ETV Bharat / state

ಮಠ, ಸಂಘ-ಸಂಸ್ಥೆಗಳ ಜೀರ್ಣೋದ್ಧಾರ, ಅಭಿವೃದ್ಧಿ ಕಾಮಗಾರಿಗಳಿಗೆ ಸರ್ಕಾರದಿಂದ ಹಣ ಬಿಡುಗಡೆ - ಮಠ, ಸಂಘ-ಸಂಸ್ಥೆಗಳ ಜೀರ್ಣೋದ್ಧಾರ

ಮಠ, ದೇವಸ್ಥಾನ, ಟ್ರಸ್ಟ್‌ಗಳಿಗೆ 49.75 ಕೋಟಿ ರೂ. ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದೆ.

government
ರಾಜ್ಯ ಸರ್ಕಾರ
author img

By

Published : Nov 13, 2020, 11:37 PM IST

ಬೆಂಗಳೂರು: 2019- 20 ನೇ ಸಾಲಿನ ಆಯವ್ಯಯದಲ್ಲಿ ಘೋಷಿಸಿದಂತೆ ರಾಜ್ಯದಲ್ಲಿರುವ 39 ಮಠ, ಸಂಘ-ಸಂಸ್ಥೆಗಳ ಜೀರ್ಣೋದ್ಧಾರ, ಅಭಿವೃದ್ಧಿ ಕಾಮಗಾರಿಗಳಿಗೆ ತಲಾ ಒಂದು ಕೋಟಿ ರೂ.ಗಳಂತೆ 39 ಕೋಟಿ ರೂ.ಗಳನ್ನು ಹಾಗೂ 2020-21 ನೇ ಸಾಲಿನ ಹೊಸ ಮಠ, ದೇವಸ್ಥಾನ, ಟ್ರಸ್ಟ್‌ಗಳಿಗೆ 49.75 ಕೋಟಿ ರೂ. ಸೇರಿದಂತೆ ಒಟ್ಟು 88.75 ಕೋಟಿ ರೂ.ಗಳನ್ನು ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ಇದರ ಮೊದಲ ಕಂತಿನ ಅನುದಾನ ಶೇ.50 ರಷ್ಟು ಹಣವನ್ನು ಆಯುಕ್ತರು ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿ ಇಲಾಖೆಗೆ ಬಿಡುಗಡೆ ಮಾಡಲಾಗಿದೆ. ಈ ಹಣವನ್ನು ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಅಧಿನಿಯಮದ 1999 ಹಾಗೂ ಅದರಡಿಯಲ್ಲಿ ರಚಿಸಿರುವ ನಿಯಮಗಳನ್ನು ಕಡ್ಡಾಯವಾಗಿ ಅನುಸರಿಸತಕ್ಕದ್ದು ಎಂದು ಕಂದಾಯ ಇಲಾಖೆ ಅಧೀನ ಕಾರ್ಯದರ್ಶಿ ಎಂ.ಎಲ್.ವರಲಕ್ಷ್ಮಿ ಆದೇಶ ಹೊರಡಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.