ETV Bharat / state

'ಗ್ಯಾಲೋರ್ ಆಫ್ ಮಿಸ್ಟರೀಸ್' ಬಿಡುಗಡೆ ಮಾಡಿದ ನ್ಯಾ. ಸಂತೋಷ್​ ಹೆಗ್ಡೆ; ಬಾಲ ಕವಯತ್ರಿ ಬಗ್ಗೆ ಮೆಚ್ಚುಗೆ

ಹಲವಾರು ಪ್ರಶಸ್ತಿಗಳಿಗೆ ಭಾಜನರಾಗಿರುವ ಅಮನ ಜೆ. ಕುಮಾರ್ ನಾಲ್ಕನೇ ಕೃತಿಯನ್ನು ಮಾಜಿ ಲೋಕಾಯುಕ್ತ ನ್ಯಾಯಮೂರ್ತಿ ಎನ್. ಸಂತೋಷ್ ಹೆಗ್ಡೆ ಬಿಡುಗಡೆಗೊಳಿಸಿ ಶುಭ ಹಾರೈಸಿದ್ದಾರೆ.

author img

By ETV Bharat Karnataka Team

Published : Dec 31, 2023, 4:15 PM IST

Updated : Dec 31, 2023, 5:02 PM IST

Galore of Mysteries was released by N. Santosh Hegde.
'ಗ್ಯಾಲೋರ್ ಆಫ್ ಮಿಸ್ಟರೀಸ್ ಕೃತಿಯನ್ನು ಎನ್.ಸಂತೋಷ್ ಹೆಗ್ಡೆ ಬಿಡುಗಡೆಗೊಳಿಸಿದರು.
ಎನ್.ಸಂತೋಷ್ ಹೆಗ್ಡೆ ಗ್ಯಾಲೋರ್ ಆಫ್ ಮಿಸ್ಟರೀಸ್' ಬಿಡುಗಡೆಗೊಳಿಸಿದರು.

ಬೆಂಗಳೂರು: ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬಂತೆ ಸಾಹಿತ್ಯದಲ್ಲಿ ಆಸಕ್ತಿ ಬೆಳೆಸಿಕೊಂಡಿರುವ ವಿದ್ಯಾರ್ಥಿನಿಯೊಬ್ಬಳು 16ನೇ ವಯಸ್ಸಿಗೆ ನಾಲ್ಕನೇ ಕೃತಿ ರಚಿಸಿ ಸಾಹಿತ್ಯ ಕ್ಷೇತ್ರದಲ್ಲಿ ಉನ್ನತ ಸಾಧನೆ ಮಾಡಿದ್ದಾರೆ.

ಹಲವಾರು ಪ್ರಶಸ್ತಿಗಳಿಗೆ ಭಾಜನರಾಗಿರುವ ವಿದ್ಯಾರ್ಥಿನಿ ಅಮನ ಜೆ.ಕುಮಾರ್ ಅವರ ನಾಲ್ಕನೇ ಕೃತಿಯನ್ನು ಮಾಜಿ ಲೋಕಾಯುಕ್ತ ನ್ಯಾಯಮೂರ್ತಿ ಎನ್. ಸಂತೋಷ್ ಹೆಗ್ಡೆ ಬಿಡುಗಡೆ ಮಾಡಿ ಬಾಲಕಿಗೆ ಶುಭ ಹಾರೈಸಿದ್ದಾರೆ. ರಾಜ್ಯಪಾಲರ ಸಂದೇಶ, ಇಸ್ರೋ ವಿಜ್ಞಾನಿಗಳ ಮುನ್ನುಡಿ ಈ ಕೃತಿಗೆ ಸಿಕ್ಕಿರುವುದು ಉದಯೋನ್ಮುಖ ಬಾಲ ಕವಯತ್ರಿ ಅಮನ ಜೆ. ಕುಮಾರ್ ಸಾಹಿತ್ಯ ಶ್ರೀಮಂತಿಕೆಗೆ ಹಿಡಿದ ಕೈಗನ್ನಡಿಯಾಗಿದೆ.

10ನೇ ವಯಸ್ಸಿಗೆ ಬರುವ ಹೊತ್ತಿಗೆ ಕವನ ಸಂಕಲನ ಬರೆದು ರಾಜ್ಯದ ಸಾಹಿತ್ಯ ಕ್ಷೇತ್ರದ ಗಮನ ಸೆಳೆದಿದ್ದ ವಿದ್ಯಾರ್ಥಿನಿ ಅಮನ ಜೆ.ಕುಮಾರ್ ಇದೀಗ 10ನೇ ತರಗತಿಗೆ ಬರುವಷ್ಟರಲ್ಲಿ ನಾಲ್ಕನೇ ಕೃತಿಯನ್ನು ರಚಿಸಿ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ. ಅಮನ ಅವರ ನಾಲ್ಕನೇ ಪುಸ್ತಕ ಗ್ಯಾಲೋರ್ ಆಫ್ ಮಿಸ್ಟರೀಸ್ (Galore of Mysteries) ಅನ್ನು ಸುಪ್ರೀಂ ಕೋರ್ಟ್ ನ ನಿವೃತ್ತ ನ್ಯಾಯಮೂರ್ತಿ ಹಾಗೂ ಮಾಜಿ ಲೋಕಾಯುಕ್ತ ಎನ್. ಸಂತೋಷ್ ಹೆಗ್ಡೆ ಬಿಡುಗಡೆಗೊಳಿಸಿದರು.

ಸಂತೋಷ್​ ಹೆಗ್ಡೆ ಮೆಚ್ಚುಗೆ: ತಮ್ಮ ಕಚೇರಿಯಲ್ಲಿ ಅಮನ ರಚಿಸಿದ ಗ್ಯಾಲೋರ್ ಆಫ್ ಮಿಸ್ಟರೀಸ್ ಕೃತಿಯನ್ನು ನ್ಯಾ. ಎನ್. ಸಂತೋಷ್ ಹೆಗ್ಡೆ ಅನಾವರಣಗೊಳಿಸಿದರು. ಅಮನ ರಚಿಸಿರುವ ಗ್ಯಾಲೋರ್ ಆಫ್ ಮಿಸ್ಟರೀಸ್ ಬಿಡುಗಡೆಗೊಳಿಸಲು ಬಹಳ ಸಂತಸವಾಯಿತು, ಇದು ಬಹಳ ಸುಂದರ ಕೃತಿಯಾಗಿದೆ. ಓದುಗರು ಈ ಕೃತಿ ಮೆಚ್ಚುತ್ತಾರೆ ಎನ್ನುವ ನಂಬಿಕೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿ ವಿದ್ಯಾರ್ಥಿನಿ ಅಮನ ಸಾಧನೆಗ ಮೆಚ್ಚುಗೆ ವ್ಯಕ್ತಪಡಿಸಿದರು.

ಗ್ಯಾಲೋರ್ ಆಫ್ ಮಿಸ್ಟರೀಸ್ ಕೃತಿ: ಇನ್ನು, ಈ ಕೃತಿಯಲ್ಲಿ ರಾಜ್ಯಪಾಲ ಥಾವರ್ ಚಂದ್ರ ಗೆಹ್ಲೋಟ್ ಅವರ ಸಂದೇಶವೂ ಇದೆ. ಇದರ ಜೊತೆ ಈ ಪುಸ್ತಕಕ್ಕೆ ಮುನ್ನುಡಿಯನ್ನು ಇಸ್ರೋ ವಿಜ್ಞಾನಿ ಚಂದ್ರಯಾನ-3 ಪ್ರಾಜೆಕ್ಟ್ ಡೈರೆಕ್ಟರ್ ಡಾ. ಪಿ. ವೀರ ಮುತ್ತುವೇಲ್ ಬರೆದಿದ್ದಾರೆ. ಇದು ಅಮನ ಅವರ 4ನೆಯ ಪುಸ್ತಕ ಹಾಗೂ ಇದು ಮೊದಲ fiction writing ಪುಸ್ತಕವಾಗಿದೆ. ಗ್ಯಾಲೋರ್ ಆಫ್ ಮಿಸ್ಟರೀಸ್("Galore of Mysteries") ಪುಸ್ತಕವು, ಕವನ ಹಾಗೂ ಕಿರು ಕಥೆಗಳಿಂದ ಸಂಗ್ರಹವಾಗಿದ್ದು ರಹಸ್ಯಗಳ ಕೌತುಕವನ್ನು ಒಳಗೊಂಡಿದೆ. ಇದು ಸಾಹಸಮಯವಾಗಿದ್ದು ಭಯಾನಕ ಹಾಗೂ ಹಾಸ್ಯದಿಂದ ಕೂಡಿ ಓದುಗರನ್ನು ಪ್ರತಿಪುಟದಲ್ಲಿಯೂ ಕಲ್ಪನಾ ಲೋಕಕ್ಕೆ ಕರೆದೊಯ್ಯುವ ಆಕರ್ಷಣೆಯನ್ನು ಹೊಂದಿದೆ.

ಬಾಲ ಕವಯತ್ರಿಯ ಸಾಹಿತ್ಯ ಕೃಷಿ: ಕೆಎಸ್ಆರ್​ಟಿಸಿ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಡಾ. ಲತಾ ಟಿ. ಎಸ್ ಹಾಗೂ ಜೈವಂತ್ ಕುಮಾರ್ ಅವರ ಮಗಳಾದ ಅಮನ 6ನೇ ತರಗತಿಯಲ್ಲಿದ್ದಾಗ ಇಂಗ್ಲಿಷ್ ಕವನಗಳನ್ನು ಬರೆಯಲು ಪ್ರಾರಂಭಿಸಿದ್ದರು. ಅವರ ಪ್ರಥಮ ಕವನ "Echoes of Soulful Poems" ಎರಡನೇ "World Amidst the Words" ಹಾಗೂ “Lafzon ki Mhfil “ ಮೂರನೇ ಹಿಂದಿ ಕವನ ಸಂಕಲನವು ಈಗಾಗಲೇ ಅಮೇಜಾನ್, ಫ್ಲಿಪ್ ಕಾರ್ಟ್ ಸೇರಿದಂತೆ ಮತ್ತಿತರ ಕಡೆಗಳಲ್ಲಿ ಲಭ್ಯವಿದ್ದು, ನಾಲ್ಕನೇ ಕೃತಿ ಇದೀಗ ಲೋಕಾರ್ಪಣೆಯಾಗಿದೆ.

ಅಮನ ಬೆಂಗಳೂರಿನ ಬಿಷಪ್ ಕಾಟನ್ ಗರ್ಲ್ ಸ್ಕೂಲ್ ನಲ್ಲಿ 10ನೇ ತರಗತಿ ವ್ಯಾಸಂಗ ಮಾಡುತ್ತಿದ್ದು, ಹಾರ್ವರ್ಡ್​ ವಿಶ್ವ ವಿದ್ಯಾಲಯದಿಂದ "Masterpieces of World Literature" ಕೋರ್ಸ್ ಮಾಡಿದ್ದಾರೆ. ಓದಿನ ಜೊತೆ ಜೊತೆಯಲ್ಲೇ ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಪೋಷಕರ ಬೆಂಬಲದಲ್ಲಿ ಅಮನ ಅವರ ಸಾಹಿತ್ಯ ಹಾದಿ ಸಾಗುತ್ತಿದೆ.

ವಿದ್ಯಾರ್ಥಿ ಅಮನ ದಾಖಲೆಗಳು:

* ಭಾರತದ ಕಿರಿಯ ಕವಯಿತ್ರಿ ಇಂಡಿಯಾ ಬುಕ್ ಆಪ್ ರೆಕಾಡ್ಸ್ -2021
* ಏಷ್ಯಾ ಬುಕ್ ಆಪ್ ರೆಕಾಡ್ಸ್-2021 ಕಿರಿಯ ವಯಸ್ಸಿನಲ್ಲಿ ಕವಿತೆಗಳನ್ನು ಬರೆದಿರುವುದು
* ಕೌಟಿಲ್ಯ ವರ್ಷದ ಕಿರಿಯ ಕವಿ ಪ್ರಶಸ್ತಿ - 2021 ಗೋವಾದ ಗೌರವಾನ್ವಿತ ರಾಜ್ಯಪಾಲರು ಪ್ರಶಸ್ತಿ ಪ್ರದಾನ ಮಾಡಿದ್ದಾರೆ.
* ನೋಬಲ್ ಬುಕ್ ಆಪ್ ವರ್ಲ್ಡ್ ರೆಕಾರ್ಡ್ ನಲ್ಲಿ ದಾಖಲೆ ಕಿರಿಯ ಕವಯಿತ್ರಿ
* ವರ್ಲ್ಡ್ ರೆಕಾರ್ಡ್ ವಿಶ್ವವಿದ್ಯಾಲಯ ಪ್ರವೇಶ 2022, ಸತತ ವರ್ಷಗಳಲ್ಲಿ ಕವನ ಸಂಕಲನ ಪುಸ್ತಕಗಳನ್ನು ಪ್ರಕಟಿಸಿದ ಕಿರಿಯ ಕವಿಯಿತ್ರಿ
* ಗೋಲ್ಡನ್ ಬುಕ್ ಆಪ್ ವರ್ಲ್ಡ್ ರೆಕಾರ್ಡ್ಸ್ 2022 ನಲ್ಲಿ ದಾಖಲೆ
* ವಂಡರ್ ಬುಕ್ ಆಪ್ ವರ್ಲ್ಡ್ ರೆಕಾರ್ಡ್ಸ್ ಕಿರಿಯ ಕವಯತ್ರಿ
* ಇಂಟರ್ನ್ಯಾಷನಲ್ ಬುಕ್ಅಪ್ ರೆಕಾರ್ಡ್ಸ್ ಕಿರಿಯ ಕವಿಯತ್ರಿ.
ಇಲ್ಲಿಯವರೆಗೆ ಇಂಗ್ಲಿಷ್ ಮತ್ತು ಹಿಂದಿಯಲ್ಲಿ 500ಕ್ಕೂ ಹೆಚ್ಚು ಕವನಗಳನ್ನು ಬರೆದಿರುವ ಅಮನ ಅಕ್ಷರಾಭ್ಯಾಸದ ಆರಂಭದಲ್ಲೇ ಸಾಹಿತ್ಯ ಕ್ಷೇತ್ರದಲ್ಲಿ ತೊಡಗಿಸಿಕೊಂಡು ವಿದ್ಯಾರ್ಥಿ ಸಮೂಹಕ್ಕೆ ಮಾದರಿಯಾಗಿದ್ದಾರೆ.

ಇದನ್ನೂಓದಿ:10ನೇ ವಯಸ್ಸಿಗೆ 3 ಪುಸ್ತಕ ಬರೆದ ಅಭಿಜೀತಾ ಗುಪ್ತಾ.. ಈ ಪುಟಾಣಿ ಯಾರ ಮರಿ ಮೊಮ್ಮಗಳು ಗೊತ್ತಾ?

Last Updated : Dec 31, 2023, 5:02 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.