತಿಯಲ್ಲಿರುವ ಜಾತಿಗಳು ಎಂದು ಗುರುತಿಸಲಾಗಿದೆ. ರಾಜ್ಯದಲ್ಲಿ ಅಲೆಮಾರಿ, ಅರೆ ಅಲೆಮಾರಿ, ಬುಡಕಟ್ಟು ಲಕ್ಷಣಗಳಿರುವ ಪ್ರವರ್ಗ-1ರ 95 ಜಾತಿ ಹಾಗೂ 296 ಉಪ ಜಾತಿಗಳ ಆರ್ಥಿಕ ಹಾಗೂ ಶೈಕ್ಷಣಿಕ, ಸಾಮಾಜಿಕ ಸ್ಥಿತಿಗತಿ ಕೆಳಮಟ್ಟದಲ್ಲಿದೆ.

ಇನ್ನು, ಕೇಂದ್ರ ಸರ್ಕಾರ ಆರ್ಥಿಕ ಹಿಂದುಳಿದ ಮೇಲ್ವರ್ಗದ ಅಭ್ಯರ್ಥಿಗಳಿಗೆ ಶೇ.10ರಷ್ಟು ಮೀಸಲಾತಿ ಕಲ್ಪಿಸಿ ಸಂವಿಧಾನ ತಿದ್ದುಪಡಿ ಮಾಡಿದೆ. ಇದರ ಅನ್ವಯ ರಾಜ್ಯದಲ್ಲೂ ಮೇಲ್ವರ್ಗಗಳಿಗೆ ಮೀಸಲಾತಿ ಕಲ್ಪಿಸುವ ಒತ್ತಡಕ್ಕೆ ರಾಜ್ಯ ಸರ್ಕಾರ ಸಿಲುಕಿದೆ.

ಕೇಂದ್ರದ ಯಾವುದೇ ಮೀಸಲಾತಿ ಸೌಲಭ್ಯ ಪಡೆಯದ 144 ಜಾತಿಗಳನ್ನು ಗುರುತಿಸಿ ಈಗಾಗಲೇ ಪ್ರಮಾಣಪತ್ರ ವಿತರಣೆಯನ್ನು ರಾಜ್ಯ ಸರ್ಕಾರ ಆರಂಭಿಸಿದೆ. ಈ ಪೈಕಿ ರಾಜ್ಯದಲ್ಲಿ 139 ಜಾತಿಗಳು ಈಗಾಗಲೇ ಒಬಿಸಿ ಮೀಸಲಾತಿ ಪಡೆಯುತ್ತಿವೆ. ಉಳಿದಂತೆ ಐದು ಜಾತಿಗಳಿಗೆ ಮೀಸಲಾತಿ ಕಲ್ಪಿಸುವ ಬಗ್ಗೆ ರಾಜ್ಯ ಸರ್ಕಾರ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ.

ಇಡಬ್ಲ್ಯೂಎಸ್‌ ಮೀಸಲಾತಿ ಸ್ಥಿತಿಗತಿ ಹೀಗಿರುವಾಗ ಈವರೆಗೂ ತಲೆಕೆಡಿಸಿಕೊಳ್ಳದ ಪ್ರವರ್ಗ-1ರ 46 ಜಾತಿಗಳಿಗೆ ಕೇಂದ್ರದ ಮೀಸಲಾತಿ ಕೊಡಿಸಲು ಇದೀಗ ಮುಂದಾಗಿದೆ.

ಜಾತಿಗಳ್ಯಾವು?: ಗುಸಾಯಿ, ಲಾಂಬಾಡಿ, ದೇವದಾಸಿ, ತೆವಾರ್‌, ವಂಜಾರ, ಆಗಮುಡಿ, ಮುತ್ರಾಚ, ಬಾವಂದಿ, ದಾವಾರಿ, ಹೆಳವ, ನಂದಿವಾಳ, ಮೊಗೆರ, ಬಂದೆ-ಬೆಸ್ತರ, ಕಬ್ಬೇರ, ಖಾರ್ವಿ, ಕಿಳ್ಳಿಕ್ಯಾತ,ಬಸವಿ, ಬೊಗಂ, ಗಣಿಕ, ಕಲಾವಂತ, ಗೊಣಿಗ ಮನೆ, ಗೂರ್ಖಾ, ಲಾಡರು, ಯೆಳಗಲ್‌, ಮಲಯ, ಗೌರಿಗ, ಪಂಗುಯಲ್‌,ಪಂಗುಸಲ್‌, ಜೀನಗಾರ, ಕಲಾರಿ, ಕಲ್ಲಾರ, ಕಲ್ಲು ಕುಟಿಗ, ಉಪ್ಪಾರ, ಪಾಡಿ, ಡೆರಿಯ, ಸಾರಂತ, ಗೌಳಿ, ತೆಲುಗು ಗೌಡ, ಬಂಜಾರಿ, ಬ್ರಿಂಜಾರಿ, ವಂಜಾರಿ, ಗೊರೆ, ರೆಮೊಷಿ, ಪರದಿಸಿ, ಕಾಡುಗೊಲ್ಲ, ಹಟ್ಟಿಗೊಲ್ಲ, ಬೈರಾಗಿ.

ಹಿಂದುಳಿದ ವರ್ಗಗಳ ಆಯೋಗದ ಪ್ರಕಾರ, ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ಯಾವುದೇ ಜಾತಿಗೆ ಮೀಸಲಾತಿ ನೀಡಿ ಎಂದು ಸ್ವಯಂ ಪ್ರೇರಿತವಾಗಿ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡುವುದಕ್ಕೆ ಬರುವುದಿಲ್ಲ. ರಾಜ್ಯ ಸರ್ಕಾರ ಇಂತಹ ಪ್ರಯತ್ನಕ್ಕೆ ಕೈ ಹಾಕಿರಲಿಲ್ಲ. ಕಾರಣ, ಕೇಂದ್ರ ಮಟ್ಟದಲ್ಲಿ ಕೇಂದ್ರ ಹಿಂದುಳಿದ ವರ್ಗಗಳ ಆಯೋಗ ಇದೆ.

ಅದು ಅಧ್ಯಯನ ಮಾಡಿ ಹಿಂದುಳಿದಿರುವಿಕೆ ಆಧಾರದ ಮೇಲೆ ಮೀಸಲಾತಿ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡುತ್ತದೆ. ಇನ್ನು, ರಾಜ್ಯ ಸರ್ಕಾರ ಅಥವಾ ರಾಜ್ಯ ಹಿಂದುಳಿದ ವರ್ಗಗಳಿಗೆ ಯಾರಾದರೂ ಮನವಿ ನೀಡಿದರೆ ಅದನ್ನು ಕೇಂದ್ರಕ್ಕೆ ಕಳುಹಿಸಿ ಕೊಡಲಾಗುತ್ತದೆ.

ತೊಡಕುಗಳೇನು?: ಸಾಮಾನ್ಯ ವರ್ಗಕ್ಕೆ ಸೇರಿದ ಆರ್ಥಿಕವಾಗಿ ಹಿಂದುಳಿದವರಿಗೆ ಶಿಕ್ಷಣ, ಉದ್ಯೋಗದಲ್ಲಿ ಶೇ.10ರಷ್ಟು ಮೀಸಲು ಕಲ್ಪಿಸಿದ ತೀರ್ಮಾನ ಈ ವರ್ಷದ ಆರಂಭದಲ್ಲಿ ಚರ್ಚೆ ಹುಟ್ಟು ಹಾಕಿತು. ಈ ತೀರ್ಮಾನದಲ್ಲಿ ತಪ್ಪೇನಿಲ್ಲ ಎಂದು ಮೇಲ್ನೋಟಕ್ಕೆ ಅನಿಸಬಹುದು. ಆದರೆ, ಇದರಿಂದಾಗುವ ಲಾಭ–ನಷ್ಟ ನಿಚ್ಚಳವಾಗಿ ಗೋಚರಿಸಬೇಕಾದ್ರೆ, ಸಂವಿಧಾನ ಮತ್ತು ಮೀಸಲು ವ್ಯವಸ್ಥೆಯ ಒಳ ಹೊರಗನ್ನು ಅರ್ಥಮಾಡಿಕೊಳ್ಳಬೇಕು.

ಆರ್ಥಿಕ ಸ್ಥಿತಿಗತಿ ಆಧರಿಸಿ ಪ್ರಥಮ ಬಾರಿಗೆ ದೇಶದಲ್ಲಿ ಜಾರಿಗೆ ತಂದಿರುವ ಮೀಸಲಾತಿ ಇದು. ಪರಿಶಿಷ್ಟ ಜಾತಿ–ಪಂಗಡ ಹಾಗೂ ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದ ಇತರ ವರ್ಗಗಳಿಗೆ ನೀಡಿರುವ ಒಟ್ಟು ಶೇ.50ರಷ್ಟು ಮೀಸಲಾತಿಯನ್ನು ಹೊರತುಪಡಿಸಿ ನೀಡಿದ ಮೀಸಲಾತಿಯೂ ಹೌದು. ಈ ಮೀಸಲಾತಿ ಪಡೆಯಲು ಆರ್ಥಿಕವಾಗಿ ಹಿಂದುಳಿದವರ ವಾರ್ಷಿಕ ಆದಾಯ ₹8 ಲಕ್ಷದ ಒಳಗಿರಬೇಕು. ಅವರಿಗೆ 5 ಎಕರೆಗಿಂತ ಕಡಿಮೆ ಜಮೀನು ಇರಬೇಕು. 1,000 ಚದರ ಅಡಿಗಿಂತ ಕಡಿಮೆ ವಿಸ್ತೀರ್ಣದ ಮನೆ ಇರಬೇಕು ಇತರ ಮಾನದಂಡಗಳಿವೆ.

ಒಬಿಸಿ ಪಟ್ಟಿಗೆ ಬರುವುದಾದರೆ, ಕೇಂದ್ರ ಸರ್ಕಾರದಲ್ಲಿ ಎಲ್ಲ ರಾಜ್ಯಗಳಿಗೂ ಸಂಬಂಧಿಸಿದಂತೆ ಪ್ರತ್ಯೇಕವಾದ ಒಬಿಸಿ ಪಟ್ಟಿ ಇದೆ. ನಮ್ಮ ರಾಜ್ಯಕ್ಕೆ ಸಂಬಂಧಿಸಿದಂತೆ ಕೇಂದ್ರದಲ್ಲಿರುವ ಒಬಿಸಿ ಪಟ್ಟಿಯಲ್ಲಿ 199 ಜಾತಿ ಮತ್ತು ಉಪಜಾತಿಗಳಿವೆ. ಆದರೆ, 2002ರಲ್ಲಿ ಕರ್ನಾಟಕ ಸರ್ಕಾರ ತಯಾರಿಸಿದ ಒಬಿಸಿ ಪಟ್ಟಿಯಲ್ಲಿ 208 ಜಾತಿ ಮತ್ತು ಉಪಜಾತಿಗಳಿವೆ. ಕೇಂದ್ರದ ಒಬಿಸಿ ಪಟ್ಟಿಗೂ ರಾಜ್ಯದ ಒಬಿಸಿ ಪಟ್ಟಿಗೂ ತಾಳೆಯಾಗುವುದೇ ಇಲ್ಲ.

ಉದಾಹರಣೆಗೆ, ಕರ್ನಾಟಕದಲ್ಲಿರುವ ಅಗಮುಡಿ ಸಮುದಾಯವು ರಾಜ್ಯದ ಒಬಿಸಿ ಪಟ್ಟಿಯ ಪ್ರವರ್ಗ–1ರ ಅಡಿ ಬರುತ್ತದೆ. ಆದರೆ, ಈ ಸಮುದಾಯವು ಕೇಂದ್ರದ ಒಬಿಸಿ ಪಟ್ಟಿಯಲ್ಲಿ ಇಲ್ಲ. ರಾಜ್ಯದಲ್ಲಿ ಅತಿ ಹಿಂದುಳಿದ ವರ್ಗಕ್ಕೆ ಸೇರಿರುವ ಈ ಸಮುದಾಯವನ್ನು ಆರ್ಥಿಕವಾಗಿ ಹಿಂದುಳಿದಿದೆ ಎನ್ನುವ ಏಕೈಕ ಕಾರಣಕ್ಕೆ ಶೇ.10ರ ಮೀಸಲು ಪಟ್ಟಿಗೆ ಹಾಕಿದ್ರೆ, ಈ ಸಮುದಾಯವು ಶಿಕ್ಷಣ ಮತ್ತು ಉದ್ಯೋಗಕ್ಕಾಗಿ ಪ್ರಬಲ ಜಾತಿಗಳೊಂದಿಗೆ ಸ್ಪರ್ಧಿಸಲು ಸಾಧ್ಯವೇ?.

ಅಂತೆಯೇ, ಕೇಂದ್ರದ ಒಬಿಸಿ ಪಟ್ಟಿಯಲ್ಲಿ ಇಲ್ಲದ ಹೆಳವ, ಕಳ್ಳೇಕ್ಯಾತದಂಥ ಅಲೆಮಾರಿ, ಅರೆ ಅಲೆಮಾರಿ ಸಮುದಾಯಗಳು ಬ್ರಾಹ್ಮಣ, ಜೈನರಂಥ ಪ್ರಬಲ ಜಾತಿಗಳ ಜೊತೆಗೆ ಸ್ಪರ್ಧಿಸುವುದನ್ನು ಊಹಿಸಲು ಸಾಧ್ಯವೇ ?

ರಾಜ್ಯದಲ್ಲಿ ಅಲೆಮಾರಿ, ಅರೆ ಅಲೆಮಾರಿ, ಪ್ರವರ್ಗ-1ರ ಅಡಿ ಇತರೆ ಹಿಂದುಳಿದ ವರ್ಗಗಳನ್ನು ಬಹಳ ಶೋಚನಿಯ ಸ್ಥಿತಿಯಲ್ಲಿರುವ ತಳಸಮುದಾಯಗಳೆಂದು ಪರಿಗಣಿಸಿ, ಕೆನೆ ಪದರದ ಆದಾಯ ಮಿತಿಯಿಂದ ವಿನಾಯಿತಿ ನೀಡಲಾಗಿದೆ. ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ಅಲೆಮಾರಿ, ಅರೆ ಅಲೆಮಾರಿ ಸಮುದಾಯಗಳಿಗೆ ಬಜೆಟ್​​​ನಲ್ಲಿ ಅತಿ ಹಿಂದುಳಿದ ಸಮಾಜಗಳೆಂದು ಪರಿಗಣಿಸಿತ್ತು. ಹೆಚ್.ಡಿ. ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರ ಸಹ 2018-19ನೇ ಸಾಲಿನ ಬಜೆಟ್​​​ನಲ್ಲಿ ಕಳ್ಳೇಕ್ಯಾತ, ದೊಂಬಿ ದಾಸ, ಹೆಳವ, ಹೂವಾಡಿಗ, ಕಂಚುಗಾರ, ದರ್ಜಿ, ಬುಡಬುಡಿಕೆ, ತಿಗಳ, ಬಡಿಗೆ, ಹಟ್ಗಾರ, ಕರೆಒಕ್ಕಲಿಗ ಇತ್ಯಾದಿ ಸಮುದಾಯಗಳ ಅಭಿವೃದ್ಧಿಗಾಗಿ 10 ಕೋಟಿ ರೂ. ಅನುದಾನ ತೆಗೆದಿಟ್ಟಿತ್ತು.

ಈ ತಳ ಸಮುದಾಯಗಳು ಆರ್ಥಿಕವಾಗಿ ಹಿಂದುಳಿದ ವರ್ಗಗಳ ಪಟ್ಟಿಗೆ ಸೇರಿದರೆ, ರಾಜ್ಯ ಸರ್ಕಾರ ನೀಡುತ್ತಿರುವ ಸೌಲಭ್ಯಗಳು ಕೇಂದ್ರ ಸರ್ಕಾರದ ಮಟ್ಟದಲ್ಲಿ ಕೈತಪ್ಪಿ ಹೋಗುವ ಸಾಧ್ಯತೆ ಇದೆ. ರಾಜ್ಯದಲ್ಲಿ ಅಲೆಮಾರಿ, ಅರೆಅಲೆಮಾರಿ ಜಾತಿಗಳು ನಮ್ಮನ್ನು ಇತರೆ ಯಾವುದೇ ಹಿಂದುಳಿದ ಜಾತಿಗಳ ಜೊತೆಗೆ ಸೇರಿಸದೆ, ಪ್ರತ್ಯೇಕವಾಗಿ ವರ್ಗೀಕರಿಸಿ ಸೂಕ್ತ ಪ್ರಮಾಣದಲ್ಲಿ ಮೀಸಲಾತಿ ನೀಡಬೇಕೆಂದು ಈಗಾಗಲೇ ಬೇಡಿಕೆ ಇಟ್ಟಿವೆ.

ಮೀಸಲಾತಿ ಬಂದಿದ್ದು?: ದೇಶದ ಸಮಸ್ತ ಅಸ್ಪೃಶ್ಯ ಜಗಾಂಗವನ್ನು 'ಪರಿಶಿಷ್ಟ ಜಾತಿ' ಎಂದು ನಾಮಕರಣ ಮಾಡಿದ್ದು 1935ರಲ್ಲಿ. ದೇಶದಲ್ಲಿದ್ದ 9 ಪ್ರಾಂತಗಳಲ್ಲಿ ಪರಿಶಿಷ್ಟ ಜಾತಿಗಳ ಪಟ್ಟಿ ತಯಾರಿಸಲಾಗಿತ್ತು. ಮದ್ರಾಸ್‌ ಪ್ರಾಂತದ ಭಾಗವಾಗಿದ್ದ ಮೈಸೂರು ರಾಜ್ಯದ ಪರಿಶಿಷ್ಟ ಜಾತಿಯ ಪಟ್ಟಿಯಲ್ಲಿ ಬಂಜಾರ, ಬೋವಿ, ಕೊರಚ ಮತ್ತು ಕೊರಮ ಜಾತಿಗಳು ಇರಲಿಲ್ಲ.

1936ರ ಪರಿಶಿಷ್ಟ ಜಾತಿಯ ಪಟ್ಟಿಯನ್ನು ಅಂಬೇಡ್ಕರ್‌ ಅವರು ಪರಿಪೂರ್ಣ ಮತ್ತು ಅಧಿಕೃತ ಎಂದು ಘೋಷಣೆ ಮಾಡಿದ್ದಾರೆ. ಅಲ್ಲದೆ, 1949ರಲ್ಲಿ ಅನುಚ್ಛೇದ 341ನ್ನು ಸಂವಿಧಾನದ ವ್ಯಾಪ್ತಿಗೆ ಸೇರ್ಪಡೆ ಮಾಡುವಾಗಲೂ ಯಾರೂ ಅಸ್ಪೃಶ್ಯರೋ ಮತ್ತು ಯಾರೂ ಹಿಂದು ಧರ್ಮ ಪಾಲನೆ ಮಾಡುತ್ತಾರೋ ಅವರೆಲ್ಲ ಪರಿಶಿಷ್ಟ ಜಾತಿ ಎಂದು ಘೋಷಿಸಿದ್ದಾರೆ.

1950ರಲ್ಲಿ ಮೈಸೂರು ರಾಜ್ಯದ ಪ್ರಮುಖರಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ ಅವರು ಈ ನಾಲ್ಕು ಸವರ್ಣೀಯ ಜಾತಿಗಳನ್ನು ಪರಿಶಿಷ್ಟ ಜಾತಿ ಪಟ್ಟಿಗೆ ಸೇರ್ಪಡೆ ಮಾಡಿದರು. ಕರ್ನಾಟಕ ಸರ್ಕಾರ 1977ರಲ್ಲಿ ರಾಜ್ಯದಲ್ಲಿರುವ ಹಿಂದುಳಿದ ವರ್ಗಗಳು, ಅಲ್ಪಸಂಖ್ಯಾತರ ಜನಾಂಗವನ್ನು ಗುರುತಿಸಿ, ಅವರ ಕ್ಷೇಮಾಭಿವೃದ್ಧಿಗಾಗಿ ಪ್ರತ್ಯೇಕವಾದ "ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಇಲಾಖೆ"ಯನ್ನು ಸ್ಥಾಪಿಸಿದ್ದು, ಭಾರತ ಸಂವಿಧಾನದ ಅನುಚ್ಛೇದ 15(4) ರಡಿಯಲ್ಲಿ ಶೈಕ್ಷಣಿಕ ಹಾಗೂ 16(4)ರಡಿಯಲ್ಲಿ ಔದ್ಯೋಗಿಕ ಮೀಸಲಾತಿ ಸೌಲಭ್ಯ ನೀಡಿಕೆಗೆ ಅವಕಾಶ ಕಲ್ಪಿಸಿದೆ.

1999-2000ರಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಬೇರ್ಪಟ್ಟು ಪ್ರತ್ಯೇಕ ನಿರ್ದೇಶನಾಲಯವನ್ನು ಹೊಂದಿದೆ. ಇದೀಗ ಪಂಚಮಸಾಲಿ ಲಿಂಗಾಯತ ಸಮುದಾಯದವರು ಹಿಂದುಳಿದ 2ಎಗೆ ಸೇರ್ಪಡೆ ಮಾಡುವಂತೆ ಬೇಡಿಕೆ ಇಟ್ಟರೆ, ಕುರುಬ ಸಮುದಾಯವನ್ನು ಪರಿಶಿಷ್ಟ ವರ್ಗ(ಎಸ್ಟಿ)ಕ್ಕೆ ಸೇರಿಸಬೇಕೆಂದು ಒತ್ತಡ ಹಾಕಲಾಗುತ್ತಿದೆ.

ಈ ಸಂದರ್ಭದಲ್ಲೇ ವಾಲ್ಮೀಕಿ ಸಮುದಾಯ ಮೀಸಲಾತಿ ಪ್ರಮಾಣ 7.5 ಕ್ಕೆ ಹೆಚ್ಚಳ ಮಾಡಬೇಕೆಂಬುದು ಮತ್ತೆ ಮುನ್ನಲೆಗೆ ಬಂದಿದೆ. ಕೆಲವು ಸಮುದಾಯಗಳು ಮೀಸಲಾತಿ ನೀಡಬೇಕೆಂದು ಬೇಡಿಕೆ ಇಟ್ಟಿರುವ ಹಿನ್ನೆಲೆಯಲ್ಲಿ ಕಾನೂನು ತಜ್ಞರ ಜತೆ ಚರ್ಚಿಸಿ ಏನೇನು ಕ್ರಮ ತೆಗೆದುಕೊಳ್ಳಲು ಸಾಧ್ಯವಿದೆಯೋ ಅದನ್ನು ಸರ್ಕಾರ ತೆಗೆದುಕೊಳ್ಳಲಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇಂದು ಹೇಳಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.