ETV Bharat / state

ಕುರುಬ ಎಸ್‌ಟಿ ಮೀಸಲು ಹೋರಾಟ: ಬೃಹತ್ ಸಮಾವೇಶದ ಪೂರ್ವಭಾವಿ ಸಭೆ

ಇನ್ನೂ ಕೆಲವರು ನಮ್ಮನ್ನು ಕರೆದಿಲ್ಲ ಅಂತ ಹೇಳುತ್ತಲೇ ಇದ್ದಾರೆ. ಇದು ಕರೆಯೋದಲ್ಲ, ಅವರೇ ಬಂದು ಸೇರ್ಪಡೆಯಾಗುವಂತಹ ಆಂದೋಲನ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಪರೋಕ್ಷವಾಗಿ ಸಚಿವ ಕೆ.ಎಸ್​. ಈಶ್ವರಪ್ಪ ಟಾಂಗ್​ ನೀಡಿದ್ದಾರೆ.

reservation-demands-for-kuruba-commmunity
ಸಚಿವ ಕೆ.ಎಸ್​. ಈಶ್ವರಪ್ಪ
author img

By

Published : Dec 16, 2020, 8:24 PM IST

Updated : Dec 16, 2020, 10:26 PM IST

ಬೆಂಗಳೂರು: ಕುರುಬ ಸಮುದಾಯಕ್ಕೆ ಎಸ್. ಟಿ.‌ ಮೀಸಲಾತಿ ಹೋರಾಟ ವಿಚಾರವಾಗಿ ವಿಭಾಗ ಮಟ್ಟದ ಸಮಾವೇಶದ ಪೂರ್ವಭಾವಿ ಸಭೆ ಇಂದು ನಗರದಲ್ಲಿ ನಡೆಯಿತು.

‌ಸಚಿವ ಕೆ.ಎಸ್. ಈಶ್ವರಪ್ಪ ನೇತೃತ್ವದಲ್ಲಿ ಬೆಂಗಳೂರಿನ ಖಾಸಗಿ ಹೋಟೆಲ್​​​​ನಲ್ಲಿ ಕುರುಬ ಸಮುದಾಯದ ಮುಖಂಡರ ಸಭೆ ನಡೆಯಿತು. ಸಭೆಯಲ್ಲಿ ಮಾತನಾಡಿದ ಸಚಿವರು, ಕುರುಬ ಸಮುದಾಯಕ್ಕೆ ಎಸ್ಟಿ‌ ಮೀಸಲು ಬೇಡಿಕೆ ಸಲ್ಲಿಕೆಗೆ ಕೇಂದ್ರದ ನಾಯಕರನ್ನು ಭೇಟಿ ಮಾಡಿ ಗಮನಕ್ಕೆ ತಂದಿದ್ದೇವೆ, ಎಸ್ಟಿ‌ ಮೀಸಲು ಕುರಿತು ರಾಜ್ಯದಲ್ಲಿ ದೊಡ್ಡ ಆಂದೋಲನವೇ‌ ನಡೆಯುತ್ತಿದೆ. ರಾಜ್ಯದಲ್ಲಿ ನಮ್ಮ ಆಂದೋಲನ ಜಾತ್ರೆ ರೂಪದಲ್ಲಿ ನಡೆಯುತ್ತಿದೆ ಎಂದರು.

ಕುರುಬ ಎಸ್‌ಟಿ ಮೀಸಲು ಹೋರಾಟ

ಕುರುಬ ಎಸ್‌ಟಿ ಮೀಸಲು ಹೋರಾಟ: ಬೃಹತ್ ಸಮಾವೇಶದ ಪೂರ್ವಭಾವಿ ಸಭೆ

ಇದೇ ವೇಳೆ, ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಪರೋಕ್ಷವಾಗಿ ಟಾಂಗ್ ನೀಡಿದ ಸಚಿವ ಈಶ್ವರಪ್ಪ, ಇನ್ನೂ ಕೆಲವರು ನಮ್ಮನ್ನು ಕರೆದಿಲ್ಲ ಅಂತ ಹೇಳುತ್ತಲೇ ಇದ್ದಾರೆ. ಇದು ಕರೆಯೋದಲ್ಲ, ಅವರೇ ಬಂದು ಸೇರ್ಪಡೆಯಾಗುವಂತಹ ಆಂದೋಲನ. ಇನ್ನು ನಾವು ಸುಮ್ನೆ ಕೂತರೆ ಎಸ್ಟಿ ಮೀಸಲು ಸಿಗಲ್ಲ, ಕೇಂದ್ರ ಸರ್ಕಾರದ ಒಲವು ಗಳಿಸಿಕೊಂಡು, ಕೇಂದ್ರ - ರಾಜ್ಯ ಸರ್ಕಾರಗಳ ಗಮನಕ್ಕೆ ಬರುವ ರೀತಿಯಲ್ಲಿ ಆಂದೋಲನ ನಡೆಸಬೇಕು ಎಂದರು.

ಓದಿ: ಬೆಂಗಳೂರಿನಲ್ಲಿ ಯಶಸ್ವಿ ಹೃದಯ ಕಸಿ ಶಸ್ತ್ರ ಚಿಕಿತ್ಸೆ: 42 ವರ್ಷದ ವ್ಯಕ್ತಿಯಿಂದ 58 ವರ್ಷದ ವ್ಯಕ್ತಿಗೆ ಜೀವದಾನ

ಯಾಕೆ ಕೆಲವರು ಬಂದಿಲ್ಲ ಅಂತ ನೋಡಲು ಹೋಗಬಾರದು, ಚರ್ಚೆಗಳು ಮಾಡುತ್ತಾ ಹೋದರೆ ಪ್ರಯೋಜನ ಇಲ್ಲ. ನಮ್ಮ ಉದ್ದೇಶ ಎಸ್ಟಿ ಮೀಸಲು ಪಡೆಯುವುದಾಗಿರುವ ಕಾರಣ, ಸ್ವಾಮೀಜಿಗಳ‌ ನೇತೃತ್ವದಲ್ಲಿ ಎಸ್ಟಿ ಮೀಸಲು ಪಡೆಯುವವರೆಗೂ ಹೋರಾಟ ನಿಲ್ಲಿಸೋದು ಬೇಡ ಎಂದು ಕರೆ ನೀಡಿದ್ದಾರೆ.

‌ಕಾಗಿನೆಲೆ ಗುರುಪೀಠದ ಹೊಸದುರ್ಗ ಶಾಖಾ ಮಠದ ಈಶ್ವರಾನಂದಪುರಿ ಸ್ವಾಮೀಜಿ, ಮಾಜಿ ಸಚಿವ ಎಚ್.ಎಂ. ರೇವಣ್ಣ, ಮುಕುಡಪ್ಪ, ಬಿಬಿಎಂಪಿ ಮಾಜಿ ಮೇಯರ್ ವೆಂಕಟೇಶ ಮೂರ್ತಿ ಮತ್ತು ಕುರುಬ ಸಮುದಾಯದ ಇತರ ಮುಖಂಡರು ಸಭೆಯಲ್ಲಿ ಭಾಗಿಯಾಗಿದ್ದರು.‌

Last Updated : Dec 16, 2020, 10:26 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.