ETV Bharat / state

ಪರಿಹಾರ ವಿಚಾರವನ್ನು ಹಾದಿ ಬೀದಿಯಲ್ಲಿ ಚರ್ಚಿಸದೆ ಪ್ರಧಾನಿಗೆ ಮನವರಿಕೆ ಮಾಡಿ: ರೇಣುಕಾಚಾರ್ಯ - ಜೆಡಿಎಸ್ ಶಾಸಕ ಶ್ರೀನಿವಾಸ್

ಹಾದಿ ಬೀದಿಯಲ್ಲಿ ದಯಮಾಡಿ ಪರಿಹಾರ ಸಂಬಂಧ ಚರ್ಚೆ ಮಾಡದೆ, ಪ್ರಧಾನಿಗೆ ಮನವರಿಕೆ ಮಾಡಿ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ಮನವಿ ಮಾಡಿದ್ದಾರೆ.

ಎಂ ಪಿ ರೇಣುಕಾಚಾರ್ಯ
author img

By

Published : Oct 4, 2019, 5:31 PM IST

Updated : Oct 4, 2019, 5:41 PM IST

ಬೆಂಗಳೂರು: ಹಾದಿ ಬೀದಿಯಲ್ಲಿ ದಯಮಾಡಿ ನೆರೆ ಪರಿಹಾರ ವಿಚಾರ ಚರ್ಚಿಸದೆ ಪ್ರಧಾನಿಗೆ ರಾಜ್ಯದ ಸಮಸ್ಯೆಯನ್ನು ಮನವರಿಕೆ ಮಾಡಿ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ಮನವಿ ಮಾಡಿದ್ದಾರೆ.

ರೇಣುಕಾಚಾರ್ಯ ಮಾತನಾಡಿದ್ದಾರೆ
ವಿಕಾಸಸೌಧದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಮೈತ್ರಿ ಸರ್ಕಾರ ಖಜಾನೆ ಲೂಟಿ ಮಾಡಿದೆ. ಆದರೂ ನೆರೆ ಪರಿಹಾರ ನಿಂತಿಲ್ಲ. ಖಜಾನೆ ಖಾಲಿಯಾಗಿರುವುದರಿಂದ ತಾತ್ಕಾಲಿಕವಾಗಿ ಕಷ್ಟ ಆಗಿರಬಹುದು. ಆದರೆ ಸಂತ್ರಸ್ತರಿಗೆ ಪರಿಹಾರ ‌ನೀಡುವಲ್ಲಿ ಸರ್ಕಾರ ಹಿಂದೆ ಬಿದ್ದಿಲ್ಲ. ಸಿಎಂ ಸಂಪನ್ಮೂಲ ಕ್ರೂಢೀಕರಿಸುವ ಕೆಲಸ‌ ಮಾಡುತ್ತಿದ್ದಾರೆ. ಪ್ರಧಾನಿಯವರಿಗೂ ಕರ್ನಾಟಕದ ಬಗ್ಗೆ ವಿಶೇಷ ಕಾಳಜಿ ಇದೆ. ಆದಷ್ಟು ಬೇಗ ಹಣ ಬಿಡುಗಡೆ ಮಾಡುವ ವಿಶ್ವಾಸ ಇದೆ. ಈ ಬಗ್ಗೆ ಕಾಂಗ್ರೆಸ್ ಹಾಗೂ ಜೆಡಿಎಸ್ ನವರು ರಾಜಕಾರಣ ಮಾಡಬಾರದು ಎಂದು ಮನವಿ ಮಾಡಿದರು.
ಡಿಸಿಎಂ ಸವದಿ ವಿರುದ್ಧ ಗರಂ:
ನೆರವು ಕೇಳಲು ಬಂದ ಸಂಸತ್ರಸ್ತರ ಬಗ್ಗೆ ವಿವಾದಾತ್ಮಕ ಹೇಳಿಕೆ‌ ನೀಡಿದ ಡಿಸಿಎಂ ಲಕ್ಷ್ಮಣ್ ಸವದಿ ವಿರುದ್ಧ ರೇಣುಕಾಚಾರ್ಯ ಅಸಮಾಧಾನ ವ್ಯಕ್ತಪಡಿಸಿದರು. ಸವದಿ ಬಳಿ ಸಾವಿರಾರು ಎಕರೆ ಜಮೀನು ಇರಬಹುದು. ಅವರು ಶ್ರೀಮಂತರಿರಬಹುದು.‌ ಆದರೆ ಸಂತ್ರಸ್ತರು ಬಂದಾಗ ಹಾಗೆ ಮಾತನಾಡುವುದು ಸರಿಯಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಸಿಎಂ ಬಗ್ಗೆ ಮಾತನಾಡಿದರೆ ಹುಷಾರ್:
ನಮ್ಮ ಸಿಎಂ ಬಗ್ಗೆ ಜೆಡಿಎಸ್ ಶಾಸಕ ಶ್ರೀನಿವಾಸ್ ಮತ್ತು ಸಿ.ಎಂ.ಇಬ್ರಾಹಿಂ ಏಕವಚನದಲ್ಲಿ ಮಾತನಾಡುತ್ತಿದ್ದಾರೆ. ಇಬ್ರಾಹಿಂ ಮತ್ತು ಶ್ರೀನಿವಾಸ್‌ಗೆ ಎಚ್ಚರಿಕೆ ಕೊಡುತ್ತೇನೆ. ಎಲುಬು ಇಲ್ಲದ ನಾಲಿಗೆಯನ್ನು ಹರಿಬಿಟ್ಟರೆ ಜನ‌ ಒಪ್ಪಲ್ಲ‌ ಎಂದರು.
14 ತಿಂಗಳು ಶ್ರೀನಿವಾಸ್ ಸಣ್ಣ ಕೈಗಾರಿಕಾ ಸಚಿವರಾಗಿದ್ದವರು. ದೇವೇಗೌಡರನ್ನು ತುಮಕೂರಿಗೆ ಕರೆತಂದು ಸೋಲಿಸಿದ ಮಹಾನುಭಾವ. ದೇವೇಗೌಡರ ವಿರುದ್ದವೇ ಮಾತನಾಡುತ್ತಾರೆ. ಈಗ ಸಿಎಂ ಬಗ್ಗೆ ಕೆಟ್ಟ ಪದ‌ ಬಳಸಿ, ಧೀರನಂತೆ, ಶೂರನಂತೆ, ವೀರನಂತೆ ಮಾಧ್ಯಮದಲ್ಲಿ ಹೇಳಿಕೆ ಕೊಟ್ಟರೆ ನೀನು ಧೀರನೂ ಆಗಲ್ಲ, ಶೂರನೂ ಆಗಲ್ಲ ಎಂದು ಕಿಡಿ ಕಾರಿದರು.

Intro:Body:KN_BNG_03_RENUKACHARYA_BYTE_SCRIPT_7201951

ಪರಿಹಾರ ಸಂಬಂಧ ಹಾದಿ ಬೀದಿಲಿ ಚರ್ಚೆ ಮಾಡದೆ ಪ್ರಧಾನಿಗೆ ಮನವರಿಕೆ ಮಾಡಿ: ರೇಣುಕಾಚಾರ್ಯ

ಬೆಂಗಳೂರು: ರಾಜ್ಯ ಇವತ್ತು 25 ಬಿಜೆಪಿ ಸಂಸದರನ್ನು ನೀಡಿದ್ದು, ಹಾದಿ ಬೀದಿಲಿ ದಯಮಾಡಿ ಚರ್ಚೆ ಮಾಡದೆ, ಪ್ರಧಾನಿಗೆ ಪರಿಹಾರ ಹಣ ನೀಡುವಮನತೆ ಮನವರಿಕೆ ಮಾಡಿ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ಮನವಿ ಮಾಡಿದರು.

ವಿಕಾಸೌಧದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಪರಿಹಾರ ಸಂಬಂಧ ಹಾದಿ ಬೀದಿಲಿ ಚರ್ಚೆ ಮಾಡಿದರೆ, ಪಕ್ಷಕ್ಕೆ ಮುಜುಗರ ಆಗುತ್ತದೆ. ನಮ್ಮ‌ ಸಂಸದರು ಕೇಂದ್ರ‌ ಮಂತ್ರಿಗಳಿಗೆ ಈ ಬಗ್ಗೆ ಮನವಿ ಮಾಡುತ್ತೇನೆ ಎಂದು ಪರೋಕ್ಷವಾಗಿ ಅಸಮಾಧಾನ‌ ವ್ಯಕ್ತಪಡಿಸಿದರು.

ಮೈತ್ರಿ ಸರ್ಕಾರ ಖಜಾನೆ ಲೂಟಿ ಮಾಡಿದೆ. ಆದರೂ ನೆರೆ ಪರಿಹಾರ ನಿಂತಿಲ್ಲ. ಖಜಾನೆ ಖಾಲಿಯಾಗಿರುವುದರಿಂದ ತಾತ್ಕಾಲಿಕ ವಾಗಿ ಕಷ್ಟ ಆಗಿರಬಹುದು. ಆದರೆ ಸಂತ್ರಸ್ತರಿಗೆ ಪರಿಹಾರ ‌ನೀಡುವಲ್ಲಿ ಹಿಂದೆ ಬಿದ್ದಿಲ್ಲ. ಸಿಎಂ ಸಂಪನ್ಮೂಲ ಕ್ರೋಢೀಕರಿಸುವ ಕೆಲಸ‌ ಮಾಡುತ್ತಿದ್ದಾರೆ. ಪ್ರಧಾನಿ ಮೋದಿಯವರನ್ನು ಸ್ವತಂತ್ರವಾಗಿ ‌ಭೇಟಿ‌ ಮಾಡಲು ಅವಕಾಶ ಇದೆ. ಪ್ರಧಾನಿಯನ್ನು ಭೇಟಿಯಾಗಿ ಪರಿಹಾರ ಬಿಡುಗಡೆಗೆ ಮನವಿ‌‌ ಮಾಡಲು ವಿನಂತಿ‌ ಮಾಡುತ್ತೇನೆ ಎಂದು ತಿಳಿಸಿದರು.

ಆದಷ್ಟು ಬೇಗ ಹಣ ಬಿಡುಗಡೆ ಮಾಡುವ ವಿಶ್ವಾಸ ಇದೆ. ಈ ಬಗ್ಗೆ ಕಾಂಗ್ರೆಸ್ ಹಾಗು ಜೆಡಿಎಸ್ ನವರು ರಾಜಕಾರಣ ಮಾಡಬಾರದು ಎಂದು ಮನವಿ ಮಾಡಿದರು.

ಡಿಸಿಎಂ ಸವದಿ ವಿರುದ್ಧ ಗರಂ:

ನೆರವು ಕೇಳಲು ಬಂದ ಸಂಸತ್ರಸ್ತರ ಬಗ್ಗೆ ವಿವಾದಾತ್ಮಕ ಹೇಳಿಕೆ‌ ನೀಡಿದ ಡಿಸಿಎಂ ಲಕ್ಷ್ಮಣ್ ಸವದಿ ವಿರುದ್ಧ ರೇಣುಕಾಚಾರ್ಯ ಅಸಮಾಧಾನ ವ್ಯಕ್ತಪಡಿಸಿದರು.

ಸವದಿ ಬಳಿ ಸಾವಿರಾರು ಎಕರೆ ಜಮೀನು ಇರಬಹುದು. ಅವರು ಶ್ರೀಮಂತರಿರ ಬಹುದು.‌ ಆದರೆ ಸಂತ್ರಸ್ತರು ಬಂದಾಗ ಹಾಗೆ ಮಾತನಾಡುವುದು ಸರಿಯಲ್ಲ. ನಿಮ್ಮಲ್ಲಿ ಸಾವಿರಾರು ಕೋಟಿ ಇರಬಹುದು. ಜನ ನಮ್ಮನ್ನು ಆಯ್ಕೆ ಮಾಡಿದ್ದು, ಅವರ ದುಃಖ ದುಮ್ಮಾನವನ್ನು ಕೇಳಿ, ಅವರಿಗೆ ಪರಿಹಾರ ನೀಡುವುದು ನಮ್ಮ ಕರ್ತವ್ಯ. ಆ ರೀತಿ ಮಾತನಾಡುವುದು ಸರಿಯಲ್ಲ‌ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ನನ್ನ‌ ಕಷ್ಟ ಹೇಳಿದರೂ ಯಾರು ಕೇಳಲ್ಲ. ಅದನ್ನು ಪರಿಹರಿಸುವುದು ನಮ್ಮ ಕರ್ತವ್ಯ. ಅವರ ಸಮಸ್ಯೆ ಆಲಿಸಬೇಕು ಎಂದು ತಿಳಿಸಿದರು.

ಸಿಎಂ ಬಗ್ಗೆ ಮಾತನಾಡಿದರೆ ಹುಷಾರ್:

ನಮ್ಮ ಸಿಎಂ ಬಗ್ಗೆ ಜೆಡಿಎಸ್ ಶಾಸಕ ಶ್ರೀನಿವಾಸ್ ಮತ್ತು ಸಿ.ಎಂ.ಇಬ್ರಾಹಿಂ ಏಕವಚನದಲ್ಲಿ ಮಾತನಾಡುತ್ತಿದ್ದಾರೆ. ಇಬ್ರಾಹಿಂ ಮತ್ತು ಶ್ರೀನಿವಾಸ್ ಗೆ ಎಚ್ಚರಿಕೆ ಕೊಡುತ್ತೇನೆ. ಎಲುಬು ಇಲ್ಲದ ನಾಲಿಗೆಯನ್ನು ಹರಿಬಿಟ್ಟರೆ ಜನ‌ ಒಪ್ಪಲ್ಲ‌. ಏನೆಲ್ಲ ಮಾತನಾಡಿದರೆ ಸರಿಯಿರಲ್ಲ ಎಂದು ಎಚ್ಚರಿಕೆ ನೀಡಿದರು.

14 ತಿಂಗಳು ಶ್ರೀನಿವಾಸ್ ಸಣ್ಣ ಕೈಗಾರಿಕಾ ಸಚಿವರಾಗಿದ್ದ ವರು. ದೇವೇಗೌಡರನ್ನು ತುಮಕೂರಿಗೆ ಕರೆತಂದು ಸೋಲಿಸಿದ ಮಹಾನುಭಾವ. ದೇವೇಗೌಡರ ವಿರುದ್ದವೇ ಮಾತನಾಡುತ್ತಾರೆ. ಈಗ ಸಿಎಂ ಬಗ್ಗೆ ಕೆಟ್ಟ ಪದ‌ ಬಳಸಿ, ಧೀರನಂತೆ, ಶೂರನಂತೆ, ವೀರನಂತೆ ಮಾದ್ಯಮದಲ್ಲಿ ಹೇಳಿಕೆ ಕೊಟ್ಟರೆ ನೀನು ಧೀರನೂ ಆಗಲ್ಲ, ಶೂರನೂ ಆಗಲ್ಲ ಎಂದು ಕಿಡಿ ಕಾರಿದರು.

ಜೋಕರ್ ಸಿ.ಎಂ.ಇಬ್ರಾಹಿಂ ಮಾತೆತ್ತಿದ್ದರೆ, ನಾನು ಹುಟ್ಟಿಸಿದ‌ ಮಕ್ಕಳು ಹೇಳ್ತಾರೆ. ನೀನು ಹುಟ್ಟಿಸಿದ ಮಕ್ಕಳಾದರೆ, ನಿಮ್ಮನ್ನು ಯಾಕೆ ಅವರು ಒಪ್ಪಿಲ್ಲ. ನಿಮಗೆ ಯೋಗ್ಯತೆ ಇಲ್ಲ.‌ ನಿಮ್ಮ ಮಕ್ಕಳು ನಿನ್ನನ್ನು ಕಾಪಾಡಿಲ್ಲ. ಇಬ್ರಾಹಿಂ ಬಹಳ ಪವಾಡ ಪುರುಷ. ಭದ್ರಾವತಿಯಲ್ಲಿ ಹಲವು ಹಲ್ಕಾ ಕೆಲಸ‌ ಮಾಡಿದ್ದೆ. ನೀನು ಮೊದಲು ಯಾವ ಪಕ್ಷದಲ್ಲಿ ಇದ್ದೆ. ನಾನು ಆ ಭಾಷೆ ಬಳಸಿದರೆ ತಪ್ಪಾಗುತ್ತದೆ. ನೀನು ಮೊದಲು ಜನತಾ ಪರಿವಾರದಲ್ಲಿ ಇದ್ದೆ, ಬಸವಣ್ಣನ ವಚನ‌ಹೇಳಿದ್ದೇ ಹೇಳಿದ್ದು. ಮಾಡಬಾರದು‌ ಮಾಡಿ ಜನತಾ ಪರಿವಾರಕ್ಕೆ ಕೈ ಕೊಟ್ಟೆ. ನಿಮ್ಮ ಜನ್ಮಕ್ಕೆ ಯಾರು ಕಾರಣ?. ನಿನಗೆ ಜನ್ಮ‌ಕೊಟ್ಟ ಪಕ್ಷ ಯಾವುದು. ಇಂದಿರಾ ಗಾಂಧಿಗೆ ಕೆಟ್ಟ ಭಾಷೆ ಬಳಸಿದೆ ಎಂದು ವಾಗ್ದಾಳಿ ನಡೆಸಿದರು.

ಅಸಂಬದ್ಧ ಪದ ಬಳಸಿದರೆ ನಮಗೂ ಆ ಭಾಷೆ ಬಳಸಲು ಬರುತ್ತದೆ. ನಿಮ್ಮಂಥ ಅಯೋಗ್ಯರಿಂದ ನೀತಿ ಪಾಠ ಕಲಿಯುವ ಅಗತ್ಯ ಇಲ್ಲ. ಶ್ರೀನಿವಾಸ್ ನ್ನು ಹುಚ್ಚು ಆಸ್ಪತ್ರೆಗೆ ಸೇರಿಸಬೇಕು ಎಂದು ಕಿಡಿ‌ಕಾರಿದರು.Conclusion:
Last Updated : Oct 4, 2019, 5:41 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.