ETV Bharat / state

ಪ್ರತಿಪಕ್ಷದ ಧರಣಿ ನಡುವೆಯೇ ರಾಜ್ಯಪಾಲರ ಭಾಷಣಕ್ಕೆ ಉತ್ತರ: ಅನಿರ್ದಿಷ್ಟಾವಧಿಗೆ ಪರಿಷತ್ ಕಲಾಪ ಮುಂದೂಡಿಕೆ

author img

By

Published : Feb 9, 2021, 6:16 PM IST

ಪ್ರತಿಪಕ್ಷಗಳ ಆಕ್ರೋಶ, ಘೋಷಣೆ ನಡುವೆಯೇ ಗೃಹ ಸಚಿವ ಬಸವರಾಜ ಬೊಮ್ಮಾಯಿ ರಾಜ್ಯಪಾಲರ ಭಾಷದ ಮೇಲಿನ ಚರ್ಚೆಗೆ ಉತ್ತರ ನೀಡಿದರು. ರಾಜ್ಯದ ಅಭಿವೃದ್ಧಿಗೆ ಸತತ ಪರಿಶ್ರಮ ಮಾಡುತ್ತೇವೆ. ನಾವು ಜನರಿಗೆ ಅನುಕೂಲಕರವಾದ ಆಡಳಿತ ನೀಡಿದ್ದೇವೆ. ಕೊರೊನಾ ಸಂದರ್ಭದ ನಿರ್ವಹಣೆಯನ್ನೂ ಸಮರ್ಪಕವಾಗಿ ಮಾಡಿದ್ದೇವೆ. ಆರ್ಥಿಕ ಸ್ಥಿತಿ ಉತ್ತಮವಾಗಿದೆ ಎಂದರು.

ಪರಿಷತ್ ಕಲಾಪ
ಪರಿಷತ್ ಕಲಾಪ

ಬೆಂಗಳೂರು: ಕಲಾಪದಲ್ಲಿ ಗೋಹತ್ಯೆ ಪ್ರತಿಬಂಧಕ ಹಾಗೂ ಸಂರಕ್ಷಣಾ ಕಾಯ್ದೆ ಅನುಮೋದನೆ ಸಂದರ್ಭ ಕಾಂಗ್ರೆಸ್ ಸದಸ್ಯರು ಸದನದ ಬಾವಿಯಲ್ಲಿದ್ದರು. ಇದರಿಂದ ಧ್ವನಿಮತ ಮೂಲಕ ವಿಧೇಯಕ ಅನುಮೋದನೆ ಪಡೆದಿದೆ ಎಂದು ಸಭಾಪತಿ ಬಸವರಾಜ ಹೊರಟ್ಟಿ ತಿಳಿಸಿದರು.

ತಮ್ಮ ಕೊಠಡಿಯಲ್ಲಿ ಕಾಂಗ್ರೆಸ್ ಸದಸ್ಯರ ಜತೆ ಮಾತುಕತೆ ನಂತರವೂ ಕಾಂಗ್ರೆಸ್ ಸದಸ್ಯರು ಧರಣಿ ವಾಪಸ್ ಪಡೆಯಲಿಲ್ಲ. ಸಭಾಪತಿಗಳು ವಾಪಸ್​​ ಆದ ನಂತರ ರೂಲಿಂಗ್ ನೀಡಿ, ತಾವು ಕಲಾಪವನ್ನು ಹೊರಗಿದ್ದು ವೀಕ್ಷಿಸಿದ ಹಾಗೂ ಕಡತದಲ್ಲಿ ಪರಿಶೀಲನೆ ನಡೆಸಿದ ಹಿನ್ನೆಲೆ ವಿಧೇಯಕ‌ ಅನುಮೋದನೆಯಲ್ಲಿ ಧ್ವನಿ ಮತದ ಮೂಲಕ ಪಾಸ್ ಮಾಡಲಾಗಿದೆ ಎಂದು ರೂಲಿಂಗ್ ಕೊಟ್ಟರು. ನೀವು ನಿಮಗಿರುವ ನಿಯಮದಡಿ ನನಗೆ ನಿಮ್ಮ ವಾದ ಸಲ್ಲಿಕೆ ಮಾಡಿ. ನಾನು ನನ್ನ ಗಮನಕ್ಕೆ ಬಂದ ವಿಚಾರದ ಮೇಲೆ ರೂಲಿಂಗ್ ನೀಡಿದ್ದೇನೆ. ನನ್ನ ರೂಲಿಂಗ್ ನಂತರ ಪ್ರಶ್ನಿಸುವ ಅಧಿಕಾರ ಇಲ್ಲ. ನಿಯಮದಲ್ಲಿ ಅವಕಾಶ ಇದ್ದರೆ ನೀವು ಮಾಹಿತಿ ಸಲ್ಲಿಕೆ ಮಾಡಬಹುದು. ರೂಲಿಂಗ್ ನೀಡುವ ಮುನ್ನ ಮಾತನಾಡಬಹುದಿತ್ತು. ಈಗ ರೂಲಿಂಗ್ ನೀಡಿದ ನಂತರ ಪ್ರಶ್ನಿಸುವ ಅಧಿಕಾರ ಇಲ್ಲ ಎಂದರು.

ಕಾಂಗ್ರೆಸ್ ಸಚೇತಕ ನಾರಾಯಣ ಸ್ವಾಮಿ ಮಾತನಾಡಿ, ನಿನ್ನೆ ನಮ್ಮ ಸದಸ್ಯರು ಜಂಟಿ ಸದನ ಸಮಿತಿಗೆ ವಹಿಸುವಂತೆ ಒತ್ತಾಯಿಸಿದ ನಂತರವೇ ಬಾವಿಗಿಳಿದಿದ್ದೇವೆ. ಇದು ಸಂವಿಧಾನ ಬಾಹಿರವಾಗಿ ಜಾರಿಗೆ ಬಂದ ಅನುಮೋದನೆ ಆಗಿದೆ. ಈಗಲೂ ಚರ್ಚೆಗೆ ಅವಕಾಶ ನೀಡಬೇಕು ಎಂದರು. ಇವರ ಮಾತಿಗೆ ಕಾಂಗ್ರೆಸ್ ಸದಸ್ಯ ಬಿ.ಕೆ.ಹರಿಪ್ರಸಾದ್ ಬೆಂಬಲ ನೀಡಿದರು. ಕಾಂಗ್ರೆಸ್ ಸದಸ್ಯರು ಸಾಕಷ್ಟು ಒತ್ತಡ ಹೇರಿದರೂ ಬೆಲೆ ಸಿಗದ ಹಿನ್ನೆಲೆ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯಪಾಲರ ಭಾಷಣಕ್ಕೆ ಉತ್ತರ:

ಪ್ರತಿಪಕ್ಷಗಳ ಆಕ್ರೋಶ, ಘೋಷಣೆ ನಡುವೆಯೇ ಗೃಹ ಸಚಿವ ಬಸವರಾಜ ಬೊಮ್ಮಾಯಿ ರಾಜ್ಯಪಾಲರ ಭಾಷದ ಮೇಲಿನ ಚರ್ಚೆಗೆ ಉತ್ತರ ನೀಡಿದರು. ರಾಜ್ಯದ ಅಭಿವೃದ್ಧಿಗೆ ಸತತ ಪರಿಶ್ರಮ ಮಾಡುತ್ತೇವೆ. ನಾವು ಜನರಿಗೆ ಅನುಕೂಲಕರವಾದ ಆಡಳಿತ ನೀಡಿದ್ದೇವೆ. ಕೊರೊನಾ ಸಂದರ್ಭದ ನಿರ್ವಹಣೆಯನ್ನೂ ಸಮರ್ಪಕವಾಗಿ ಮಾಡಿದ್ದೇವೆ. ಆರ್ಥಿಕ ಸ್ಥಿತಿ ಉತ್ತಮವಾಗಿದೆ. ರಾಜಸ್ವ ಸಂಗ್ರಹವೂ ಉತ್ತಮವಾಗಿದೆ. ತೆರಿಗೆ ಸಂಗ್ರಹ ಸಮರ್ಪಕವಾಗಿ ನಡೆಯುತ್ತಿದೆ. ನಾವು ಉತ್ತಮ ಆಡಳಿತ ನೀಡುತ್ತಿರುವುದಕ್ಕೆ ಉಪಚುನಾವಣೆ, ಲೋಕಸಭೆ ಚುನಾವಣೆ ಗೆಲುವು ಸಾಕ್ಷಿ. ಅಭಿವೃದ್ಧಿಗೆ ಹಿನ್ನೆಡೆ ಆಗಿಲ್ಲ. ಶೇ. 60ರಷ್ಟು ಅಭಿವೃದ್ಧಿ ಆಗಿದೆ. ಬಜೆಟ್​ನಲ್ಲಿ ನೀಡಿದ ಭರವಸೆಯಲ್ಲಿ ಶೇ. 85ರಷ್ಟು ಈಡೇರಿಸುತ್ತೇವೆ. ನಮ್ಮ ಭರವಸೆ ಈಡೇರಿಕೆಗೆ ಬದ್ಧವಾಗಿದ್ದೇವೆ.

ಓದಿ: ಸಿಎಂ ಯಡಿಯೂರಪ್ಪ ಅವರ ಬೆನ್ನೇರಿದ ಮೀಸಲು ಹೋರಾಟಗಳು...!

ಕೇಂದ್ರದಿಂದ 28 ಸಾವಿರ ಕೋಟಿ ರೂ. ಬರುವ ನಿರೀಕ್ಷೆ ಇದೆ. 48 ಸಾವಿರ ಕೋಟಿ ಸಾಲದ ಮೊತ್ತ ನೀಡಿದೆ. ಇದನ್ನು ಕೇಂದ್ರ ಸರ್ಕಾರವೇ ಭರಿಸಲಿದೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬರುವ ಮುನ್ನ ದೊಡ್ಡ ಮೊತ್ತದ ಸಾಲದ ಹೊರೆ ಹೊರಿಸಿದ್ದಾರೆ. ನಾವು ಕೋವಿಡ್ ಸಂದರ್ಭದಲ್ಲೂ ಹಿಂದಿನ ಸರ್ಕಾರ ಮಾಡಿದ್ದ ಸಾಲ ತೀರಿಸುವ ಕಾರ್ಯ ಮಾಡಿದ್ದೇವೆ. ಎಲ್ಲಾ ವರ್ಗದ ಕಲ್ಯಾಣಕ್ಕೆ ನಾವು ಬದ್ಧ. ರಾಜಸ್ವ ಸಂಗ್ರಹ ಶೇ. 69ರಷ್ಟಾಗಿದೆ. ಬಂಡವಾಳ ವೆಚ್ಚ ಶೇ. 80ರಷ್ಟಾಗಿದೆ. ಸರ್ಕಾರಿ ನೌಕರರಿಗೆ ಸಂಬಳ ಕೊರತೆ ಮಾಡದೆ ಸಂಪೂರ್ಣ ಸಂಬಳ ನೀಡಿದ ಪ್ರಥಮ ರಾಜ್ಯ ನಮ್ಮದು. ಕೋವಿಡ್ ಸಂಪೂರ್ಣ ನಿಯಂತ್ರಣಕ್ಕೆ ತಂದಿದ್ದೇವೆ. ನೆರೆ ಹಾವಳಿ ಸಮಸ್ಯೆಯನ್ನೂ ನಿಭಾಯಿಸಿದ್ದೇವೆ. ಕೋವಿಡ್, ಪ್ರವಾಹ ಅಭಿವೃದ್ಧಿ ಎಲ್ಲಕ್ಕೂ ಒತ್ತು ಕೊಟ್ಟಿದ್ದೇವೆ. ಸ್ಥಿರವಾದ, ಕಲ್ಯಾಣಕಾರಿ, ಸುಭದ್ರ ಸರ್ಕಾರ ನಡೆಸಲು ನಾವು ಬದ್ಧವಾಗಿದ್ದೇವೆ. ರಾಜ್ಯಪಾಲರ ಭಾಷಣದಲ್ಲಿ ಅತಿಶಯೋಕ್ತಿ ಇಲ್ಲ ಎಂದರು.

ರಾಜ್ಯಪಾಲರ ಭಾಷಣವನ್ನು ಸಭಾಪತಿಗಳು ಸದನದಲ್ಲಿ ಮತಕ್ಕೆ ಹಾಕಿದರು. ಪ್ರಸ್ತಾಪ ಮಂಡನೆ ಪ್ರತಿಪಕ್ಷ ಗದ್ದಲದ ನಡುವೆಯೇ ಆಡಳಿತ ಪಕ್ಷದ ಬೆಂಬಲದೊಂದಿಗೆ ಅನುಮೋದನೆ ಪಡೆಯಿತು. ಇದನ್ನು ರಾಜ್ಯಪಾಲರಿಗೆ‌ ಕಳುಹಿಸಿಕೊಡುವುದಾಗಿ ಸಭಾಪತಿಗಳು ಭರವಸೆ ಕೊಟ್ಟರು.

ಚರ್ಚೆ ಆರಂಭ:

330ಎ ಅಡಿ ಪಿ.ಆರ್.ರಮೇಶ್​​ರನ್ನು ಕರೆಯಲಾಯಿತು. ಅವರು ಬಾರದ ಹಿನ್ನೆಲೆ ಬಿಜೆಪಿ ಸದಸ್ಯೆ ತೇಜಸ್ವಿನಿ ಗೌಡಗೆ ಅವಕಾಶ ಕಲ್ಪಿಸಲಾಯಿತು. ಪ್ರತಿಪಕ್ಷ ಸದಸ್ಯರ ಗದ್ದಲದ ನಡುವೆಯೇ ವಿಧಾನ ಪರಿಷತ್ ಕಲಾಪದ ವಿವರಣೆ ನೀಡಿದ ಸಭಾಪತಿ ಬಸವರಾಜ್ ಹೊರಟ್ಟಿ, ಕಲಾಪವನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.