ETV Bharat / state

ಸಿಎಂ ಯಡಿಯೂರಪ್ಪ ಅವರ ಬೆನ್ನೇರಿದ ಮೀಸಲು ಹೋರಾಟಗಳು...!

ಮೀಸಲಾತಿ ನೀಡಿದರೆ ಪಂಚಮಸಾಲಿ ಸಮುದಾಯ ಬಲಿಷ್ಠವಾಗುತ್ತದೆ. ಅದು ಬಲಿಷ್ಠವಾದರೆ ಮುಖ್ಯಮಂತ್ರಿಗಳ ಕುಟುಂಬಕ್ಕೆ ತೊಂದರೆಯಾಗುತ್ತದೆ. ಮುಖ್ಯಮಂತ್ರಿ ಆಗಬೇಕು ಎಂಬ ಅವರ ಮಗನ ಕನಸು ನುಚ್ಚು ನೂರಾಗುತ್ತದೆ ಎಂದು ಜಯ ಮೃತ್ಯುಂಜಯ ಸ್ವಾಮೀಜಿ ಆಕ್ರೋಶ ವ್ಯಕ್ತಪಡಿಸಿದ್ದರು.

Reservation protest is giving too much problem to CM Yediyurappa
ಸಿಎಂ ಯಡಿಯೂರಪ್ಪ ಅವರ ಬೆನ್ನೇರಿದ ಮೀಸಲಾತಿ ಹೋರಾಟಗಳು
author img

By

Published : Feb 9, 2021, 5:41 PM IST

Updated : Feb 9, 2021, 6:43 PM IST

ಬೆಂಗಳೂರು: ಪಂಚಮಸಾಲಿ ಸಮುದಾಯವನ್ನು ಹಿಂದುಳಿದ ಪ್ರವರ್ಗ 2 ಎ ಪಟ್ಟಿಗೆ ಸೇರಿಸಬೇಕು ಎಂಬ ಬೇಡಿಕೆಯನ್ನಿಟ್ಟುಕೊಂಡು ಹೋರಾಟ ನಡೆಯುತ್ತಿದೆ. ಇನ್ನೊಂದೆಡೆ ಕುರುಬ ಸಮುದಾಯಕ್ಕೆ ಪರಿಶಿಷ್ಟ ಪಂಗಡ (ಎಸ್‌ಟಿ) ಮೀಸಲಾತಿ ನೀಡುವಂತೆ ಹೋರಾಟಗಳು ನಡೆಯುತ್ತಿವೆ. ಈ ಎರಡು ಹೋರಾಟಗಳು ಸರ್ಕಾರ ಮತ್ತು ಸಿಎಂ ಬಿ.ಎಸ್.ಯಡಿಯೂರಪ್ಪ ಅವರನ್ನು ಇಕ್ಕಟ್ಟಿಗೆ ಸಿಲುಕಿಸಿದೆ.

ಪಂಚಮಸಾಲಿ ಹೋರಾಟದ ಮುಂಚೂಣಿಯಲ್ಲಿರುವವರು ಬಸವ ಜಯಮೃತ್ಯುಂಜಯ ಸ್ವಾಮೀಜಿ. ಇನ್ನು ಕುರುಬ ಸಮುದಾಯದ ಎಸ್‌ಟಿ ಮೀಸಲಾತಿ ಹೋರಾಟ ಸಮಿತಿ ಹಾಗೂ ಕಾಗಿನೆಲೆ ಕನಕ ಗುರುಪೀಠದ ನಿರಂಜನಾನಂದಪುರಿ ಸ್ವಾಮೀಜಿ. ಈಗಾಗಲೇ ಇವರ ನೇತೃತ್ವದಲ್ಲಿ ಪಾದಯಾತ್ರೆ ಸಹ ನಡೆದಿದೆ.

ಮೀಸಲಾತಿ ಹೋರಾಟ
ಮೀಸಲಾತಿ ಹೋರಾಟ

ಸಿಎಂ ಖಾರವಾದ ಪ್ರತಿಕ್ರಿಯೆ:

ಪಂಚಮಸಾಲಿ ಹೋರಾಟವನ್ನು ಬೆಂಬಲಿಸಿ ಪಂಚಮಸಾಲಿ ಸಮುದಾಯಕ್ಕೆ ಸೇರಿದ ಬಿಜೆಪಿ ನಾಯಕ ಬಸವನಗೌಡ ಪಾಟೀಲ್‌ ಯತ್ನಾಳ್‌ ಅವರು ಕಳೆದ ಶುಕ್ರವಾರ ವಿಧಾನಸಭೆಯಲ್ಲಿ ಧ್ವನಿ ಎತ್ತಿದ್ದರು. ಪಂಚಮಸಾಲಿ ಸಮುದಾಯವನ್ನು ಪ್ರವರ್ಗ 2 ಎ ಪಟ್ಟಿಗೆ ಸೇರಿಸಲು ರಾಜ್ಯ ಸರ್ಕಾರ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆಕ್ಷೇಪಿಸಿ ಅವರಾಡಿದ ಮಾತುಗಳಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಸ್ವಲ್ಪ ಖಾರವಾಗಿಯೇ ಪ್ರತಿಕ್ರಿಯಿಸಿದ್ದರು.

ಪಂಚಮಸಾಲಿಗಳಿಗೆ ಈ ಸವಲತ್ತನ್ನು ಒದಗಿಸುವ ಸಂಬಂಧ ನಾನೇನೂ ಮಾಡಲು ಸಾಧ್ಯವಿಲ್ಲ. ಬೇಕಿದ್ದರೆ ರಾಜ್ಯದಿಂದ ಆಯ್ಕೆಯಾಗಿರುವ ಇಪ್ಪತ್ತೈದು ಮಂದಿ ಸಂಸದರನ್ನು ದೆಹಲಿಗೆ ಕರೆದುಕೊಂಡು ಹೋಗಿ ಕೇಂದ್ರ ಸರ್ಕಾರಕ್ಕೆ ಹೇಳಿಸಿ ಎಂಬುದು ಅವರ ಮಾತಾಗಿತ್ತು. ಇದರಿಂದ ಕೆರಳಿದ ಬಸವ ಜಯ ಮೃತ್ಯುಂಜಯ ಸ್ವಾಮೀಜಿ, ಪಂಚಮಸಾಲಿಗಳು ಕೇಳುತ್ತಿರುವ ಮೀಸಲಾತಿ ಕುರಿತು ತೀರ್ಮಾನ ಕೈಗೊಳ್ಳುವ ಅಧಿಕಾರ ಮುಖ್ಯಮಂತ್ರಿಗಳಿಗಿದೆ. ಹೀಗಾಗಿ ಇದನ್ನು ಪ್ರಧಾನಿ ಹಾಗೂ ಕೇಂದ್ರ ಗೃಹ ಸಚಿವರ ಮೇಲೆ ಹಾಕುವ ನಾಟಕ ಬೇಡ ಎಂದು ಅಬ್ಬರಿಸಿದರು. ಮೀಸಲಾತಿ ನೀಡಿದರೆ ಪಂಚಮಸಾಲಿ ಸಮುದಾಯ ಬಲಿಷ್ಠವಾಗುತ್ತದೆ. ಅದು ಬಲಿಷ್ಠವಾದರೆ ಮುಖ್ಯಮಂತ್ರಿಗಳ ಕುಟುಂಬಕ್ಕೆ ತೊಂದರೆಯಾಗುತ್ತದೆ. ಮುಖ್ಯಮಂತ್ರಿ ಆಗಬೇಕು ಎಂಬ ಅವರ ಮಗನ ಕನಸು ನುಚ್ಚು ನೂರಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.

ಮೀಸಲಾತಿ ಹೋರಾಟ
ಈಶ್ವರಪ್ಪ- ಸಿದ್ದರಾಮಯ್ಯ

ವಾಸ್ತವವಾಗಿ ಹೇಳುವುದಾದರೆ, ಪಂಚಮಸಾಲಿ ಸಮುದಾಯ ಯಾವತ್ತೂ ಯಡಿಯೂರಪ್ಪ ಅವರ ನಾಯಕತ್ವದ ವಿರುದ್ದ ನಿಂತಿಲ್ಲ. ಆದರೆ, ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದ ಕೆಲವೇ ದಿನಗಳಲ್ಲಿ ಯಡಿಯೂರಪ್ಪ ತಮ್ಮ ಸಮುದಾಯವನ್ನು ನಿರ್ಲಕ್ಷಿಸುತ್ತಿದ್ದಾರೆ ಎಂಬ ಶಂಕೆ ಅದಕ್ಕೆ ಬಂದಿದ್ದು ನಿಜ. ಯಡಿಯೂರಪ್ಪ ಅವರು ಸಚಿವ ಸಂಪುಟವನ್ನು ವಿಸ್ತರಿಸಲು ಹೊರಟಾಗ ನಡೆದ ಬೆಳವಣಿಗೆಗಳು ಇದಕ್ಕೆ ಕಾರಣ.

ಅಂದ ಹಾಗೆ ಅವತ್ತು ತಮ್ಮ ಸಂಪುಟದಲ್ಲಿ ಯಾರ್ಯಾರನ್ನು ಸೇರಿಸಬೇಕು ಎಂದು ಯಡಿಯೂರಪ್ಪ ಹುಡುಕಾಟ ಆರಂಭಿಸಿದರಲ್ಲಾ ಆ ಸಂದರ್ಭದಲ್ಲಿ ನಡೆದ ಸಭೆಯೊಂದರಲ್ಲಿ ಪಂಚಮಸಾಲಿ ಸಮುದಾಯಕ್ಕೆ ಸೇರಿದವರಿಗೆ ಸಂಪುಟದಲ್ಲಿ ಹೆಚ್ಚಿನ ಪ್ರಾತಿನಿಧ್ಯ ನೀಡಬೇಕು ಎಂದು ಹರಿಹರ ಪೀಠದ ವಚನಾನಂದ ಸ್ವಾಮೀಜಿ ಅವರು ಮುಖ್ಯಮಂತ್ರಿಗಳನ್ನು ಆಗ್ರಹಿಸಿದ್ದರು.

ನಿರಾಣಿ-ಯತ್ನಾಳ್​
ನಿರಾಣಿ-ಯತ್ನಾಳ್​

ಉಲ್ಟಾ ಹೊಡೆದ ಸಿಎಂ:

ಇದರಿಂದ ಕೆರಳಿದ ಯಡಿಯೂರಪ್ಪ, ನೀವು ಸಲಹೆ ಕೊಡಿ. ಆದರೆ ಈ ರೀತಿ ಒತ್ತಡ ಹೇರುವುದನ್ನು ನಾನು ಸಹಿಸುವುದಿಲ್ಲ ಎಂದು ಉಲ್ಪಾ ಹೊಡೆದುಬಿಟ್ಟರು. ಯಾವಾಗ ಈ ಬೆಳವಣಿಗೆ ನಡೆಯಿತೋ ಇದಾದ ನಂತರ ಪಂಚಮಸಾಲಿ ಸಮುದಾಯದಿಂದ ಅಪಸ್ವರ ಕೇಳಿ ಬರತೊಡಗಿತು.

ವಸ್ತುಸ್ಥಿತಿ ಎಂದರೆ ಸಮುದಾಯಕ್ಕೆ ಸೇರಿದ ಮುರುಗೇಶ್‌ ನಿರಾಣಿ, ಬಸವನಗೌಡ ಪಾಟೀಲ್‌ ಯತ್ನಾಳ್‌ ಅವರನ್ನು ಮಂತ್ರಿಗಳನ್ನಾಗಿಸುವುದು ಸ್ವಾಮೀಜಿಯವರ ಆಗ್ರಹದ ಹಿಂದಿದ್ದ ಉದ್ದೇಶ. ಆದರೆ ಯಡಿಯೂರಪ್ಪ ಅವರು ಇದನ್ನು ಒಪ್ಪಲಿಲ್ಲ ಎನ್ನಲಾಗಿದೆ‌.

ರಾಜ್ಯದಲ್ಲಿ ವೀರಶೈವ - ಲಿಂಗಾಯತರ ಒಟ್ಟಾರೆ ಜನಸಂಖ್ಯೆಗಿಂತ ಇದರಲ್ಲಿ ಪಂಚಮಸಾಲಿ ಸಮುದಾಯದ ಸಂಖ್ಯೆ ಶೇ. 45 ದರಷ್ಟಿದೆ. ಮೂಲತಃ ಕೃಷಿಕರಾದ ಪಂಚಮಸಾಲಿಗಳು ಹೆಚ್ಚಾಗಿ ಸಣ್ಣ ಹಿಡುವಳಿದಾರರು. ಇವರು ಒಗ್ಗಟ್ಟಾಗಿ ತಮ್ಮ ಸಮುದಾಯದಿಂದಲೇ ಒಬ್ಬರನ್ನು ಮುಖ್ಯಮಂತ್ರಿ ಹುದ್ದೆವರೆಗೆ ತೆಗೆದುಕೊಂಡು ಹೋಗಬಲ್ಲರು ಎಂಬುದು ಈ ಪ್ರಮುಖರ ಮಾತುಗಳಲ್ಲಿದ್ದ ಧ್ವನಿ. ಯಾವಾಗ ಈ ಮಾತು ಚಲಾವಣೆಗೆ ಬಂತೋ ಆಗ ಮುಖ್ಯಮಂತ್ರಿ ಹುದ್ದೆಯ ಮೇಲೆ ಕಣ್ಣಿಟ್ಟ ಮೊದಲಿಗರು ಎಂದರೆ ಮುರುಗೇಶ್‌ ನಿರಾಣಿ.

ಹಿಂದೆ ಯಡಿಯೂರಪ್ಪ ಅವರ ಮಂತ್ರಿ ಮಂಡಲದಲ್ಲಿ ಭಾರೀ ಕೈಗಾರಿಕಾ ಸಚಿವರಾಗಿದ್ದ ಮುರುಗೇಶ್‌ ನಿರಾಣಿ ಇವತ್ತು ರಾಜಕೀಯವಾಗಿ, ಆರ್ಥಿಕವಾಗಿ ತುಂಬ ಶಕ್ತಿಶಾಲಿಯಾಗಿ ಎದ್ದು ನಿಂತಿದ್ದಾರೆ. ಸಕ್ಕರೆ, ಇಂಧನ, ಶಿಕ್ಷಣ, ಬ್ಯಾಂಕಿಂಗ್‌ ಸೇರಿದಂತೆ ಹಲವಾರು ಉದ್ಯಮಗಳಲ್ಲಿ ತೊಡಗಿರುವ ಮುರುಗೇಶ್‌ ನಿರಾಣಿ ಸಮುದಾಯದ ಪ್ರಮುಖರ ಒತ್ತಾಸೆಯಿಂದ ಮುಖ್ಯಮಂತ್ರಿ ಹುದ್ದೆಯ ಮೇಲೆ ಕಣ್ಣಿಟ್ಟಿದ್ದು ಸಹಜ. ಕಳೆದ ಒಂದು ವರ್ಷಕ್ಕಿಂತ ಹೆಚ್ಚು ಕಾಲದಿಂದ ನಡೆಯುತ್ತಾ ಬಂದಿರುವ ಯಡಿಯೂರಪ್ಪ ಪದಚ್ಯುತಿಯ ಪ್ರಹಸನವೇನಿದೆಯೋ ಈ ಪ್ರಹಸನದಲ್ಲಿ ಪದೇ ಪದೆ ಕಣ್ಣಿಗೆ ಕಂಡಿದ್ದು ಇದೇ ಮುರುಗೇಶ್‌ ನಿರಾಣಿ.

ಯಡಿಯೂರಪ್ಪ ಅವರ ವಿರುದ್ದ ನಿಂತ ಶಾಸಕರನ್ನು ಒಗ್ಗೂಡಿಸಲು ಮುರುಗೇಶ್‌ ನಿರಾಣಿ ಮಾಡಿದ ಪ್ರಯತ್ನ ಸಣ್ಣದಲ್ಲ. ಅವರ ಈ ಪ್ರಯತ್ನ ಯಶಸ್ವಿಯಾಗದೇ ಇರಬಹುದು. ಆದರೆ ಇತ್ತೀಚೆಗೆ ನಡೆದ ಸಚಿವ ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಅವರ ಹೆಸರು ನುಸುಳಲು ಹೈಕಮಾಂಡ್‌ ಕಾರಣ ಎಂಬುದು ಅವರಿಗಿರುವ ಶಕ್ತಿಯನ್ನು ಸೂಚಿಸುತ್ತದೆ.

ಸ್ವತಃ ಯಡಿಯೂರಪ್ಪ ಅವರಿಗೆ ಮುರುಗೇಶ್‌ ನಿರಾಣಿ ಅವರನ್ನು ಮಂತ್ರಿ ಮಂಡಲಕ್ಕೆ ಸೇರಿಸಿಕೊಳ್ಳುವುದು ಇಷ್ಟವಿರಲಿಲ್ಲವಾದರೂ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ನಿರಾಣಿ ಹೆಸರನ್ನು ಪ್ರಸ್ತಾಪಿಸಿದ ಮೇಲೆ ನಿರಾಕರಿಸಲು ಅವರಿಂದ ಸಾಧ್ಯವಾಗಲಿಲ್ಲ. ಹೀಗೆ ಮಂತ್ರಿ ಮಂಡಲಕ್ಕೆ ಸೇರುವಲ್ಲಿ ಯಶಸ್ವಿಯಾದ ಮುರುಗೇಶ್‌ ನಿರಾಣಿ ಅವರ ಮೇಲೆ ಯಡಿಯೂರಪ್ಪ ಅವರಿಗೆ ಇನ್ನೂ ಅನುಮಾನದ ಕಣ್ಣಿದೆ. ಭವಿಷ್ಯದ ಲಿಂಗಾಯತ ನಾಯಕತ್ವಕ್ಕಾಗಿ ನಡೆಯುತ್ತಿರುವ ಪೈಪೋಟಿಯಲ್ಲಿ ನಿರಾಣಿ ಹೆಸರೂ ಇದೆ ಎಂಬುದು ಅವರಿಗೆ ಗೊತ್ತು.

ಬಸವನಗೌಡ ಪಾಟೀಲ್‌ ಯತ್ನಾಳ್‌ ಅವರು ಕೂಡಾ ಇಂತಹ ರೇಸಿನಲ್ಲಿ ಇರಬಹುದು. ಬಹಿರಂಗವಾಗಿ ಹೋರಾಡುವ ವಿಷಯದಲ್ಲಿ ಅವರೇ ಮುಂದಿರಬಹುದು. ಆದರೆ ಈ ವಿಷಯದಲ್ಲಿ ನಿರಾಣಿ ತುಂಬ ಪವರ್‌ ಫುಲ್‌ ಎಂಬುದು ಯಡಿಯೂರಪ್ಪ ಅವರಿಗೂ ಗೊತ್ತು. ಯಾಕೆಂದರೆ ಇವತ್ತು ರಾಜಕಾರಣಕ್ಕೆ ಏನು ಬೇಕೋ ಅದು ನಿರಾಣಿ ಅವರ ಬಳಿ ಇದೆ. ಹೀಗಾಗಿ ಅವರು ಲಿಂಗಾಯತ ನಾಯಕತ್ವದ ವಿಷಯದಲ್ಲಿ ತಮ್ಮ ಪುತ್ರನಿಗೆ ಅಡ್ಡಿಯಾಗಬಹುದು ಎಂಬುದು ಯಡಿಯೂರಪ್ಪ ಅವರ ಲೆಕ್ಕಾಚಾರ. ಅವರ ಇಂತಹ ಲೆಕ್ಕಾಚಾರ ಹಿಂದಿನಿಂದಲೂ ಚಾಲ್ತಿಯಲ್ಲಿರುವುದರಿಂದ ಪಂಚಮಸಾಲಿ ಸಮುದಾಯವನ್ನು ಬಲಿಷ್ಟಗೊಳಿಸುವ ಬೇಡಿಕೆಯನ್ನು ಅವರು ಒಪ್ಪುತ್ತಿಲ್ಲ ಎಂಬುದು ಸದ್ಯದ ವಾದ.

ಇದು ಒಂದು ಮಟ್ಟಿಗೆ ನಿಜವಾದರೂ ಮತ್ತೊಂದು ಕಡೆಯಿಂದ ಯಡಿಯೂರಪ್ಪ ಅವರಿಗೆ ವೀರಶೈವ - ಲಿಂಗಾಯತರು ಒಗ್ಗಟ್ಟಾಗಿರಬೇಕು. ಅವರು ಒಗ್ಗಟ್ಟಾಗಿರುವ ಕಾರಣಕ್ಕಾಗಿಯೇ ತಮ್ಮ ನಾಯಕತ್ವಕ್ಕೆ ಶಕ್ತಿ ದಕ್ಕಿದೆ ಎಂಬುದು ಗೊತ್ತಿದೆ.

ಹೀಗಾಗಿಯೇ ಅವರು ಪಂಚಮಸಾಲಿ ಸಮುದಾಯವನ್ನಷ್ಟೇ ನೋಡದೆ ಒಟ್ಟಾರೆಯಾಗಿ ವೀರಶೈವ - ಲಿಂಗಾಯತರನ್ನು ಪ್ರವರ್ಗ 2 ಎ ಪಟ್ಟಿಗೆ ಸೇರಿಸಬೇಕು ಎಂದು ಪ್ರಯತ್ನಿಸುತ್ತಿದ್ದಾರೆ.

ಇಂತಹ ಕಾಲದಲ್ಲಿ ವಿಶೇಷವಾಗಿ ಪಂಚಮಸಾಲಿ ಸಮುದಾಯಕ್ಕೆ ಈ ಸವಲತ್ತು ಸಿಕ್ಕರೆ ಸಹಜವಾಗಿಯೇ ಸಾದರು, ಕುಡು ಒಕ್ಕಲಿಗರು ಸೇರಿದಂತೆ ಹಲವು ಒಳಪಂಗಡಗಳಿಗೆ ಅಸಮಾಧಾನ ಶುರುವಾಗುತ್ತದೆ.

ಈ ಅಸಮಾಧಾನ ವೀರಶೈವ - ಲಿಂಗಾಯತ ನಾಯಕತ್ವದ ಕಿರೀಟಕ್ಕಾಗಿ ಕನಸು ಕಾಣುತ್ತಿರುವ ತಮ್ಮ ಪುತ್ರ ವಿಜಯೇಂದ್ರ ಅವರಿಗೆ ಅಡ್ಡಗಾಲು ಆಗಬಹುದು ಎಂಬುದು ಯಡಿಯೂರಪ್ಪ ಅವರ ಯೋಚನೆ ಎನ್ನಲಾಗಿದೆ. ಇದೇ ಕಾರಣಕ್ಕಾಗಿ ಅವರು ಪಂಚಮಸಾಲಿ ಸಮುದಾಯವನ್ನು ಹಿಂದುಳಿದ ಪ್ರವರ್ಗ 2 ಎ ಪಟ್ಟಿಗೆ ಸೇರಿಸಬೇಕು ಎಂಬ ಕೂಗಿಗೆ ಹೆಚ್ಚು ಆದ್ಯತೆ ಕೊಡಲಿಲ್ಲ. ಪರಿಣಾಮ ಅವರ ವಿರುದ್ದ ಸಮುದಾಯದ ಬಸವ ಜಯ ಮೃತ್ಯುಂಜಯ ಸ್ವಾಮಿ ನೇರವಾಗಿ ತಿರುಗಿ ಬಿದ್ದಿದ್ದಾರೆ.

ಯಾವಾಗ ಅವರು ತಿರುಗಿ ಬಿದ್ದರೋ ಆಗ ಮುಖ್ಯಮಂತ್ರಿ ಯಡಿಯೂರಪ್ಪ ಈ ಸಂಬಂಧ ಅಧ್ಯಯನ ನಡೆಸಿ ವರದಿ ನೀಡುವಂತೆ ಹಿಂದುಳಿದ ವರ್ಗಗಳ ಆಯೋಗಕ್ಕೆ ಸೂಚನೆ ನೀಡಿದ್ದಾರೆ. ಆದರೆ, ಇದು ಅಷ್ಟಕ್ಕೇ ನಿಲ್ಲುವ ಹಾಗೆ ಕಾಣುತ್ತಿಲ್ಲ. ಯಾಕೆಂದರೆ ಇಷ್ಟೆಲ್ಲ ನಡೆದ ಮೇಲೆ ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ಸಿಕ್ಕರೂ, ಇದು ತಮ್ಮ ಹೋರಾಟದ ಫಲ ಎಂದು ಹೇಳಿಕೊಳ್ಳಲು ಸಮುದಾಯದ ನಾಯಕರು, ಮಠಾಧಿಪತಿಗಳಿಗೆ ಸಾಧ್ಯವಾಗುತ್ತದೆ.

ಒಂದು ವೇಳೆ ಸಿಗದೇ ಇದ್ದರೂ ತಮ್ಮ ಪುತ್ರನನ್ನು ಮುಖ್ಯಮಂತ್ರಿ ಮಾಡುವ ಉದ್ದೇಶದಿಂದ ಪಂಚಮಸಾಲಿಗಳು ಒಗ್ಗಟ್ಟಾಗಲು ಯಡಿಯೂರಪ್ಪ ಬಿಡುತ್ತಿಲ್ಲ ಎಂಬ ಕೂಗು ಮತ್ತಷ್ಟು ಗಟ್ಟಿಯಾಗುತ್ತದೆ. ಭವಿಷ್ಯದ ಲಿಂಗಾಯತ ನಾಯಕತ್ವದ ಮೇಲೆ ಕಣ್ಣಿಟ್ಟಿರುವ ವಿಜಯೇಂದ್ರ ಅವರಿಗೆ ಇದು ದೊಡ್ಡ ಅಡ್ಡಿಯಾಗಬಹುದು ಎಂದು ಹೇಳಲಾಗುತ್ತಿದೆ.

ಕುರುಬ ಸಮುದಾಯದ ಹೋರಾಟ:

ಪಂಚಮಸಾಲಿ ಹೋರಾಟದ ಮಾದರಿಯಲ್ಲೇ ಕುರುಬ ಸಮುದಾಯವೂ ಹೋರಾಟ ನಡೆಸುತ್ತಿದ್ದು, ಈ ಸಮುದಾಯಕ್ಕೆ ಪರಿಶಿಷ್ಟ ಪಂಗಡ (ಎಸ್‌ಟಿ) ಮೀಸಲಾತಿ ನೀಡುವಂತೆ ಒತ್ತಾಯಿಸಿ ಕಾಗಿನೆಲೆಯಿಂದ ಪಾದಯಾತ್ರೆ ನಡೆಸಿ ನಗರದ ಹೊರವಲಯಲ್ಲಿ ಬೃಹತ್ ಸಮಾವೇಶ ಮಾಡುವ ಮೂಲಕ ಸರ್ಕಾರಕ್ಕೆ ಬಿಸಿ ಮುಟ್ಟಿಸಲಾಯಿತು.

ಕಾಗಿನೆಲೆ ಕನಕ ಗುರುಪೀಠದ ನಿರಂಜನಾನಂದಪುರಿ ಸ್ವಾಮೀಜಿ ನೇತೃತ್ವದಲ್ಲಿ ಜ.15 ರಿಂದ 21 ದಿನಗಳ ಕಾಲ 360 ಕಿ.ಮೀ. ದೂರ ಬೃಹತ್‌ ಪಾದಯಾತ್ರೆ ಮಾಡಿ ಸರ್ಕಾರಕ್ಕೆ ಒತ್ತಾಯಿಸಲಾಯಿತು. ಇಲ್ಲಿ ಪಕ್ಷಾತೀತವಾಗಿ ಎಲ್ಲ ಪಕ್ಷದ ನಾಯಕರು ಕುರುಬರ ಎಸ್‌.ಟಿ. ಹೋರಾಟಕ್ಕೆ ಬೆಂಬಲ ಸೂಚಿಸಿದ್ದಾರೆ. ಇನ್ನು ಆಡಳಿತ ಪಕ್ಷದ ಸಚಿವ ಕೆ.ಎಸ್. ಈಶ್ವರಪ್ಪ ಸೇರಿದಂತೆ ಶಾಸಕರು ಹಲವು ಮುಖಂಡರು ಹೋರಾಟಕ್ಕೆ ಬೆಂಬಲ ನೀಡಿರುವುದು ಸಿಎಂ ಯಡಿಯೂರಪ್ಪ ಅವರಿಗೆ ನುಂಗಲಾರದ ತುತ್ತಾಗಿದೆ.

ಇನ್ನು ಈ ಹೋರಾಟದಿಂದ ಹಿಂದೆ ಸರಿದಿರುವ ಸಿದ್ದರಾಮಯ್ಯ ವಿರುದ್ಧ ಇತ್ತೀಚೆಗೆ ವ್ಯಂಗ್ಯವಾಡಿರುವ ಈಶ್ವರಪ್ಪ, ಸಿದ್ದರಾಮಯ್ಯ ಅವರು ಕುರುಬ ಸಮುದಾಯಕ್ಕೆ ಸೀಮಿತವಾದ ನಾಯಕರಲ್ಲ. ಅವರು ‘ಅಹಿಂದ’ ನಾಯಕರಾಗಿದ್ದಾರೆ ಎಂದಿದ್ದಾರೆ.

ಇದೇ ವಿಚಾರಕ್ಕೆ ಸಿಡಿಮಿಡಿಗೊಂಡಿರುವ ಸಿದ್ದರಾಮಯ್ಯ, ಕುರುಬರ ಎಸ್ ಟಿ ಹೋರಾಟದ ಹಿಂದೆ ಆರ್ ಎಸ್ ಎಸ್ ಕೈವಾಡವಿದೆ. ಇದು ಕುರುಬ ಸಮುದಾಯವನ್ನು ಒಡೆಯುವ ಪ್ರಯತ್ನ ನಡೆಯುತ್ತಿದೆ ಎಂದು ಅಬ್ಬರಿಸಿದ್ದಾರೆ.

ಮೀಸಲು ಪ್ರಮಾಣವನ್ನು ಶೇ.3ರಿಂದ ಶೇ.20ಕ್ಕೆ ಹೆಚ್ಚಿಸಬೇಕು

ಕುರುಬರ ನಾಯಕ ನಾನೇ ಎಂದು ಈಶ್ವರಪ್ಪ ಅವರು ಹೇಳಿಕೊಳ್ಳಲಿ. ಅದಕ್ಕೆ ನನ್ನ ತಕರಾರು ಇಲ್ಲ. ಆದರೆ, ನಾಯಕ ಎಂದು ನಾವೇ ಹೇಳಿಕೊಳ್ಳುವುದಲ್ಲ. ಜನ ತೀರ್ಮಾನ ಮಾಡಬೇಕು. ಕುರುಬರನ್ನು ಎಸ್‍ಟಿಗೆ ಸೇರಿಸುವ ಮೊದಲು ಎಸ್‍ಟಿಗೆ ನೀಡುತ್ತಿರುವ ಮೀಸಲು ಪ್ರಮಾಣವನ್ನು ಶೇ.3ರಿಂದ ಶೇ.20ಕ್ಕೆ ಹೆಚ್ಚಿಸಬೇಕು. ಅದಕ್ಕೂ ಹೋರಾಟ ಮಾಡಬೇಕಿದೆ. ವಾಲ್ಮೀಕಿ ಸಮುದಾಯದವರು ಮೀಸಲು ಪ್ರಮಾಣವನ್ನು ಶೇ.7.5ಕ್ಕೆ ಹೆಚ್ಚಿಸುವಂತೆ ಈಗಾಗಲೇ ಹೋರಾಟ ಮಾಡುತ್ತಿದ್ದಾರೆ. ಮೀಸಲು ಪ್ರಮಾಣ ಶೇ.3ರಷ್ಟೇ ಇದ್ದರೆ ಕುರುಬ ಸಮುದಾಯವನ್ನು ಎಸ್‍ಟಿಗೆ ಸೇರಿಸಿದರೂ ಪ್ರಯೋಜನವಿಲ್ಲ. ಕುರುಬ ಸಮುದಾಯದ ಬಗ್ಗೆ ಬಿಜೆಪಿಯವರಿಗೆ ಕಾಳಜಿ ಇದ್ದರೆ ಹಿಂದುಳಿದ ವರ್ಗಗಳ ಶಾಶ್ವತ ಆಯೋಗ ಸಿದ್ಧಪಡಿಸಿರುವ ಸಾಮಾಜಿಕ, ಶೈಕ್ಷಣಿಕ ಗಣತಿ ಆಧಾರಿದ ವರದಿಯನ್ನು ಸರ್ಕಾರ ಅಂಗೀಕಾರ ಮಾಡಲಿ ಎಂದು ಸಿದ್ದರಾಮಯ್ಯ ಒತ್ತಾಯಿಸಿದ್ದರು.

ರಾಜ್ಯದಲ್ಲಿ ಪಂಚಮಸಾಲಿ ಸಮಸ್ಯೆಯೇ ಬೇರೆ, ಕುರುಬ ಸಮುದಾಯದ ಸಮಸ್ಯೆಯೇ ಬೇರೆ. ಇಲ್ಲಿ ಸಿದ್ದರಾಮಯ್ಯ, ಈಶ್ವರಪ್ಪ ಪ್ರಶ್ನೆಯೇ ಅಲ್ಲ. ಇದು ರಾಜ್ಯದ 60 ಲಕ್ಷ ಕುರುಬ ಸಮುದಾಯದವರ ಪ್ರಶ್ನೆ ಎಂದು ಸಚಿವ ಕೆ.ಎಸ್ ಈಶ್ವರಪ್ಪ ಹೇಳಿಕೆ ನೀಡಿದ್ದಾರೆ.

ಒಟ್ಟಾರೆ, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಗುರುಬಲ ಕಡಿಮೆಯಾದಂತಿದೆ. ಕೆಲವರು ನಾಯಕತ್ವದ ಮೇಲೆ ಕಣ್ಣಿಟ್ಟಿದ್ದರೆ, ಇನ್ನು ಕೆಲವರು ಸಮುದಾಯದ ನಾಯಕತ್ವದ ಮೇಲೆ ಕಣ್ಣಿಟ್ಟಿದ್ದಾರೆ. ಇದೀಗ ಮೀಸಲಾತಿಗಾಗಿ ನಡೆಯುತ್ತಿರುವ ಹೋರಾಟಗಳು ಎಲ್ಲಿಗೆ ಮುಟ್ಟುತ್ತವೆ ಎಂಬುದು ಕಾದು ನೋಡಬೇಕಿದೆ.

Last Updated : Feb 9, 2021, 6:43 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.