ETV Bharat / state

ಯಡಿಯೂರಪ್ಪನವರು ಸಿಎಂ ಆದದ್ದು ನಾನೇ ಮುಖ್ಯಮಂತ್ರಿಯಾದಂತಿದೆ .. ಮಾಜಿ ಸಚಿವ ರೇಣುಕಾಚಾರ್ಯ - ವಿಧಾನಸೌಧ

ನನ್ನ ಗುರಿ ಮಂತ್ರಿ ಸ್ಥಾನ ಅಲ್ಲ. ಮಂತ್ರಿ ಸ್ಥಾನಕ್ಕೆ ನಾನು ಲಾಬಿ ಮಾಡಲ್ಲ. ನಾನು ಪ್ರಭುದ್ಧ ರಾಜಕಾರಣಿಯಾಗಿ ಬೆಳೆಯಬೇಕು‌. ನಾನು ಈಗಲೂ ರಾಜಕೀಯದಲ್ಲಿ ಅಂಬೆಗಾಲಿಡುತ್ತಿದ್ದೇನೆ. ಯಡಿಯೂರಪ್ಪನವರು ಸಿಎಂ ಆದದ್ದು ನಾನೇ ಮುಖ್ಯಮಂತ್ರಿಯಾದಂತಿದೆ ಎಂದು ಬಿಜೆಪಿ ಶಾಸಕ ರೇಣುಕಾಚಾರ್ಯ ಹೇಳಿದ್ದಾರೆ.

ರೇಣುಕಾಚಾರ್ಯ
author img

By

Published : Aug 21, 2019, 11:13 PM IST

ಬೆಂಗಳೂರು : ನನ್ನ ಗುರಿ ಮಂತ್ರಿ ಸ್ಥಾನ ಅಲ್ಲ. ಮಂತ್ರಿ ಸ್ಥಾನಕ್ಕೆ ನಾನು ಲಾಬಿ ಮಾಡಲ್ಲ. ನಾನು ಪ್ರಭುದ್ಧ ರಾಜಕಾರಣಿಯಾಗಿ ಬೆಳೆಯಬೇಕು‌. ನಾನು ಈಗಲೂ ರಾಜಕೀಯದಲ್ಲಿ ಅಂಬೆಗಾಲಿಡುತ್ತಿದ್ದೇನೆ. ಯಡಿಯೂರಪ್ಪನವರು ಸಿಎಂ ಆದದ್ದು ನಾನೇ ಮುಖ್ಯಮಂತ್ರಿಯಾದಂತಿದೆ ಎಂದು ಬಿಜೆಪಿ ಶಾಸಕ ರೇಣುಕಾಚಾರ್ಯ ಹೇಳಿದ್ದಾರೆ.

ವಿಧಾನಸೌಧದಲ್ಲಿ ಇಂದು ಸಂಜೆ ಮಾತಮಾಡಿದ ರೇಣುಕಾಚಾರ್ಯ, ಮಂತ್ರಿ ಸ್ಥಾನ ಸಿಗದೇ ಇದ್ದದ್ದಕ್ಕೆ ಬೇಸರಗೊಂಡಿದ್ದ ನಮ್ಮ ಕಾರ್ಯಕರ್ತರನ್ನು ಸಮಾಧಾನ ಪಡಿಸಿದ್ದೇನೆ‌. 10-15 ದಿನಗಳ ಹಿಂದೆಯೇ ಹೊನ್ನಾಳಿಯಲ್ಲಿ ನಾನು ಸಚಿವ ಸ್ಥಾನದ ಆಕಾಂಕ್ಷಿಯಲ್ಲ ಎಂದು ಹೇಳಿದ್ದೆ. ನನಗೆ ಭಂಡಧೈರ್ಯ‌. ಹೇಳಬೇಕಾದುದನ್ನು ಎದುರಿಗೆ ನೇರವಾಗಿ ಹೇಳಿ ಬಿಡುತ್ತೇನೆ‌. ಯಡಿಯೂರಪ್ಪನವರ ಆದರ್ಶಗಳಿಂದ ರಾಜಕೀಯಕ್ಕೆ ಬಂದವನು ನಾನು. ಅಂತಹವರ ವಿರುದ್ಧ ನಾನು ಬಂಡಾಯ ಸಾರಲು ಸಾಧ್ಯವೇ ಇಲ್ಲ. ಬಿಜೆಪಿಯಲ್ಲಿ ಬಂಡಾಯವಿಲ್ಲ. ಅತೃಪ್ತಿ ಇಲ್ಲ. ಅದರೂ ನನ್ನ ಬಗ್ಗೆ ತಪ್ಪು ವರದಿಗಳು ಪ್ರಸಾರವಾಗುತ್ತಿವೆ. ನಾನು ಅತೃಪ್ತನೂ ಅಲ್ಲ, ಬಂಡಾಯ ನಾಯಕನೂ ಅಲ್ಲ ಎಂದು ಸ್ಪಷ್ಟಪಡಿಸಿದರು.

ನಾನು ಈಗಲೂ ರಾಜಕೀಯದಲ್ಲಿ ಅಂಬೆಗಾಲಿಡುತ್ತಿದ್ದೇನೆ.. ರೇಣುಕಾಚಾರ್ಯ

ಯಡಿಯೂರಪ್ಪ ಜತೆ 106 ಶಾಸಕರಿದ್ದಾರೆ. ಅವರು 3 ವರ್ಷ 10 ತಿಂಗಳು ಅಧಿಕಾರಾವಧಿ ಪೂರೈಸಬೇಕು. ಯಡಿಯೂರಪ್ಪ ಸಿಎಂ ಆಗಬೇಕು ಎಂದು ನಾವೆಲ್ಲ ದೇವರಲ್ಲಿ ಬೇಡಿಕೊಂಡಿದ್ದೇವೆ. ನನಗೆ ನನ್ನದೇಯಾದ ವರ್ಚಸ್ಸು, ಗೌರವವಿದೆ. 2008ರಲ್ಲಿ ನಡೆದ ಕಹಿ ಘಟನೆಯನ್ನು ಆತ್ಮಾವಲೋಕನ ಮಾಡಿಕೊಂಡಿದ್ದೇವೆ‌. ಅದು ಯಾವುದೇ ಕಾರಣಕ್ಕೂ ಮರುಕಳಿಸಲ್ಲ. ಪದೇಪದೆ ಅದನ್ನೇ ಜ್ಞಾಪಿಸಬೇಡಿ. ನಾನು ಪಕ್ಷದ ನಿಷ್ಠಾವಂತ ಕಾರ್ಯಕರ್ತ ಎಂದು ಹೇಳಿದರು.

ಗೆದ್ದವರಿಗೆ ಅವಕಾಶ ನೀಡಬೇಕಿತ್ತು. ಆದರೆ, ಸೋತವರಿಗೆ ಕೊಟ್ಟಿದ್ದು ಸರಿಯಲ್ಲ. ಯಾರು ಅಂತಾ ನಾನು ಎಲ್ಲೂ ಹೇಳಿಲ್ಲ ಎಂದು ಲಕ್ಷ್ಮಣ್ ಸವದಿ ಅವರಿಗೆ ಸಚಿವ ಸ್ಥಾನ ನೀಡಿದ್ದಕ್ಕೆ ಪರೋಕ್ಷವಾಗಿ ಬೇಸರ ವ್ಯಕ್ತಪಡಿಸಿದರು. ನಾನು ಯಡಿಯೂರಪ್ಪ ಮನೆ ಬಾಗಿಲಿಗೆ ಹೋಗುವವನು. ಕುಮಾರಸ್ವಾಮಿ ಮನೆ ಬಾಗಿಲಿಗೆ ಹೋಗುವವನಲ್ಲ. ಸ್ವಾಭಿಮಾನಕ್ಕೆ ಧಕ್ಕೆ ಬಂದರೆ ರಾಜೀನಾಮೆ ಕೊಡುತ್ತೇನೆ. ಈ ಮಾತಿಗೆ ಈಗಲೂ ನಾನು ಬದ್ಧ ಎಂದರು.

ಮಾಜಿ ಸಿಎಂ ಕುಮಾರಸ್ವಾಮಿ ನಮ್ಮ ಅಣ್ಣನಂತೆ. ಹಾಗಾಗಿ ಅವರ ಜೊತೆ ಗುರುತಿಕೊಂಡಿದ್ದೆ. ರಾಜೀನಾಮೆ ಕೊಡಿ ಅಂದಾಗ ನಾನು ದೂರ ಉಳಿದೆ. ಇವತ್ತಿನವರೆಗೂ ಖಾಸಗಿಯಾಗಿ ಅವರನ್ನು ಭೇಟಿಯಾಗಿಲ್ಲ ಎಂದು ಸ್ಪಷ್ಟಪಡಿಸಿದರು. ಮೊಣಕಾಲುದ್ದ ನೀರಲ್ಲಿ ತೆಪ್ಪ ಓಡಿಸಿದ ವಿಚಾರಕ್ಕೆ ಪ್ರತಿಕ್ರಿಯಿಸಿದ ರೇಣುಕಾಚಾರ್ಯ, ಗೋಳಿಕೊಪ್ಪದಲ್ಲಿ ಪ್ರವಾಹ ಪರಿಸ್ಥಿತಿ ಬಂದಿತ್ತು. ಆಗ ಅಲ್ಲಿನವರ ಬಲವಂತಕ್ಕೆ ತೆಪ್ಪದಲ್ಲಿ ಹೋಗಿದ್ದೆ. ವಯಸ್ಸಾದ ಮುದುಕ ಹುಟ್ಟು ಹಾಕ್ತಾನೆ ಅಂತಾ ನಾನೇ ಹಾಕಿದ್ದೆ. ದಡಕ್ಕೆ ಬಂದಾಗ ಜನ ಎಳೆದು ತಂದರು. ಆದರೆ, ಅದಕ್ಕೆ ಬೇರೆಯದೇ ಅರ್ಥ ಕೊಟ್ಟರೆ ಹೇಗೆ? ಎಂದು ಪ್ರಶ್ನಿಸಿದರು.

Intro:ಬೆಂಗಳೂರು : ನನ್ನ ಗುರಿ ಮಂತ್ರಿ ಸ್ಥಾನ ಅಲ್ಲ. ಮಂತ್ರಿ ಸ್ಥಾನಕ್ಕೆ ನಾನು ಲಾಭಿ ಮಾಡಲ್ಲ. ನಾನು ಪ್ರಭುದ್ದ ರಾಜಕಾರಣಿಯಾಗಿ ಬೆಳೆಯಬೇಕು‌. ನಾನು ಈಗಲೂ ರಾಜಕೀಯದಲ್ಲಿ ಅಂಬೆಗಾಲಿಡುತ್ತಿದ್ದೇನೆ ಎಂದು ಬಿಜೆಪಿ ಶಾಸಕ ಎಂ.ಪಿ.ರೇಣುಕಾಚಾರ್ಯ ಹೇಳಿದ್ದಾರೆ.Body:ವಿಧಾನಸೌಧದಲ್ಲಿ ಇಂದು ಸಂಜೆ ಸುದ್ದಿಗೋಷ್ಠಿಯಲ್ಲಿ ಮಾತಮಾಡಿದ ಅವರು, ಮಂತ್ರಿ ಸ್ಥಾನ ಸಿಗದೇ ಇದ್ದದ್ದಕ್ಕೆ ಬೇಸರಗೊಂಡಿದ್ದ ನಮ್ಮ ಕಾರ್ಯಕರ್ತರನ್ನು ಸಮಾಧಾನ ಪಡಿಸಿದ್ದೇನೆ‌. ಹತ್ತು ಹದಿನೈದು ದಿನಗಳ ಹಿಂದೆಯೇ ಹೊನ್ನಾಳಿಯಲ್ಲಿ ನಾನು ಸಚಿವ ಸ್ಥಾನದ ಆಕಾಂಕ್ಷಿಯಲ್ಲ ಎಂದು ಹೇಳಿದ್ದೆ. ನನಗೆ ಭಂಡಧೈರ್ಯ‌. ಹೇಳಬೇಕಾದುದನ್ನು ಎದುರಿಗೆ ನೇರವಾಗಿ ಝಾಡಿಸಿ ಬಿಡುತ್ತೇನೆ‌. ರಾಮನಿಗೆ ಆಂಜನೇಯ ಇದ್ದಂತೆ, ನಾನು ಯಡಿಯೂರಪ್ಪನವರಿಗೆ ಬಂಟ. ಅಂತಹವರ ವಿರುದ್ದ ನಾನು ಬಂಡಾಯ ಸಾರಲು ಸಾಧ್ಯವೇ ಇಲ್ಲ ಎಂದು ಸ್ಪಷ್ಟಪಡಿಸಿದರು.
ಬಿಜೆಪಿಯಲ್ಲಿ ಬಂಡಾಯವಿಲ್ಲ‌. ಅತೃಪ್ತಿ ಇಲ್ಲ. ಅದರೂ ನನ್ನ ಬಗ್ಗೆ ತಪ್ಪು ವರದಿಗಳು ಪ್ರಸಾರವಾಗುತ್ತಿವೆ. ನಾನು ಅತೃಪ್ತನೂ ಅಲ್ಲ, ಬಂಡಾಯ ನಾಯಕನೂ ಅಲ್ಲ ಎಂದು ಹೇಳಿದರು.
ಯಡಿಯೂರಪ್ಪ ಜತೆ 106 ಶಾಸಕರಿದ್ದಾರೆ. ಅವರು ಮೂರು ವರ್ಷ 10 ತಿಂಗಳು ಅಧಿಕಾರಾವಧಿ ಪೂರೈಸಬೇಕು. ಯಡಿಯೂರಪ್ಪ ಸಿಎಂ ಆಗಬೇಕು ಎಂದು ನಾವೆಲ್ಲ ದೇವರಲ್ಲಿ ಬೇಡಿಕೊಂಡಿದ್ದೇವೆ ಎಂದರು.
ನನಗೆ ನನ್ನದೇ ಆದ ವರ್ಚಸ್ಸು, ಗೌರವ ಹೊಂದಿರುವ ವ್ಯಕ್ತಿ ನಾನು. 2008 ರಲ್ಲಿ ನಡೆದ ಕಹಿ ಘಟನೆಯನ್ನು ಆತ್ಮಾವಲೋಕನ ಮಾಡಿಕೊಂಡಿದ್ದೇವೆ‌. ಅದು ಯಾವುದೇ ಕಾರಣಕ್ಕೂ ಮರುಕಳಿಸಲ್ಲ‌. ಪದೇ ಪದೇ ಅದನ್ನೇ ಜ್ಞಾಪಿಸಬೇಡಿ. ನಾನು ಪಕ್ಷದ ನಿಷ್ಟಾವಂತ ಕಾರ್ಯಕರ್ತ ಎಂದು ಹೇಳಿದರು.
ಇಂದು ಸಂಜೆ ನಾವು ಕೆಲವು ಶಾಸಕರು ಯಡಿಯೂರಪ್ಪನವರನ್ನು ಭೇಟಿ ಮಾಡುತ್ತಿದ್ದೇವೆ. ನಿನ್ನೆ ಬಾಲಚಂದ್ರ ಜಾರಕಿಹೊಳಿ ಭೇಟಿ ಮಾಡಿದ್ದರು. ಇಂದು ಇನ್ನು ಕೆಲವು ಶಾಸಕರು ತಮ್ಮ ಕ್ಷೇತ್ರದ ಅಭಿವೃದ್ದಿಯ ಕಾರಣಕ್ಕಾಗಿ ಸಿಎಂ ಅವರನ್ನು ಭೇಟಿ ಮಾಡುತ್ತಿದ್ದೇವೆ ಎಂದರು.
ಗೆದ್ದವರಿಗೆ ಅವಕಾಶ ನೀಡಬೇಕಿತ್ತು. ಆದರೆ ಸೋತವರಿಗೆ ಕೊಟ್ಟಿದ್ದು ಸರಿಯಲ್ಲ. ಯಾರು ಅಂತ ನಾನು ಎಲ್ಲೂ ಹೇಳಿಲ್ಲ ಎಂದು ಲಕ್ಷ್ಮಣ್ ಸವದಿ ಅವರಿಗೆ ಸಚಿವ ಸ್ಥಾನ ನೀಡಿದ್ದಕ್ಕೆ ಪರೋಕ್ಷವಾಗಿ ಬೇಸರ ವ್ಯಕ್ತಪಡಿಸಿದರು.
ನಾನು ಯಡಿಯೂರಪ್ಪ ಮನೆ ಬಾಗಿಲಿಗೆ ಹೋಗುವವನು. ಕುಮಾರಸ್ವಾಮಿ ಮನೆ ಬಾಗಿಲಿಗೆ ಹೋಗುವವನಲ್ಲ. ಸ್ವಾಭಿಮಾನಕ್ಕೆ ಧಕ್ಕೆ ಬಂದರೆ ರಾಜೀನಾಮೆ ಕೊಡ್ತೇನೆ. ಈ ಮಾತಿಗೆ ಈಗಲೂ ನಾನು ಬದ್ಧ ಎಂದರು.
ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ನಮ್ಮ ಒಳ್ಳೆಯ ಅಣ್ಣನಂತ ಸ್ನೇಹಿತರು. ಹಾಗಾಗಿ ಅವರ ಜೊತೆ ಗುರ್ತಿಸಿಕೊಂಡಿದ್ದೆ. ರಾಜೀನಾಮೆ ಕೊಡಿ ಅಂದಾಗ ನಾನು ದೂರ ಉಳಿದೆ. ಇವತ್ತಿನವರೆಗೂ ಖಾಸಗಿಯಾಗಿ ಅವರನ್ನು ಭೇಟಿಯಾಗಿಲ್ಲ ಎಂದು ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿರುವುದನ್ನು ಅಲ್ಲಗಳೆದರು.
ಮೊಣಕಾಲುದ್ದ ನೀರಲ್ಲಿ ತೆಪ್ಪ ಓಡಿಸಿದ ವಿಚಾರಕ್ಕೆ ಪ್ರತಿಕ್ರಿಯಿಸಿದ ರೇಣುಕಾಚಾರ್ಯ ಅವರು, ಗೋಳಿಕೊಪ್ಪದಲ್ಲಿ ಪ್ರವಾಹ ಪರಿಸ್ಥಿತಿ ಬಂದಿತ್ತು. ಆಗ ಅಲ್ಲಿನವರ ಬಲವಂತಕ್ಕೆ ತೆಪ್ಪದಲ್ಲಿ ಹೋಗಿದ್ದೆ. ವಯಸ್ಸಾದ ಮುದುಕ ಹುಟ್ಟು ಹಾಕ್ತಾನೆ ಅಂತ ನಾನೇ ಹಾಕಿದ್ದೆ. ದಡಕ್ಕೆ ಬಂದಾಗ ಜನ ಎಳೆದು ತಂದರು.
ಅದಕ್ಕೆ ಬೇರೆಯದೇ ಅರ್ಥ ಕೊಟ್ಟರೆ ಹೇಗೆ? ಎಂದರು.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.