ETV Bharat / state

ವೃಷಭಾವತಿ ನದಿ ಪುನಶ್ಚೇತನ ಮಾಡಬಹುದು : ಹೈಕೋರ್ಟ್​ಗೆ ಮಧ್ಯಂತರ ವರದಿ - ಹೈಕೋರ್ಟ್ ವೃಷಭಾವತಿ

ವೃಷಭಾವತಿ ನದಿ ಬೆಂಗಳೂರಿನಲ್ಲಿ ಹುಟ್ಟಿ ಸುಮಾರು 52 ಕಿ.ಮೀ. ಹರಿದು ಅರ್ಕಾವತಿ ನದಿಯನ್ನು ಸೇರುತ್ತದೆ. ಇದಕ್ಕೆ ಎರಡು ಮೂಲಗಳಿದ್ದು, ಒಂದು ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿದ್ದರೆ, ಮತ್ತೊಂದು ಗವಿಪುರಂನ ಗುಟ್ಟಹಳ್ಳಿಯಲ್ಲಿದೆ.

Highcourt
Highcourt
author img

By

Published : May 28, 2021, 3:05 AM IST

Updated : May 28, 2021, 6:03 AM IST

ಬೆಂಗಳೂರು : ನಗರದಲ್ಲಿ ಕಲುಷಿತಗೊಂಡಿರುವ ವೃಷಭಾವತಿ ನದಿಯನ್ನು ಪುನಶ್ಚೇತನಗೊಳಿಸಬಹುದು ಎಂದು ರಾಷ್ಟ್ರೀಯ ಪರಿಸರ ಅಧ್ಯಯನ ಸಂಶೋಧನಾ ಸಂಸ್ಥೆ (ನೀರಿ) ಹೈಕೋರ್ಟ್​​ಗೆ ಸಲ್ಲಿಸಿರುವ ಮಧ್ಯಂತರ ವರದಿಯಲ್ಲಿ ತಿಳಿಸಿದೆ.

ವೃಷಭಾವತಿ ನದಿ ಪುನಶ್ಚೇತನಗೊಳಿಸಲು ಕೋರಿ ವಕೀಲೆ ಗೀತಾ ಮಿಶ್ರಾ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್ ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಈ ವೇಳೆ ನ್ಯಾಯಾಲಯದ ನಿರ್ದೇಶನದಂತೆ ನದಿ ಪುನಶ್ಚೇತನ ಕುರಿತು ಅಧ್ಯಯನ ನಡೆಸುತ್ತಿರುವ ನೀರಿ ಸಂಸ್ಥೆ ಮಧ್ಯಂತರ ವರದಿ ಸಲ್ಲಿಸಿತು.ವರದಿ ದಾಖಲಿಸಿಕೊಂಡ ಪೀಠ ವಿಚಾರಣೆ ಮುಂದೂಡಿತು.

ನೀರಿ ವರದಿಯಲ್ಲೇನಿದೆ : ವೃಷಭಾವತಿ ನದಿ ಬೆಂಗಳೂರಿನಲ್ಲಿ ಹುಟ್ಟಿ ಸುಮಾರು 52 ಕಿ.ಮೀ. ಹರಿದು ಅರ್ಕಾವತಿ ನದಿಯನ್ನು ಸೇರುತ್ತದೆ. ಇದಕ್ಕೆ ಎರಡು ಮೂಲಗಳಿದ್ದು, ಒಂದು ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿದ್ದರೆ, ಮತ್ತೊಂದು ಗವಿಪುರಂನ ಗುಟ್ಟಹಳ್ಳಿಯಲ್ಲಿದೆ. ಇವೆರಡೂ ಕಡೆಯಿಂದ ಹರಿದುಬಂದು ನಾಯಂಡಹಳ್ಳಿ ಸಮೀಪ ಜೊತೆಯಾಗಿ ಹರಿದು ಅರ್ಕಾವತಿ ನದಿ ಸೇರುತ್ತದೆ. ನಗರದ ಮೂರನೇ ಒಂದು ಭಾಗದಷ್ಟು ಪ್ರದೇಶ ವೃಷಭಾವತಿ ಅಚ್ಚುಕಟ್ಟು ಪ್ರದೇಶದಲ್ಲಿದೆ. ಸದ್ಯ ಬೆಂಗಳೂರು ನಗರದಲ್ಲಿ ಪ್ರತಿ ದಿನ 1,140 ಎಂಎಲ್​ಡಿ ಒಳಚರಂಡಿ ನೀರು ಉತ್ಪತ್ತಿಯಾಗುತ್ತಿದ್ದು, ಅದರ ಮೂರು ಭಾಗ ವೃಷಭಾವತಿ ನದಿ ಸೇರುತ್ತಿದೆ. ಸದ್ಯ ವೃಷಭಾವತಿ ನದಿ ಕಣಿವೆಯಲ್ಲಿ 180 ಎಂಎಲ್​ಡಿ ಸಾಮರ್ಥ್ಯದ ತ್ಯಾಜ್ಯ ಸಂಸ್ಕರಣಾ ಘಟಕ ಸ್ಥಾಪಿಸಲಾಗಿದೆ. ಮತ್ತೊಂದು 150 ಎಂಎಲ್​ಡಿ ಎಸ್​ಟಿಪಿ ಘಟಕ ಸಿದ್ಧವಾಗುತ್ತಿದೆ. ಆದರೂ 200 ಎಂಎಲ್​ಡಿ ಸಂಸ್ಕರಣೆಗೆ ಕೊರತೆಯಿದ್ದು, ಅದಕ್ಕಾಗಿ ತ್ಯಾಜ್ಯ ಸಂಸ್ಕರಣೆಗೆ ಒತ್ತು ನೀಡಬೇಕಾಗಿದೆ.

ಇದನ್ನೂ ಓದಿ: ಪ್ರತಿ ಡೋಸ್‌ಗೆ ಸೇವಾ ಶುಲ್ಕ 200 ರೂ. ನಿಗದಿ ಮಾಡಿದ ರಾಜ್ಯ ಸರ್ಕಾರ

ಸಮೀಕ್ಷೆ ವೇಳೆ ನದಿಯಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಹೆಚ್ಚಾಗಿ ಕಂಡುಬಂದಿದೆ. ಹಲವೆಡೆ ಪ್ಲಾಸ್ಟಿಕ್ ಸುಡುತ್ತಿರುವುದೂ ಕಂಡು ಬಂದಿದೆ. ಬಿಬಿಎಂಪಿ ಇದನ್ನು ಗಂಭೀರವಾಗಿ ಪರಿಗಣಿಸಬೇಕಿದೆ. ವೃಷಭಾವತಿ ನದಿ ಪುನರುಜ್ಜೀವನಕ್ಕೆ ಪ್ರಮುಖವಾಗಿ ಎರಡು ಕ್ರಮಗಳನ್ನು ಆದ್ಯತೆ ಮೇಲೆ ಕೈಗೊಳ್ಳಬೇಕಿದೆ. ಕೈಗಾರಿಕಾ ಮತ್ತು ಗೃಹ ಬಳಕೆ ದ್ರವರೂಪದ ತ್ಯಾಜ್ಯ ವಿಲೇವಾರಿ ಮತ್ತು ಘನತ್ಯಾಜ್ಯ ನಿರ್ವಹಣೆಯನ್ನು ವ್ಯವಸ್ಥಿತವಾಗಿ ಮಾಡಬೇಕಿದೆ. ಮುಖ್ಯವಾಗಿ ವೃಷಭಾವತಿ ನದಿಯನ್ನು ಪುನಶ್ಚೇತನಗೊಳಿಸಬಹುದು, ಈ ಸಂಬಂಧ ಅಂತಿಮ ವರದಿಯಲ್ಲಿ ವಿವರವಾದ ಯೋಜನೆ ನೀಡಲಾಗುವುದು ಎಂದು ತಿಳಿಸಲಾಗಿದೆ.

Last Updated : May 28, 2021, 6:03 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.